ಕಟ್ಟಿಗೆಯ ಫರ್ನಿಚರಗಳಲ್ಲಿನ ಗೆದ್ದಲು(ಗೆಜ್ಜಲು) ತೊಡೆದುಹಾಕಲು ಸುಲಭವಾದ ಮನೆಮದ್ದು…!!

ಒಂದು ವೇಳೆ ನಿಮ್ಮ ಮನೆಯಲ್ಲಿಯ ಕಟ್ಟಿಗೆಯ ಪೀಠೋಪಕರಣಗಳಲ್ಲಿ ಸಣ್ಣ ರಂಧ್ರಗಳನ್ನು ಅಥವಾ ನಿಮ್ಮ ಪೀಠೋಪಕರಣಗಳ ಸುತ್ತಲೂ ಪುಡಿಯಂತೆ ಏನಾದ್ರೂ ನೀವು ಗಮನಿಸಿದರೆ, ಅರ್ಥಮಾಡಿಕೊಳ್ಳಿ. ನಿಮ್ಮ ಪೀಠೋಪಕರಣಗಳು ಗೆದ್ದಲಿನ ದಾಳಿಗೊಳಗಾಗಿವೆ ಅಂತ.

ಗೆದ್ದಲಿನ ಸಮಸ್ಯೆ ಮನೆಗಳಲ್ಲಿ ಕಾಣಬಹುದು. ಒಂದು ಸಲ ಗೆಜ್ಜಲು ಮನೆಯೊಳಗೆ ಪ್ರವೇಶಿಸಿದರೆ ಸಾಕು ಮನೆಯ ಕಟ್ಟಿಗೆಯ ಕ್ಯಾಬಿನೆಟ್‌ಗಳು, ಕುರ್ಚಿಗಳು, ಟೇಬಲ್‌ಗಳು ಮತ್ತು ಇತರ ಮರದ ವಸ್ತುಗಳನ್ನು ಕೆಲವೇ ದಿನಗಳಲ್ಲಿ ಹಾನಿಗೊಳಿಸಬಹುದು.

ಔಷಧಿಗಳು ಅಥವಾ ದ್ರವೌಷಧಗಳು ಗೆಜ್ಜಲುಗಳನ್ನು ಕಡಿಮೆ ಮಾಡುವುದಿಲ್ಲ. ಇಂದು ನಾವು ಮನೆಯಲ್ಲಿಯ ಗೆಜ್ಜಲು ತೊಡೆದುಹಾಕಲು ಮನೆಮದ್ದುಗಳ ಬಗ್ಗೆ ಹೇಳುವವರಿದ್ದೇವೆ. ಮನೆಯಲ್ಲಿಯ ಗೆಜ್ಜಲು ಹತ್ತಿರುವ ವಸ್ತುಗಳನ್ನು ಬಿಸಿಲಿನಲ್ಲಿ ಇರಿಸಿ. ಬಿಸಿಲಿನಿಂದ ಆ ಗೆದ್ದಲುಗಳು ಹೋಗಲಾಡಿಸಲು ಸಹಾಯವಾಗುತ್ತದೆ.

ಗೆದ್ದಲು ಹೋಗಲಾಡಿಸಲು ಒಂದು ಬಟ್ಟೆಯ ಮೇಲೆ ಸ್ವಲ್ಪ ವೈಟ್ ವಿನೆಗರ್ ತಗೆದುಕೊಳ್ಳಿ ಅದರಿಂದ ಈ ಸಮಸ್ಯೆಗಿಡಾದ ವಸ್ತುಗಳನ್ನು ಒರೆಸಿಕೊಳ್ಳಿ ಇದರಿಂದ ಗೆದ್ದಲು ಸತ್ತು ಹೋಗುವವು.

ಯಾವ ಸ್ಥಳದಲ್ಲಿ ಈ ಗೆದ್ದಲು ಹತ್ತಿದೆಯೋ ಆ ಸ್ಥಳದಲ್ಲಿ ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿ ಹೀಗೆ ಮಾಡುವದರಿಂದ ಅಲ್ಲಿದ್ದ ಗೆದ್ದಲು ಓಡಿ ಹೋಗುವವು. ಬೋರೆಕ್ಸ್ ಅಂದರೆ ಸೋಡಿಯಂ ಬೋರೇಟ್ ಫರ್ನಿಚರಗಳಿಗೆ ಹಚ್ಚುವದರಿಂದ ಈ ಕೀಟಗಳು ನಷ್ಟವಾಗಲು ಸಹಾಯ ವಾಗುವದು.

ಉಪ್ಪು ಕೂಡಾ ಈ ಗೆದ್ದಲು ಸಮಸ್ಯೆಯನ್ನು ದೂರ ಮಾಡುವಲ್ಲಿ ಉತ್ತಮ ಪದಾರ್ಥವಾಗಿದೆ. ಯಾವ ಜಾಗದಲ್ಲಿ ಗೆದ್ದಲು ಹತ್ತಿದೆಯೋ ಆ ಜಾಗದಲ್ಲಿ ಉಪ್ಪಿನ ನೀರನ್ನು ಸಿಂಪಡಿಸಿ. ಉಪ್ಪಿನ ಪ್ರಸಾರವಾಗುತ್ತಿದ್ದ ಹಾಗೆ ಅಲ್ಲಿದ್ದ ಗೆದ್ದಲು ಕೂಡಾ ಕಡಿಮೆಯಾಗುತ್ತದೆ.

ಮರದ ವಸ್ತು ಒಣಗಲು ಪ್ರಾರಂಭಿಸಿದರೆ, ಅದರ ಮೇಲೆ ಸಾಬೂನು ನೀರನ್ನು ಸಿಂಪಡಿಸಿ ಮತ್ತು ಇದರಿಂದಲೂ ಗೆಜ್ಜಲು ಹೋಗುತ್ತವೆ. ಮರದ ವಸ್ತುವು ಒಣಗಲು ಪ್ರಾರಂಭಿಸಿದರೆ, ಬೇವಿನ ಪುಡಿ ಅಥವಾ ಎಣ್ಣೆಯನ್ನು ಸಿಂಪಡಿಸುವುದರಿಂದ ಶುಷ್ಕತೆ ನಾಶವಾಗುತ್ತದೆ.

ಗೆದ್ದಲು ಹತ್ತ ಬಾರದೆಂದು ತಪ್ಪಿಸಲು ನಿಮ್ಮ ಮನೆಗೆ ಪೀಠೋಪಕರಣಗಳನ್ನು ಖರೀದಿಸುವಾಗ ಗೆದ್ದಲು ತಡೆಗಟ್ಟುವ ಮರವನ್ನು ಆರಿಸಿ. ಇಂತಹ ಕಟ್ಟಿಗೆಯ ಮೇಲೆ ಗೆದ್ದಲು ಹತ್ತುವ ಸಮಸ್ಯೆ ಬರುವದೇ ಇಲ್ಲ. ಶಿಸ್ವಿ, ಹಾಗೆಯೇ ಸಾಗ ಮತ್ತು ಮೊಹೋಗನಿ ಈ ಜಾತಿಯ ಕಟ್ಟಿಗೆಗಳಿಗೆ ಗೆದ್ದಲು ಹತ್ತುವದಿಲ್ಲ.