ಮಾರ್ವಾಡಿ ಜನರ ಹಾಗೆ ಅದ್ಭುತ ಯಶಸ್ಸನ್ನು ಕನ್ನಡಿಗರು ಸಹ ಪಡೆಯಬಹುದು ಓದಿ ಈ 15 ಸೀಕ್ರೆಟ್ ಗಳನ್ನು!

ವ್ಯವಸಾಯ ಉದ್ಯೋಗಗಳನ್ನು ಮಾಡಬೇಕಾದರೆ ಮಾರವಾಡಿ ಜನರ ಹಾಗೆ ಮಾಡಬೇಕು ಎಂದು ಎಷ್ಟೋ ಸಲ ನಾವು ಕೇಳುತ್ತೇವೆ. ಈ ಮಾರವಾಡಿ ಜನರಿಗೆ ಇಷ್ಟೊಂದು ಅದ್ಭುತವಾದ ಯಶಸ್ಸು ಹೇಗೆ ಸಿಗುತ್ತದೆ ಎಂಬುದರ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೀರಾ? ಇದೇ ಪ್ರಶ್ನೆಗೆ ಕೆಲವೊಂದು ಉತ್ತರಗಳನ್ನು ನಾವು ಈ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ… ಹಾಗಾದರೆ ಓದಿ.

ಈ ಮಾರ್ವಾಡಿ ಜನರು ಯಶಸ್ವಿಯಾಗುವ ಹಿಂದಿನ ಗುಟ್ಟು ಏನು?

ಮಿತ್ರರೇ ಪ್ರತಿಯೊಂದು ಸಮಾಜದಲ್ಲಿ ಕೆಲವೊಂದು ಗುಣಗಳು ಹಾಗೂ ದೋಷಗಳು ಇದ್ದೇ ಇರುತ್ತವೆ. ವಿವಿಧ ರೀತಿಯ ಈ ಒಳ್ಳೆಯ ಗುಣಗಳ ಗುಣಾಕಾರ ಇಲ್ಲವೇ ಬರೀ ಸಂಕಲನವಾದರೂ ಸಾಕು ಒಂದು ಒಳ್ಳೆಯ ಸಮೃದ್ಧ, ಸಮಾಧಾನಿ ಹಾಗೂ ಪ್ರಬಲವಾದ ಸಮಾಜ ತಯಾರಾಗುತ್ತದೆ ಎಂದೆನಿಸುತ್ತದೆ.

ಆದ್ದರಿಂದ ಪ್ರತಿಯೊಂದು ಸಮಾಜದ ಗುಣಗಳ ಕಡೆಗೆ ಉತ್ಸಾಹದಿಂದ ಮತ್ತು ಅಷ್ಟೇ ಸೂಕ್ಷ್ಮ ರೀತಿಯಿಂದ ನೋಡುವ ದೃಷ್ಟಿ ನಮ್ಮಲ್ಲಿರಬೇಕು. ಈ ಸಮಾಜದ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಮತ್ತು ನಮ್ಮಲ್ಲಿ ಅಳವಡಿಸಿಕೊಂಡು ಮುಂದೆ ಹೆಜ್ಜೆ ಇಟ್ಟರೆ ನಿಜಕ್ಕೂ ನಾವು ಸಹ ಜೀವನದಲ್ಲಿ ಯಶಸ್ವಿಯಾಗಿ ಮುಂದೆ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮುಖ್ಯವಾಗಿ ಮಾರ್ವಾಡಿ (ರಾಜಸ್ಥಾನಿ) ಇದೊಂದು ಭಾಷೆಯಾಗಿದೆ. ಅನುಭವ ಹಾಗೂ ಸೂಕ್ಷ್ಮ ನಿರೀಕ್ಷಣೆಯ ದೃಷ್ಟಿಯಿಂದ ನೋಡಿದರೆ ಈ ಜನರು ಯಶಸ್ವಿಯಾಗುವುದರಲ್ಲಿ 15 ಕಾರಣಗಳಿವೆ. ಅವುಗಳನ್ನು ನಾವಿಲ್ಲಿ ಸ್ವಲ್ಪದರಲ್ಲಿ ನೋಡುವ.

  1. ಈ ಮಾರ್ವಾಡಿ ಜನರು ಮುಖ್ಯವಾಗಿ ಯಾವುದೇ ವಿಷಯಕ್ಕೆ ಫೋಕಸ್ ಮಾಡುವುದರಲ್ಲಿ ನಿಸ್ಸೀಮರು. ಅದನ್ನು ಇವರು ಯಾವುದೇ ರೀತಿಯಲ್ಲಿ ಕೈ ತಪ್ಪಿಸಿಕೊಳ್ಳುವುದಿಲ್ಲ. ಅದರಲ್ಲೂ ತಮ್ಮ ಉದ್ಯೋಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ತುಂಬಾ ಸೂಕ್ಷ್ಮ ದೃಷ್ಟಿಯಿಂದ ನೋಡಿ ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ. ಹಾಗೂ ಯಾವುದೇ ಕೆಲಸದ ಬಗ್ಗೆ ಉಪಯೋಗವಾಗುವಂಥ ಸಾರವನ್ನು ತಮ್ಮ ಮೆದುಳಿನಲ್ಲಿ ಇಳಿಸಿಕೊಳ್ಳುತ್ತಾರೆ.
  2. ಎಲ್ಲರ ಜೊತೆಗೆ ಮೈತ್ರಿಯಿಂದ ಇರುವುದು ಇವರ ಎರಡನೆಯ ಗುಣ. ಇಲ್ಲಿ ಯಾವುದೇ ರೀತಿಯ ಜಾತಿ, ಧರ್ಮ, ವಂಶ, ಬಣ್ಣ ಇಂಥ ವಿಷಯಗಳಿಗೆ ಎಳ್ಳಷ್ಟೂ ಬೆಲೆ ಕೊಡುವುದಿಲ್ಲ. ಒಂದು ವ್ಯಕ್ತಿ ಒಂದು ವೇಳೆ ಮಿತ್ರನಾಗದೇ ಇದ್ದಾಗ ಶತ್ರುವನ್ನು ಸಹ ಮಾಡಿಕೊಳ್ಳುವುದಿಲ್ಲ. ಮೈತ್ರಿಯ ನೆಟ್ವರ್ಕಿಂಗ್ ನಿಂದ ಆತನಲ್ಲಿ ಉಪಯೋಗವಾಗುವಂತಹ ಸಂದರ್ಭ, ಸಂಬಂಧ ಮತ್ತು ಅವಕಾಶವನ್ನು ಪಡೆಯುವುದರ ಕಡೆಗೆ ಇವರು ಗಮನ ಹರಿಸುತ್ತಾರೆ. ಮುಖ್ಯ ವಿಷಯವನ್ನು ಬಿಟ್ಟು ಎಂದಿಗೂ ಜಗಳಕ್ಕೆ ಇಳಿಯುವದಿಲ್ಲ. ಅನಾವಶ್ಯಕವಾದ ಜಗಳ ಮತ್ತು ವಾದ-ವಿವಾದಕ್ಕೆ ಇಳಿಯುವ ಗೋಜಿಗೆ ಇವರು ಹೋಗುವುದಿಲ್ಲ.
  3. ಇಲ್ಲಿ ಒಂದು ಹಾಸ್ಯಪ್ರಸಂಗ ನೆನಪಿಗೆ ಬರುತ್ತದೆ. ಒಬ್ಬ ಮಾರ್ವಾಡಿ ತನ್ನ ಮಿತ್ರರ ಜೊತೆಗೆ ಮಾತನಾಡುತ್ತಾ ಕುಳಿತಿರುವಾಗ ಒಬ್ಬ ಗೂಂಡಾ ಬಂದು ಮಾರ್ವಾಡಿಗೆ ಬಾಯಿಗೆ ಬಂದಂತೆ ಬೈದು ಕೊನೆಗೆ ಸುಸ್ತಾಗಿ ಅಲ್ಲಿಂದ ವಾಪಸ್ ಹೋಗುತ್ತಾನೆ. ಆಗ ಮಿತ್ರನು ಆಶ್ಚರ್ಯದಿಂದ ಮಾರ್ವಾಡಿಗೆ, ಆತ ನಿನಗೆ ಇಷ್ಟೊಂದು ಬಾಯಿಗೆ ಬಂದ ಹಾಗೆ ಬೈದು ಹೋದರೂ ಆತನಿಗೆ ನೀನೂ ಏನು ಅನ್ನಲಿಲ್ಲವಲ್ಲ! ಎಂದಾಗ ಆ ಗೂಂಡಾ ನನಗೆ ಏನನ್ನಾದರೂ ಕೊಟ್ಟೆ ಹೋದನು, ಮರಳಿ ಏನನ್ನು ತೆಗೆದುಕೊಂಡು ಹೋಗಲಿಲ್ಲ ಅಲ್ವಾ ಎಂದು ಮಾರ್ವಾಡಿ ಉತ್ತರಿಸಿದನು. ಇದರ ಹಿಂದಿನ ಉದ್ದೇಶವೇನೆಂದರೆ ಈ ಮಾರವಾಡಿಗಳು ಆದಷ್ಟು ಮಂಡೆ ಬಿಸಿ ಮಾಡಿಕೊಳ್ಳುವುದಿಲ್ಲ. ತಲೆ ಬಿಸಿಯಾದರೆ ರಕ್ತದೊತ್ತಡವು ಹೆಚ್ಚಾಗುವುದು. ಮತ್ತು ತಲೆ ಸರಿಯಾಗಿ ಕೆಲಸ ಮಾಡುವುದಿಲ್ಲ.
  4. ಇವರ ನಾಲ್ಕನೆಯ ಗುಣವೆಂದರೆ ಸತತವಾದ ಪರಿಶ್ರಮ ತೆಗೆದುಕೊಳ್ಳುವುದು. ಸತತ ಪರಿಶ್ರಮದಿಂದಲೇ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಪರಿಶ್ರಮ ಪಡುವಾಗ ಇತರರು ಮಾಡುವ ಟೀಕೆ ಮತ್ತು ಕೊಂಕು ನುಡಿಗಳ ಕಡೆಗೆ ಇವರು ಸ್ವಲ್ಪವೂ ಗಮನ ನೀಡುವುದಿಲ್ಲ.
  5. ಇವರ ಐದನೆಯ ಗುಣವೆಂದರೆ ವ್ಯವಹಾರ ಜ್ಞಾನದ ಬಗ್ಗೆ ತಿಳಿದುಕೊಳ್ಳುವದು. ಚಿಕ್ಕಂದಿನಿಂದಲೇ ಇವರು ವ್ಯವಹಾರಿಕ ಕ್ಷೇತ್ರಗಳಲ್ಲಿ ಲಾಭ ಹಾನಿ ವಿಚಾರ ಮಾಡಿ ಬೇಗನೆ ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಬೆಳೆಸಿಕೊಂಡು ಬಂದಿರುತ್ತಾರೆ. ದುಂದು ವೆಚ್ಚದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಇವರ ವಿಶೇಷತೆ. ಈ ಗುಣದಿಂದ ಮಾರವಾಡಿ ಜನರು ಸಾಲ ತೆಗೆದುಕೊಂಡು ಮೆರೆಯುವುದಿಲ್ಲ. ಸಂಕಷ್ಟಗಳು ಬಂದಾಗ ಜನರ ಮಾತಿನ ಕಡೆಗೆ ಗಮನ ನೀಡದೆ ತಮ್ಮ ಖರ್ಚುಗಳನ್ನು ಒಂದೇ ಹೊಡೆತದಲ್ಲಿ ಕಡಿಮೆ ಮಾಡಿಕೊಳ್ಳುತ್ತಾರೆ. ಇವರು ಯಾವಾಗಲೂ ಆಶಾವಾದಿಯಾಗಿರುವುದರಿಂದ ಸತತ ತಮ್ಮ ಕುಟುಂಬದ ಮೇಲೆ ಬಂದ ಸಮಸ್ಯೆಗಳಿಂದ ಮಾರ್ಗ ತೆಗೆದು ಕೊಳ್ಳುತ್ತಾರೆ.
  6. ಯಾವುದೇ ಕೆಲಸಕ್ಕಾಗಿ ತಮ್ಮ ಪರಿಶ್ರಮವನ್ನು ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಯಾವುದೇ ರೀತಿಯ ಗರ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ದೊರೆತ ಕೆಲಸವನ್ನು ಮನಸ್ಸಿನಿಂದ ಮಾಡುವದರ ಕಡೆಗೆ ಗಮನ ಹರಿಸುತ್ತಾರೆ. ಇದರಿಂದ ಕ್ಯಾಶ್ ಫ್ಲೋ ಸುಧಾರಿಸುತ್ತದೆ.
  7. ಏಳನೆಯ ವೈಶಿಷ್ಟ್ಯವೇನೆಂದರೆ ಸನ್ಮಾನ ಮತ್ತು ಅಪಮಾನ ಇವೆರಡನ್ನು ಸಮತೋಲವಾಗಿ ತೆಗೆದುಕೊಳ್ಳುವುದು. ಇದರಿಂದ ಸರ್ಕಾರಿ ಅಧಿಕಾರಿಗಳು, ಸ್ಥಾನಿಕ ನಾಯಕರು, ದೊಡ್ಡ ದೊಡ್ಡ ಕಂಪನಿಗಳ ಗ#ರ್ವಿಷ್ಟ ಅಧಿಕಾರಿಗಳು, ದೊಡ್ಡ ದೊಡ್ಡ ಬಂಡವಾಳಶಾಹಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳೊಂದಿಗೆ ತುಂಬಾ ವಿನಮ್ರವಾಗಿ ನಡೆಯಲು ಸಾಧ್ಯವಾಗುತ್ತದೆ. ಎಲ್ಲವೂ ಗುರುತು ಇರುವುದರಿಂದ ಇವರು ಹೆಚ್ಚಾಗಿ ರಾಜಕೀಯದಲ್ಲಿ ಇಳಿಯುವುದಿಲ್ಲ. ಆದರೆ ರಾಜಕೀಯ ನಾಯಕರಿಗೆ ಮಾತ್ರ ಸರಿಯಾಗಿ ಉಪಯೋಗಿಸಿ ಕೊಳ್ಳುತ್ತಾರೆ.
  8. ಇವರ ಎಂಟನೇ ಗುಣವೇನೆಂದರೆ ಸತತವಾಗಿ ಏನಾದರೂ ಕಲಿಯುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿ ಅವರು ಹೊಸದಾದ ಉದ್ಯೋಗವನ್ನು ತಿಳಿದು ಕಲಿತುಕೊಂಡು ತಮ್ಮ ಮುಂದಿನ ಪೀಳಿಗೆಗೆ ಕಲಿಸುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ.
  9. ವಿವಿಧ ಹಬ್ಬ ಮತ್ತು ಉತ್ಸವಗಳನ್ನು ಇವರು ಆನಂದದಿಂದ ಆಚರಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ರೀತಿಯ ಅತಿರೇಕವನ್ನು ಮಾಡುವುದಿಲ್ಲ.
  10. ಅತಿಯಾದ ಉತ್ಸವಗಳಿಂದ ಹಣ, ಶಕ್ತಿ ಮತ್ತು ಸಮಯದ ವ್ಯರ್ಥ ಉಪಯೋಗವಾಗುತ್ತದೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕೆಲಸದ ಮೇಲಿನ ಗಮನ ಕಡಿಮೆಯಾಗಿ ಬೇರೆಡೆಗೆ ಹರಿದುಹೋಗುತ್ತದೆ.
  11. ಇವರ 11ನೇಯ ಗುಣ ಕಲ್ಚರಲ್ ಫ್ಲೆಕ್ಸಿಬಿಲಿಟಿ… ಇವರು ವಾಸಿಸುವ ಆಯಾ ಪ್ರದೇಶಗಳಲ್ಲಿಯ ಸಾಂಸ್ಕೃತಿಕ ಧೋರಣೆ, ಉಡುಪು, ಭಾಷೆ, ರೀತಿ-ನೀತಿ, ನಡತೆ ಮತ್ತು ದೇವ ದೇವತೆಗಳಿಗೆ ಸಹಜವಾಗಿ ಸ್ವೀಕರಿಸಿಕೊಳ್ಳುತ್ತಾರೆ. ಅಲ್ಲಿಯ ಜನರೊಂದಿಗೆ ಮತ್ತು ರೂಢಿ, ಪರಂಪರೆಗಳೊಂದಿಗೆ ಬಹುಬೇಗ ಸಮರಸವಾಗುತ್ತಾರೆ. ತಾವಿರುವ ಸ್ಥಳದಲ್ಲಿ ಸಮಾಜದ ಜೊತೆಗೆ ಒಂದು ಭಾಗವಾಗಿ ಅವರೊಂದಿಗೆ ಚೆನ್ನಾಗಿ ವ್ಯವಹಾರವನ್ನು ನಡೆಸುತ್ತಾರೆ.
  12. ಈ ವೈಶಿಷ್ಟ್ಯದ ಪ್ರಕಾರ ಇವರು ಎಲ್ಲಿದ್ದಲ್ಲಿ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾರೆ. ಮತ್ತೆ ಇವರು ಕೆಲವು ಕಡೆ ಅನೇಕ ರಾಜಕೀಯ ನಾಯಕರ ವಿತ್ತೀಯ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ. ಅಲ್ಪಸಂಖ್ಯಾತರಾದ ಈ ಮಾರವಾಡಿ ಜನರು ಬಹುಸಂಖ್ಯೆ ಸಮಾಜದ ನಾಯಕರ ಒಳ್ಳೆಯ ಮಿತ್ರ, ತತ್ವಜ್ಞ ಮತ್ತು ಮಾರ್ಗದರ್ಶಕರಾಗಿ ಇರುತ್ತಾರೆ. ಚತುರ ಮತ್ತು ವಿಶ್ವಾಸಾರ್ಹತೆ ಯಿಂದಾಗಿ ಈ ಮಾರ್ವಾಡಿ ಜನರು ನಾಯಕರ ಅತೀ ಸಮೀಪ ಸ್ಥಾನ ಪಡೆದುಕೊಳ್ಳುತ್ತಾರೆ. ಈ ರಾಜಕೀಯ ಗೆಳತನದಿಂದಾಗಿ ಲೋಕಲ್ ನಲ್ಲಿ ಕಿರುಕುಳ ನೀಡುವ ಉಪದ್ರವಿಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡುತ್ತಾರೆ.
  13. ಇವರ ಹದಿಮೂರನೆಯ ಒಳ್ಳೆಯ ಗುಣ ಏನೆಂದರೆ, ಎಷ್ಟೇ ಮೇಲೆ ಹೋದರೂ ಶ್ರೀಮಂತರಾದರೂ ತಮ್ಮ ಕಾಲುಗಳನ್ನು ಮಾತ್ರ ಯಾವಾಗಲೂ ನೆಲದ ಮೇಲೆಯೇ ಇಡುತ್ತಾರೆ. ತಮ್ಮ ಜಾಣತನವನ್ನು ತೋರಿಸಲು ವಾಟ್ಸಾಪ್ ಗ್ರೂಪ್ ನಲ್ಲಿ ಯಾವುದಾದರೂ ಒಂದು ಪಕ್ಷದ ಬಗ್ಗೆ ರಾಜಕೀಯ ಟಿಪ್ಪಣಿಗಳನ್ನು ಮತ್ತು ಉಪದೇಶಗಳನ್ನು ನೀಡಲು ಮುಂದಾಗುವುದಿಲ್ಲ. ವಾದಕ್ಕೆ ಎಡೆ ಮಾಡಿಕೊಡುವಂತಹ ವಿಷಯಗಳ ಮೇಲೆ ಯಾವತ್ತೂ ಇವರು ತಮ್ಮ ವಿಚಾರಗಳನ್ನು ಮಂಡಿಸುವುದಿಲ್ಲ. (ಉದ್ಯೋಗ ವ್ಯವಸಾಯಗಳಲ್ಲಿ ಇದು ಅವಶ್ಯಕವಾಗಿದೆ) ಉದ್ಯೋಗಗಳಲ್ಲಿ ಸ್ವಲ್ಪವೇ ಸಿಕ್ಕರೆ ಅದರಿಂದ ಎಂದೂ ಗರ್ವ ಪಟ್ಟುಕೊಳ್ಳುವುದಿಲ್ಲ. ನಾನೇ ಜಾಣ ನನ್ನಿಂದಲೇ ಹೀಗಾಯಿತು ಎಂಬ ಗರ್ವದ ಮಾತುಗಳನ್ನು ಆಡುವುದಿಲ್ಲ.
  14. ಇವರು ಉದ್ಯೋಗಕ್ಕಾಗಿ ವಲಸೆ ಬಂದವರು ಆಗಿರುವುದರಿಂದ ತಮ್ಮ ಸಾಮಾಜಿಕ ಮತ್ತು ರಾಜಕೀಯ ಮರ್ಯಾದೆಗಳನ್ನು ತಿಳಿದುಕೊಂಡು ಸರಿಯಾಗಿ ನಡೆದುಕೊಳ್ಳುತ್ತಾರೆ. ಇದರ ಬಗ್ಗೆ ಇರುವ ಲಕ್ಷ್ಮಣರೇಖೆಯನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ಹೀಗಾಗಿ ಸ್ಥಾನಿಕ ಜನರಿಗೆ ಈ ಜನರು ತುಂಬಾ ಹಿಡಿಸುತ್ತಾರೆ.
  15. ಕೊನೆಯ ಗುಣ ಯಾವುದು ಎಂದರೆ ವ್ಯವಹಾರಿಕವಾಗಿ ತುಂಬಾ ಹೊಂದಿಕೊಳ್ಳುವುದು. ಮಾರ್ಕೆಟ್ಟು ಮತ್ತು ಗ್ರಾಹಕನ ಬದಲಾಗುವ ಮೂಡ್, ಬದಲಾಗುವ ವಾತಾವರಣ ಮತ್ತು ಬದಲಾಗುವ ಸರಕಾರಿ ನಿಯಮಗಳ ಅಭ್ಯಾಸವನ್ನು ಮಾರ್ವಾಡಿ ಜನರು ತುಂಬಾ ಚಾಕಚಕ್ಯತೆಯಿಂದ ತಿಳಿದುಕೊಂಡು ಕೆಲಸ ಮಾಡುತ್ತಾರೆ. ಸ್ಥಳ ಸಮಯ ಮತ್ತು ವ್ಯಕ್ತಿಗಳನ್ನು ನೋಡಿ ವ್ಯವಹಾರವನ್ನು ಮಾಡುತ್ತಿರುತ್ತಾರೆ.

ಒಟ್ಟಿನಲ್ಲಿ ಈ ಜನ ತಮ್ಮ ಮೂಲಭೂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಹೊಸ ಕನಸುಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಈ ರೀತಿಯ ಗುಣಗಳನ್ನು ಅವರು ಚಿಕ್ಕಂದಿನಿಂದ ತಮ್ಮ ಹಿರಿಯರ ಅನುಕರಣೆಯಿಂದ ಕಲಿತುಕೊಂಡು ಬಂದಿರುತ್ತಾರೆ.