ವೈರಲ್ ವಿಡಿಯೋ… ಫೀಲ್ಡರ್ ಗಳಿಗೆ ನಮೋ ನಮ:, ಒಂದೇ ಬಾಲ್ ಮೇಲೆ 3 ಬಾರಿ ಕಳೆದುಕೊಂಡರು ರನ್ನೌಟ್ ಮಾಡುವ ಚಾನ್ಸ್!
ನಮಿಬಿಯಾ ಮತ್ತು ಐರ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಒಂದು ವಿಚಿತ್ರ ಮತ್ತು ಅಷ್ಟೇ ತಮಾಷೆಯ ಘಟನೆ ನೋಡಲು ಸಿಕ್ಕಿತು.
ನಮೀಬಿಯಾ ತಂಡವು t20 ವರ್ಲ್ಡ್ ಕಪ್ ನಲ್ಲಿ ಇತಿಹಾಸ ನಿರ್ಮಿಸಿದೆ. ಅತ್ಯಂತ ರೋಮಾಂಚಕ ಪಂದ್ಯದಲ್ಲಿ ಐರ್ಲ್ಯಾಂಡ್ ತಂಡವನ್ನು ಸೋಲಿಸಿ ನಮೀಬಿಯಾ ಸೂಪರ್ 12 ನಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿತು. ಸೂಪರ್ 12 ರಲ್ಲಿ ನಮಿಬಿಯ ತಂಡ ಈಗ ಭಾರತಕ್ಕೆ ಎದುರಿಸಬೇಕಾಗಿದೆ.
ಏತನ್ಮಧ್ಯೆ ನಮೀಬಿಯ ಮತ್ತು ಐರ್ಲೆಂಡ್ ಮಧ್ಯೆ ನಡೆದ ಈ ಪಂದ್ಯದಲ್ಲಿ ಒಂದು ವಿಚಿತ್ರ ಘಟನೆ ನೋಡಲು ಸಿಕ್ಕಿತು. ಐರ್ಲೆಂಡ್ ತಂಡ ತನ್ನ ಇನ್ನಿಂಗ್ಸ್ ನ ಕೊನೆಯ ಬಾಲ್ ಆಡುವಾಗ ಬಾಲ್ ಬ್ಯಾಟ್ ಗೆ ತಾಗಿ ವಿಕೆಟ್ ಹತ್ತಿರ ನಿಂತಿತ್ತು. ಆಗ ಬೌಲರ್ ಅದನ್ನು ಸ್ಟಂಪ್ಸ್ ಕಡೆಗೆ ಎಸೆದನು. ಆದರೆ ಬಾಲ್ ಸ್ಟಂಪ್ಸ್ ಗಳಿಗೆ ಬಡೆಯದೆ ಹಿಂದೆ ಹೋಯಿತು ಮತ್ತು ಬ್ಯಾಟ್ಸ್ಮನ್ ರನ್ ಔಟ್ ಆಗುವ ಅವಕಾಶ ತಪ್ಪಿತು.

ಆಮೇಲೆ ಆ ಬಾಲನ್ನು ಕೀಪರ್ ಕವರ್ ಮಾಡದೆ ಇದ್ದಾಗ ಬಾಲ್ ಬೌಂಡರಿ ಲೈನ್ ಹತ್ತಿರ ಹೋಯಿತು. ಅಲ್ಲಿಂದ ಫೀಲ್ಡರ್ ಮತ್ತೆ ಚಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದನು. ಆಗ ವಿಕೆಟ್ ಕೀಪರ್ ಪುನಃ ರನೌಟ್ ಮಾಡುವ ಚಾನ್ಸ್ ಕೈ ಚೆಲ್ಲಿದನು. ಆಮೇಲೆ ವಿಕೆಟ್ ಕೀಪರ್ ನು ಬೌಲರ್ ಎಂಡಿಗೆ ಥ್ರೋ ಮಾಡಿದನು. ಅಲ್ಲಿ ಮತ್ತೆ ಫೀಲ್ಡರ್ ನಿಂದ ಬ್ಯಾಟ್ಸ್ಮನ್ ಗೆ ರನ್ ಔಟ್ ಮಾಡುವ ಚಾನ್ಸ್ ಮಿಸ್ ಆಯಿತು.
ಹೀಗೆ ಬ್ಯಾಟ್ಸ್ಮನ್ ಗೆ ಒಂದೇ ಬಾಲ್ ಮೇಲೆ ಮೂರು ಬಾರಿ ರನೌಟ್ ಮಾಡುವ ಚಾನ್ಸ್ ನ್ನು ಫಿಲ್ಟರ್ಗಳು ಕೈಚೆಲ್ಲಿದರು. ಈ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳು ಓಡಿ ಒಟ್ಟು ಮೂರು ರನ್ ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಕ್ರಿಕೆಟ್ ಮೈದಾನದಲ್ಲಿ ಈ ರೀತಿಯ ದೃಶ್ಯಗಳು ತುಂಬಾ ಕಡಿಮೆ ಕಂಡುಬರುತ್ತವೆ. ಇಲ್ಲಿ ಒಂದು ಬಾಲ್ ಮೇಲೆ ಮೂರು ಬಾರಿ ರನೌಟ್ ಮಾಡುವ ಅವಕಾಶ ವಿದ್ದರೂ ಮೂರು ಬಾರಿ ಔಟ್ ಮಾಡದೆ ಪೀಲ್ಡರ್ ಗಳು ಅವಕಾಶವನ್ನು ತಪ್ಪಿಸಿಕೊಂಡರು.
ವಿಡಿಯೋ ನೋಡಿ
ಐರ್ಲ್ಯಾಂಡ್ ತಂಡವು ನಿಗದಿತ 20 ಓವರ್ ಗಳಲ್ಲಿ ಕೇವಲ 125 ರನ್ ಗಳನ್ನು ಕಲೆಹಾಕಿದರು. ನಮೀಬಿಯಾ ತಂಡದ ಕಡೆಯಿಂದ ಡೇವಿಡ್ ವಿಜಿ ಎರಡು ವಿಕೆಟ್ ಗಳನ್ನು ತೆಗೆದುಕೊಳ್ಳುವುದರ ಜೊತೆಗೆ 14 ಚೆಂಡುಗಳಲ್ಲಿ 28 ರನ್ಗಳನ್ನು ಬಾರಿಸಿ ತಂಡಕ್ಕೆ 18.3 ಓವರ್ ಗಳಲ್ಲಿಯೇ ಗೆಲ್ಲಿಸಿ ಕೊಟ್ಟರು.