ಲಾಕ್ ಡೌನ್ ನಲ್ಲಿ ಪತಿಯಿಂದ ಬೇಸತ್ತ ಪತ್ನಿ, ಸೋನು ಸೂದ್ ರಿಗೆ ‘ನನ್ನನ್ನು ತವರಿಗೆ ಕಳಿಸಿಕೊಡಿ’ ಎಂದಾಗ ಸೋನು ಅವರು ಕೊಟ್ಟ ಮಾರ್ಮಿಕ ಉತ್ತರ ನೋಡಿ!
ಬಾಲಿವುಡ್ ನಟ ಸೋನು ಸೂದ್ ಅವರು ಮಾಡಿದ ನಿರಾಶ್ರಿತ ವಲಸಿಗ ಕಾರ್ಮಿಕರಿಗೆ ಅವರ ಊರು ಮತ್ತು ಮನೆಗಳಿಗೆ ತಲುಪಿಸುವ ನಿಸ್ವಾರ್ಥ ಸೇವೆಯಿಂದ ದೇಶದ ಮೂಲೆ ಮೂಲೆಯಲ್ಲಿ ಮನೆಮಾತಾಗಿದ್ದಾರೆ. ಅಷ್ಟೇ ಅಲ್ಲ ಪ್ರವಾಸಿಗರ ಊಟದ ವ್ಯವಸ್ಥೆಯನ್ನು ಸಹಿತ ಚೆನ್ನಾಗಿ ನೆರವೇರಿಸಿದ್ದಾರೆ.
ಏತನ್ಮಧ್ಯೆ ಮಹಿಳೆಯೋರ್ವಳು ಸೋನು ಸೂದ್ ಅವರಿಗೆ ಟ್ವೀಟ್ ಮಾಡಿ ‘ನಾನು ನನ್ನ ಗಂಡನಿಂದ ಬೇಸತ್ತಿದ್ದೇನೆ, ನನಗೆ ದಯವಿಟ್ಟು ನನ್ನ ತವರುಮನೆಗೆ ಕಳಿಸಿಕೊಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಿ’ ಎಂದು ಹೇಳಿದಾಗ ಸೋನು ಸೂದ್ ಅವರು ಕೊಟ್ಟ ಉತ್ತರ ತಿಳಿದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ.

ಮಹಿಳೆಯು ಕೇಳಿದ್ದೇನೆಂದರೆ, ‘ಸೋನು ಸೂದ್ ಅವರೇ ನಾನು ನನ್ನ ಗಂಡನ ಜೊತೆಗೆ ಜನತಾ ಕರ್ಫ್ಯೂ ನಿಂದ ಹಿಡಿದು ಲಾಕ್ ಡೌನ್ 4 ರ ವರೆಗೆ ಜೊತೆಯಲ್ಲೇ ಇದ್ದೀನಿ. ನಿಮಗೆ ನನ್ನ ಕಳಕಳಿಯ ವಿನಂತಿ ಏನೆಂದರೆ, ನೀವು ನನ್ನ ಗಂಡನನ್ನು ಎಲ್ಲಿಯಾದರೂ ಕರೆದೊಯ್ದು ಬಿಟ್ಟುಬಿಡಿ, ಅದು ಸಾಧ್ಯವಿಲ್ಲವಾದರೆ ನನಗೆ ನನ್ನ ತವರಿಗೆ ಕಳಿಸಿಕೊಡಿ. ನಾನು ನನ್ನ ಗಂಡನ ಜೊತೆಗೆ ಇನ್ನಷ್ಟು ದಿನಗಳು ಕೂಡಿ ಇರಲು ಬಯಸುವದಿಲ್ಲ’ ಎಂದಿದ್ದಕ್ಕೆ ಸೋನು ಸೂದ್ ಅವರು ಅದ್ಭುತವಾದ ಉತ್ತರವನ್ನು ಕೊಟ್ಟಿದ್ದಾರೆ. ನನ್ನ ಹತ್ತಿರ ನಿಮಗಾಗಿ ಇದಕ್ಕಿಂತ ಒಳ್ಳೆಯ ಐಡಿಯಾ ಇದೆ, ನಾನು ನಿಮಗೆ ‘ಗೋವಾ’ ದಲ್ಲಿ ಬಿಟ್ಟು ಬರುತ್ತೇನೆ ಹೇಗನಿಸುತ್ತೆ ಈ ಐಡಿಯಾ …?
I have a better plan .. let me send both of you to Goa😂 What say? https://t.co/XbYNFWWflK
— sonu sood (@SonuSood) May 31, 2020
ಸೋನು ಸೂದ್ ಅವರು ಸದ್ಯಕ್ಕೆ ಮಾಡುತ್ತಿರುವ ಕೆಲಸವನ್ನು ಮೆಚ್ಚಿ ಅನೇಕರು ಟ್ವೀಟ್ ಗಳ ಮೂಲಕ ತಮ್ಮ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ. ಅದಕ್ಕೆ ಎಕ್ಟರ್ ಸೋನು ಸೂದ್ ಅವರು ವಿನಯದಿಂದಲೇ ಸ್ಪಂದಿಸುತ್ತಿದ್ದಾರೆ. ಜನರಿಗೆ ಅವರವರ ಊರುಗಳಿಗೆ ತಲುಪಿಸುವದರ ಜೊತೆಗೆ ಸೋನು ಅವರು ಜೂಹು ದಲ್ಲಿಯ ತಮ್ಮ ಹೊಟೇಲನ್ನು ಡಾಕ್ಟರ್ಸ್ ಮತ್ತು ಕೊರೊನ ವಾರಿಯರ್ಸ್ ಗಳಿಗಾಗಿ ತೆರೆದು ಕೊಟ್ಟಿದ್ದಾರೆ.