T20 ವರ್ಲ್ಡ್ ಕಪ್ ಭಾರತ ಪಾಕ್ ಹಣಾಹಣಿ; ಅಯ್ಯೋ, ಪಂದ್ಯ ನಡೆದಾಗ ಅಂಪಾಯರ್ ಮಲಗಿದ್ರಾ? ಏನಾಗಿದೆ ಈ ಫೋಟೋ ನೋಡಿ.

ದುಬೈ 24 ಅಕ್ಟೋ 21:- t20 ವರ್ಲ್ಡ್ ಕಪ್ ನಲ್ಲಿ ಭಾರತ ವಿರುದ್ಧದ ದೊಡ್ಡ ಪಂದ್ಯದಲ್ಲಿ ಭಾರತಕ್ಕೆ ಮಣಿಸಿ ಪಾಕಿಸ್ತಾನವು ಭರ್ಜರಿ ಎಂಟ್ರಿ ಮಾಡಿತು. ಎಡಗೈ ಫಾಸ್ಟ್ ಬೌಲರ್ ಶಹೀನ್ ಆಫ್ರಿದಿ ತಮ್ಮ ಮೊದಲ ಎರಡು ಓವರ್ ಗಳಲ್ಲಿ ಭಾರತಕ್ಕೆ ಎರಡು ಹೊಡೆತಗಳನ್ನು ನೀಡಿದರು. ಶಾಹೀನ್ ಬೌಲಿಂಗ್ ಮೇಲೆ ರೋಹಿತ್ ಶರ್ಮಾ ಅವರು ಮೊದಲ ಬಾಲ್ ಗೆ ಜೀರೋ ರನ್ ಗೆ ಔಟಾದರು. ತದನಂತರ ಶಹೀನ್ ಆಫ್ರಿದಿ ಕೆ ಎಲ್ ರಾಹುಲ್ ಅವರಿಗೆ ಮೂರು ರನ್ ಗಳ ಮೇಲೆ ಔಟ್ ಮಾಡಿದರು. ಶಹೀನ್ ಅಫ್ರಿದಿ ಕೆ ಎಲ್ ರಾಹುಲ್ ಅವರ ವಿಕೆಟ್ ಪಡೆದದ್ದು ಹೊಸ ವಾದಕ್ಕೆ ಎಡೆಮಾಡಿಕೊಟ್ಟಿದೆ.

ಶಹೀನ್ ಆಫ್ರಿದಿ ಕೆ ಎಲ್ ರಾಹುಲ್ ಅವರಿಗೆ ಎಸೆದ ಬಾಲ್ ನೋಬಾಲ್ ಆಗಿತ್ತು ಎಂಬ ಆರೋಪ ಈಗ ಕೇಳಿ ಬರುತ್ತಿದೆ. ಸದ್ಯ ಟ್ವಿಟರ್ ಮೇಲೆ, ಶಹೀನ್ ಆಫ್ರಿದಿಯವರು ಎಸೆದ ಬಾಲ್ ನ ಫೋಟೋ ವೈರಲ್ ಆಗುತ್ತಿದೆ. ಅದರ ಜೊತೆಗೆ ಅಂಪಾಯರ್ ಆ ಸಮಯದಲ್ಲಿ ಮಲಗಿಬಿಟ್ಟಿದ್ದರೇ? ಎಂಬ ಪ್ರಶ್ನೆಗಳನ್ನು ಯೂಸರ್ ಗಳು ಕೇಳುತ್ತಿದ್ದಾರೆ.

ಪ್ರಾರಂಭದ ಮೂರು ವಿಕೆಟ್ಗಳನ್ನು ಬೇಗ ಕಬಳಿಸಿದ ನಂತರ ವಿರಾಟ್ ಕೊಹ್ಲಿ, ರಿಷಬ್ ಪಂತ್ ಅವರ ಜೊತೆಯಾಟದ ದೊಂದಿಗೆ ಭಾರತದ ಸ್ಕೋರ್ ಗೆ ಒಳ್ಳೆಯ ಆಕಾರವನ್ನು ಕೊಟ್ಟರು. ಈ ಪಂದ್ಯದಲ್ಲಿ ವಿರಾಟ್ ಅವರು 49 ಚೆಂಡುಗಳಲ್ಲಿ 57 ರನ್ಗಳನ್ನು ತೆಗೆದರು. ಇದರಲ್ಲಿ 5 ಫೋರ್ ಮತ್ತು 1 ಸಿಕ್ಸ್ ಸಮಾವೇಶವಿದೆ. ಇಬ್ಬರು ಕೂಡಿ 53 ರನ್ ಗಳ ಜೊತೆಯಾಟ ಆಡಿದರು. ರಿಷಬ್ ಅವರು 30 ಬಾಲ್ ಗಳಲ್ಲಿ 39 ರನ್ ಗಳನ್ನು ಬಾರಿಸಿ ಔಟಾದರು. ಹೀಗಾಗಿ ಭಾರತ ಪಾಕಿಸ್ತಾನಕ್ಕೆ 152 ರನ್ ಗಳ ಗುರಿ ಇಟ್ಟಿತು.

ಶಹೀನ್ ಆಫ್ರಿದಿ ಈ ಪಂದ್ಯದಲ್ಲಿ ರೋಹಿತ್ ಮತ್ತು ರಾಹುಲ್ ಸಹಿತ ಕೊಹ್ಲಿಯವರ ವಿಕೆಟನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದರ ಹೊರತಾಗಿ ಹಸನ್ ಅಲಿ 2 ಮತ್ತು ಶದಾಬ್ ಖಾನ್, ಹರೀಶ್ ರಾವುಫ್ ಒಂದೊಂದು ವಿಕೆಟ್ ತಮ್ಮ ತೆಕ್ಕೆಗೆ ಹಾಕಿಕೊಂಡರು.