ತನ್ನ ಕಂದಮ್ಮನನ್ನು ಉಳಿಸುಕೊಳ್ಳಲು ಬೃಹದಾಕಾರದ ಮೊಸಳೆಯನ್ನೇ ಕೊಂ#ದು ಹಾಕಿದ ತಾಯಿ ಆನೆ, ನೋಡಿ ವೈರಲ್ ವಿಡಿಯೋ!

ತಾಯಿ ಮತ್ತು ಮಗು ಇವರಿಬ್ಬರ ನಡುವಿನ ಸಂಬಂಧ ಎಷ್ಟು ಹೊಗಳಿದರು ಸಾಲದು. ತಾಯಿ ತನ್ನ ಮಗುವಿಗಾಗಿ ಪ್ರಾಣವನ್ನು ಕೊಡಲು ಸಿದ್ಧಳಾಗಿರುತ್ತಾಳೆ ಅನ್ನೋದಕ್ಕೆ ಈ ವಿಡಿಯೋ ನೆ ಸಾಕ್ಷಿ. ತಾಯಿಯ ಪ್ರೀತಿಯ ಎಷ್ಟೋ ಉದಾಹರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ನೋಡಲು ಸಿಗುವವು. ತಾಯಿ ಯಂದರೆ ತಾಯಿಯೇ ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿನೆ ಆಗಿರಲಿ ತಾಯಿಯ ಸರಿಸಾಟಿ ಯಾರೂ ಇಲ್ಲ. ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಆಗದು. ತಾಯಿಯೇ ನಿಜವಾದ ದೈವ ಸ್ವರೂಪ ವಾಗಿರುತ್ತಾಳೆ. ಈ ತಾಯಿಯ ತ್ಯಾಗ ಮಯಿ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿವೆ.

ಆನೆ ಎಂದರೆ ಶಾಂತ ಸ್ವಭಾವ ಯಾರಿಗೂ ತೊಂದರೆ ನೀಡಿದ ನಿರಾಳ ಮನ ಹೊಂದಿರುವ ಪ್ರಾಣಿಯಾಗಿದೆ. ಆನೆಯನ್ನು ಗಣೇಶನಿಗೆ ಹೋಲಿಸಲಾಗುತ್ತದೆ. ಆನೆಯ ಮುಖ ಹೊಂದಿದ ಗಣೇಶನನ್ನು ಗಜಾನನ ಎಂದೂ ಸಹ ಕರೆಯುತ್ತೇವೆ. ಆನೆ ಕಂಡರೆ ಸಾಕು ನಾವು ನಮಸ್ಕರಿಸಿ ಆಶೀರ್ವಾದ ಪಡೆಯುತ್ತೇವೆ. ಆನೆ ತನ್ನ ತಂಟೆಗೆ ಯಾರು ಬರದಿದ್ದರೆ ಮಾತ್ರ ಸುಮ್ಮ ನಿರುತ್ತೆ ಒಂದು ವೇಳೆ ಅದಕ್ಕೆ ಸಿಟ್ಟು ಬಂದರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ತಾಯಿ ಆನೆ ತನ್ನ ಕುಟುಂಬದೊಂದಿಗೆ ಒಂದು ಹೊಂಡದಲ್ಲಿ ನೀರು ಕುಡಿಯಲು ಬಂದಿರುತ್ತವೆ ಅಷ್ಟರಲ್ಲಿ ಹೊಂಚು ಹಾಕಿ ಕೊಂಡಿದ್ದ ಬೃಹದಾಕಾರದ ಮೊಸಳೆ ಆನೆಯ ಕಂದಮ್ಮನ ಮೇಲೆ ದಾ#ಳಿ ಮಾಡುತ್ತದೆ. ಮುಂದೆ ಏನಾಗುತ್ತದೆ ಎಂಬುದು ವಿಡಿಯೋದಲ್ಲಿ ನೀವೇ ನೋಡಿ.

ಹನ್ಸ ಹೆನ್ರಿಕ ಇವರು ಝಮ್ಬಿಯಾ ದೇಶದಲ್ಲಿಯ ಒಂದು ಪ್ರವಾಸದ ಸಂದರ್ಭದಲ್ಲಿ ಈ ವಿಡಿಯೋವನ್ನು ಶೂಟ್ ಮಾಡಿದ್ದಾರೆ. ಸದ್ಯಕ್ಕೆ ಅವರು ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಪ್ರಸ್ತುತ ವಿಡಿಯೋದಲ್ಲಿ ಮೊಸಳೆಯ ಬಾಯಿಂದ ತನ್ನ ಕಂದಮ್ಮನನ್ನು ರಕ್ಷಿಸಲು ಮೊಸಳೆಯನ್ನೇ ಕೊಂ#ದು ಹಾಕುತ್ತದೆ.

ಮೊಸಳೆ ತನ್ನ ವಾಸ್ತವ ಸ್ಥಳದಲ್ಲಿ ಬೇರೆ ಯಾವುದೇ ಪ್ರಾಣಿ ನೀರು ಕುಡಿಯಲು ಬಂದರೆ ಅವುಗಳ ಮೇಲೆ ದಾಳಿ ಮಾಡಿ ಆಹಾರ ತನ್ನದಾಗಿಸುವ ಯೋಚನೆಯಲ್ಲಿ ಸದಾ ತಯಾರಾಗಿರುತ್ತದೆ. “ಆಳಕ್ಕೆ ಹೋಗುತ್ತಿರುವ ಆನೆಯ ಮರಿಯನ್ನು ಮೋಸಳೆಯಿಂದ ಯಾವುದೇ ತೊಂದರೆ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಮೊಸಳೆಯನ್ನೇ ತಾಯಿ ಆನೆ ಕೊ#ಲ್ಲುತ್ತದೇ” ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಈ ವಿಡಿಯೋದಲ್ಲಿ ನೀವು ಕಾಣಬಹುದು, ಮೊದಲು ಆನೆ ಮೊಸಳೆಯನ್ನು ದೂರ ತಳ್ಳಲು ಪ್ರಯತ್ನ ಮಾಡುತ್ತದೆ. ಅದರೆ ಮೊಸಳೆ ಪದೇ ಪದೇ ತಿರುಗಿ ಹ#ಲ್ಲೆ ಮಾಡಿದಾಗ ರೊಚ್ಚಿಗೆದ್ದ ಆನೆ ತನ್ನ ಮಹಕಾಯದಂತಹ ಶಕ್ತಿಯಿಂದ ಮೊಸಳೆಯನ್ನೇ ನೋಡು ನೋಡುವಷ್ಟರಲ್ಲೇ ಶಿವನ ಪಾದ ಸೇರಿಸುತ್ತದೆ. ಪ್ರಸ್ತುತ ವಿಡಿಯೋ ನೋಡಿ ನೆಟ್ಟಿಗರು ತುಂಬಾ ಆಶ್ಚ#ರ್ಯ ಪಡುತ್ತಿದ್ದಾರೆ.

ಮನುಷ್ಯರೇ ಆಗಲಿ ಪ್ರಾಣಿನೆ ಆಗಲಿ ತನ್ನ ಮಗುವಿಗಾಗಿ ತನ್ನ ಜೀವವನ್ನೇ ಮುಡಿಪಾಗಿ ಇಡುತ್ತಾಳೆ.