ಕೊನೆಗೂ ಧೋನಿ ಹೇಳಿದ ಆ ಭವಿಷ್ಯವಾಣಿಯು ನಿಜವಾಯಿತು; ಭಾರತ ಸೋಲುವದು! ಓದಿ ಧೋನಿ ಏನು ಹೇಳಿದ್ದಾರೆ ನೋಡಿ…
ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ನೋಡಿದ ಅಭಿಮಾನಿಗಳು ತಮ್ಮ ನೆನಪಿನಿಂದ ಆ ಪಂದ್ಯವನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಆ ಪಂದ್ಯದಲ್ಲಿ ನಡೆದದ್ದು ಕಳೆದ 29 ವರ್ಷಗಳಲ್ಲಿ ಎಂದಿಗೂ ಆಗಿರಲಿಲ್ಲ. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಬರೀ ಸೋಲಿಸುವದು ಅಷ್ಟೇ ಅಲ್ಲ ವಿರಾಟ್ ಸೇನೆಯನ್ನು ಅಕ್ಷರಶ: ಪ್ರತಿಯೊಂದು ಕ್ಷೇತ್ರದಲ್ಲಿ ಮೆಟ್ಟಿ ನಿಂತಿತು.
ಪಾಕಿಸ್ತಾನ ತಂಡವು ತನ್ನ ಒಂದೂ ವಿಕೆಟನ್ನು ಕಳೆದುಕೊಳ್ಳದೆ ಭಾರತದ ಮೇಲೆ ಈ ರೀತಿ ಆಕ್ರಮಣ ಮಾಡುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ. ಯಾವುದೇ ವಿಷಯ ಮೊದಲಿನ ಹಾಗೇಯೇ ಮುಂದೆ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ನಿಸರ್ಗದ ನಿಯಮವೇ ಆಗಿದೆ.
ಆದರೆ ಈಗ ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಟೀಮ್ ಇಂಡಿಯಾದ ಮೆಂಟರ್ ಮಹೇಂದ್ರ ಸಿಂಗ್ ಧೋನಿ ಅವರು 2016 ರಲ್ಲಿ ನೀಡಿದ ಒಂದು ಸ್ಟೇಟ್ಮೆಂಟ್ ತುಂಬಾ ವೈರಲ್ ಆಗುತ್ತಿದೆ. ತಮ್ಮ ಹೇಳಿಕೆಯಲ್ಲಿ ಧೋನಿಯವರು ಭವಿಷ್ಯದಲ್ಲಿ ಒಂದಿಲ್ಲ ಒಂದು ದಿವಸ ಪಾಕಿಸ್ತಾನವು ಭಾರತವನ್ನು ಸೋಲಿಸುತ್ತದೆ ಎಂದು ನುಡಿದಿದ್ದರು.
2016 ರಲ್ಲಿ ಧೋನಿ ಬ್ರಿಗೇಡ್ ಯಾವಾಗ ಪಾಕಿಸ್ತಾನವನ್ನು ಸೋಲಿಸಿತ್ತು ಆಗ ಧೋನಿ ಅವರು ಈ ಮಾತನ್ನು ಹೇಳಿದ್ದರು. ನಾವು ಪಾಕಿಸ್ತಾನವನ್ನು ಇಲ್ಲಿಯವರೆಗೆ 11-0 ಇಂದ ಸೋಲಿಸಿದ್ದೇವೆ, ನಮಗೆ ಈ ವಿಷಯದ ಬಗ್ಗೆ ತುಂಬಾ ಗರ್ವ ಇದೆ. ಆದರೆ ನಾವು ಒಂದು ಸತ್ಯವನ್ನು ನಂಬಲೇಬೇಕು ಅದೇನೆಂದರೆ ಪಾಕಿಸ್ತಾನವು ಒಂದಿಲ್ಲ ಒಂದು ದಿನ ನಮ್ಮನ್ನು ಸೋಲಿಸುವುದು ನಿಶ್ಚಿತ. ಇಂದಿಲ್ಲ ನಾಳೆ, 10 ವರ್ಷದ ನಂತರ, 20 ವರ್ಷದ ನಂತರ ಅಥವಾ 50 ವರ್ಷದ ನಂತರವಾದರೂ ಸರಿ ಸೋಲಿಸುತ್ತಾರೆ. ಸತತವಾಗಿ ನಾವು ಗೆದ್ದೇಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ.
Some words said by ms dhoni back in 2016 #INDvPAK #PakVsInd pic.twitter.com/UA0s2TSd32
— Harsh Malhotra (@hmcric45) October 24, 2021
ಕೊನೆಗೂ ಅಂದು ಧೋನಿಯವರು ಹೇಳಿದ ಆ ಮಾತುಗಳು ಈಗ ನಿಜವಾಗಿವೆ. ಆದರೆ ಇಷ್ಟೊಂದು ಹೀನಾಯವಾಗಿ ಸೋಲುತ್ತಾರೆ ಎಂಬುದು ಗೊತ್ತಿರಲಿಲ್ಲ. ಪಾಕಿಸ್ತಾನ ಟಾಸ್ ಗೆದ್ದ ನಂತರ ಭಾರತಕ್ಕೆ ಬ್ಯಾಟಿಂಗ್ ನೀಡಿತು. ಭಾರತ ಮೊದಲ ಬ್ಯಾಟ್ ಮಾಡಿ 151 ರನ್ ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ತುಂಬಾ ಸಹಜವಾಗಿ ತನ್ನ ಯಾವುದೇ ವಿಕೆಟ್ ಕಳೆದುಕೊಳ್ಳದೆ ಭರ್ಜರಿ ಗೆಲವು ಸಾಧಿಸಿತು. ಭಾರತದ ಸೋಲಿಗೆ ಅತಿ ಆತ್ಮವಿಶ್ವಾಸವು ಮುಳುವಾಯಿತು ಎಂಬ ಮಾತುಗಳು ಮೀಡಿಯಾದಲ್ಲಿ ಕೇಳಿಬರುತ್ತಿವೆ.
ಕೊನೆಗೆ ಹೇಳುವುದೊಂದೇ ಅದೇನೆಂದರೆ, ಒಂದೇ ಪಂದ್ಯದ ಸೋಲಿನಿಂದ ಭಾರತವು ಈ ವರ್ಲ್ಡ್ ಕಪ್ ನಿಂದ ಹೊರಗೆ ಹೋಗಿಲ್ಲ. ಇನ್ನೂ ಸಾಕಷ್ಟು ಪಂದ್ಯಗಳು ಬಾಕಿ ಇವೆ. ಇಷ್ಟರಲ್ಲೇ ಪಾಕಿಸ್ತಾನವು ವಿಜಯೋತ್ಸವ ಮತ್ತು ಭಾರತ ಸೋಲಿನ ದುಃಖದಲ್ಲಿ ಮುಳುಗಬಾರದು. ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇನ್ನಷ್ಟು ಚೆನ್ನಾಗಿ ಆಡಿದ್ದೇ ಆದರೆ ಮುಂದಿನ ಪಂದ್ಯಗಳಲ್ಲಿ ಗೆದ್ದು ನಿಶ್ಚಿತವಾಗಿಯೂ ಮತ್ತೆ ಪಾಕಿಸ್ತಾನದ ಜೊತೆಗೆ ಸೇಡು ತೀರಿಸಿಕೊಳ್ಳಲು ಸಾಧ್ಯವಿದೆ, ಅಲ್ವಾ?