ಹೊಸ ಮೊಬೈಲ್ ಖರೀದಿಗಾಗಿ ತನ್ನ ಪತ್ನಿಯನ್ನೇ ಮಾರಾಟ ಮಾಡಿದ 17 ವಯಸ್ಸಿನ ಪತಿರಾಯ!

ಮದುವೆಯಾದ ಕೇವಲ ಒಂದು ತಿಂಗಳ ನಂತರ ಪತಿ ತನಗೆ ಹೊಸ ಮೊಬೈಲ್ ಖರೀದಿಗಾಗಿ ಆತನ ಹತ್ತಿರ ಹಣ ವಿರದ ಕಾರಣ ಪತ್ನಿಯನ್ನೇ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯ ಕುಟುಂಬದ ವ್ಯಕ್ತಿಗಳು ಈ ಕುರಿತು ಪೊಲೀಸರಿಗೆ ದೂರು ನೀಡಿದಾಗ ಘಟನೆ ಎಲ್ಲರ ಎದುರಿಗೆ ಬಂದಿದೆ. ಅಷ್ಟಕ್ಕೂ ಈ ಪ್ರಕರಣ ಎಲ್ಲಿ ನಡೆದಿದೆ? ಹೇಗೆ ನಡೆದಿದೆ ? ಎಂಬುದು ತಿಳಿದುಕೊಳ್ಳೋಣ ಬನ್ನಿ.

ದಂಪತಿಗಳು ಹೊಟ್ಟೆಪಾಡಿಗಾಗಿ ರಾಜಾಸ್ಥಾನಕ್ಕೆ ಬಂದಿದ್ದರು.

ಇದೆಲ್ಲವೂ ರಾಜಸ್ಥಾನದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. 17 ವರ್ಷದ ಆ#ರೋಪಿಯು ಜುಲೈನಲ್ಲಿ ಒಡಿಶಾದಲ್ಲಿ ಅ#ಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಕೆಲಸದ ನಿಮಿತ್ತ ರಾಯಪುರ, ಝಾಶಿ ಮೂಲಕ ರಾಜಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಅಲ್ಲಿ ಇಟ್ಟಿಗೆ ಮಾಡುವ ಕೆಲಸವನ್ನೂ ಆರಂಭಿಸಿದರು. ಆದರೆ, ಒಂದು ತಿಂಗಳೊಳಗೆ ಅವನು ತನ್ನ ಹೆಂಡತಿಯನ್ನು ರಾಜಸ್ಥಾನದ ಬರಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ 55 ವರ್ಷದ ವ್ಯಕ್ತಿಗೆ ಮಾರಿದನು!

1 ಲಕ್ಷ 80 ಸಾವಿರ ರೂಪಾಯಿಗೆ ಪತ್ನಿಯ ಡೀಲ್ ಮಾಡಿದ್ದನು.

ಆ#ರೋಪಿ ಪತಿ ತನ್ನ ಪತ್ನಿಯನ್ನು 1 ಲಕ್ಷ 80 ಸಾವಿರ ರೂ.ಗೆ ಡೀಲ್ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ#ರೋಪಿಯು ಆಗಸ್ಟ್‌ನಲ್ಲಿ ತನ್ನ ಹೆಂಡತಿಯನ್ನು ಮಾರಾಟ ಮಾಡಿ ನಂತರ ತನ್ನ ಗ್ರಾಮಕ್ಕೆ ಹಿಂದಿರುಗಿದಾಗ, ಹುಡುಗಿಯ ಮನೆಯವರು ಈ ಬಗ್ಗೆ ವಿಚಾರಿಸಿದ್ದಾರೆ. ಆರೋಪಿಯು ಸ್ವತಃ ಪತ್ನಿಯೇ ತನ್ನನ್ನು ಏಕಾಂಗಿಯಾಗಿ ಬಿಟ್ಟಿದ್ದಾಳೆ ಎಂದು ಸುಳ್ಳು ಹೇಳಿದನು. ಈ ಮಾತು ಕೇಳಿ ಅನುಮಾನಗೊಂಡ ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಿದರು. ನಂತರ ಪೊಲೀಸರು ಆರೋಪಿಯ ಮೊಬೈಲ್‌ನಲ್ಲಿದ್ದ ಕರೆ ದಾಖಲೆ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಹೆಂಡತಿಯನ್ನು ಮಾರಿ ಆ ಹಣದಲ್ಲಿ ಮೊಬೈಲ್ ಖರೀದಿಸಿದ!

ಆರೋಪಿಯು ತನ್ನ ಪತ್ನಿಯನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸಿದ ಪರಿಯನ್ನು ಕೇಳಿ ಪೊಲೀಸರು ಮತ್ತು ಕುಟುಂಬ ಆಶ್ಚರ್ಯ ಪಟ್ಟಿದ್ದಾರೆ. ಈ ವ್ಯಕ್ತಿ “ಅಲ್ಲಿಯ 55 ವರ್ಷದ ವ್ಯಕ್ತಿಗೆ ತನ್ನ ಹೆಂಡತಿಯನ್ನು 1 ಲಕ್ಷ 80 ಸಾವಿರ ರೂಪಾಯಿಗೆ ಮಾರಾಟ ಮಾಡಿ, ಬಂದ ಹಣದಿಂದ ಒಂದು ಮೊಬೈಲ್ ತಗೆದುಕೊಂಡು, ನಂತರ ಪಂಚತಾರಾ ಹೋಟೆಲ್ ನಲ್ಲಿ ಕೆಲವು ದಿವಸಗಳ ವರೆಗೆ ಇದ್ದು ಅಲ್ಲಿಯೇ ಊಟ, ಉಪಚಾರ ಮಾಡಿದ್ದೇನೆ” ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಗ್ರಾಮಸ್ಥರು ಹೇಳುತ್ತಾರೆ, “ನಾವು ಅವಳನ್ನು ಖರೀದಿಸಿದ್ದೇವೆ”.

ಆ#ರೋಪಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಸಂತ್ರಸ್ತ ಬಾಲಕಿ ಎಲ್ಲಿದ್ದಾಳೆಂದು ಪತ್ತೆ ಹಚ್ಚಿದ ಬಳಿಕ ತಕ್ಷಣವೇ ರಾಜಸ್ಥಾನದ ಬರಾನ್ ಜಿಲ್ಲೆಗೆ ಧಾವಿಸಿದ್ದಾರೆ. ಆದರೆ, ಬಾಲಕಿಯನ್ನು ಮಾರಾಟ ಮಾಡಿದ ಗ್ರಾಮದಲ್ಲಿ ಗ್ರಾಮಸ್ಥರು ಪೊಲೀಸರಿಗೆ ಪ್ರತಿ#ರೋಧ ವ್ಯಕ್ತಪಡಿಸಿದ್ದಾರೆ. “ನಾವು ಅವಳನ್ನು 1 ಲಕ್ಷ 80 ಸಾವಿರಕ್ಕೆ ಖರೀದಿಸಿದ್ದೇವೆ. ಹಾಗಾಗಿ ನಾವು ಅವಳನ್ನು ಹೋಗಲು ಬಿಡುವುದಿಲ್ಲ” ಎಂದು ಪವಿತ್ರಾ ಗ್ರಾಮಸ್ಥರು ಹೇಳಿದರು. ಅಂತಿಮವಾಗಿ, ಹುಡುಗಿಯನ್ನು ಬಲ#ವಂತವಾಗಿ ಬಿಡುಗಡೆ ಮಾಡಲಾಯಿತು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ಸುಧಾರಣಾ ಗೃಹಕ್ಕೆ ರವಾನಿಸಲಾಗಿದೆ. ಆದರೆ ಅಪ್ರಾ#ಪ್ತ ಬಾಲಕಿಯನ್ನು ಖರೀದಿಸಿದ 55 ವರ್ಷದ ವ್ಯಕ್ತಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ತಿಳಿದಿಲ್ಲ.