ಒಂದು ವರ್ಷದ ಮಗು ವಿಶ್ವದಾದ್ಯಂತ ತಿರುಗಾಡಿ ತಿಂಗಳಿಗೆ 75,000 ರೂಪಾಯಿ ಗಳಿಸುತ್ತೆ! ಹೇಗೆ ಎಂಬುದು ತಿಳಿದುಕೊಳ್ಳಿ.
ನಮಗೆಲ್ಲ ಗೊತ್ತಿರುವ ಹಾಗೆ ಒಂದು ವರ್ಷದ ಮಗು ಮಾಡುವದೇನು? ಎಂಬ ಪ್ರಶ್ನೆ ಕೇಳಿದರೆ ನಮಗೆಲ್ಲ ನಗು ಬರುವದು. ಒಂದು ವರ್ಷದ ಮಗು ಸಾಮಾನ್ಯವಾಗಿ ಹಾಲು ಕುಡಿಯುವದು, ತಿನ್ನುವದು, ಆಡುವದು ಮತ್ತು ಸೂಸು ಮಾಡುವದು ಎಂದು ಸಹಜವಾಗಿ ಉತ್ತರಿಸುತ್ತವೆ. ಆದ್ರೆ ಅಮೇರಿಕದಲ್ಲಿಯ ಒಂದು ವರ್ಷದ ಮಗು ಹಣ ಸಂಪಾದನೆ ಮಾಡುತ್ತದೆ. ಇದನ್ನು ಕೇಳಿದ ತಕ್ಷಣ ನೀವು ಆಶ್ಚ#ರ್ಯಪಟ್ಟಿರಬಹುದು ಆದರೆ ಇದು ನಿಜ. ಈ ಒಂದು ವರ್ಷದ ಮಗು ತಿಂಗಳಿಗೆ ಸುಮಾರು 1000 ಡಾಲರ್ಸ್ ಅಂದರೆ 75000 ರೂಪಾಯಿ ಗಳಿಸುತ್ತದೆ. ನಾವೆಲ್ಲ ಹಣ ಸಂಪಾದನೆ ಮಾಡುವ ಸಲುವಾಗಿ ಎಷ್ಟೋ ಕಷ್ಟ ಪಟ್ಟರು ಹಣ ಸಂಪಾದನೆ ಮಾಡಲು ಸಾಧ್ಯ ವಾಗುವದಿಲ್ಲ ಆದರೆ ಈ ಮಗುವಿನ ಸಂಪಾದನೆಯ ಮೊತ್ತವನ್ನು ಕೇಳಿ ನಮಗೆಲ್ಲ ಆ#ಶ್ಚರ್ಯವಾಗುವದು ಖಚಿತ. ಹಾಗಾದರೆ ಈ ಮಗು ಯಾರು? ಹೇಗೆ ಸಂಪಾದನೆ ಮಾಡುವದು? ಎಂಬುದು ತಿಳಿದುಕೊಳ್ಳೋಣ ಬನ್ನಿ.
ಬ್ರಿಗ್ಸ್ ಡ್ಯಾರಿಂಗ್ಟನ್ ಎಂದು ಈ ಮಗುವಿನ ಹೆಸರು ಇದೆ. ಈ ಮಗು ಅಮೆರಿಕೆಯಲ್ಲಿ ತನ್ನ ಪಾಲಕದೊಂದಿಗೆ ತಿರುಗಾಡಿ ಫೋಟೋ ಮತ್ತು ವಿಡಿಯೋ ಬ್ಲಾಗ್ ಮೂಲಕ ತಿಂಗಳಿಗೆ ಸಾಕಷ್ಟು ಹಣ ಸಂಪಾದನೆ ಮಾಡುತ್ತದೆ. ಎಲ್ಲಕ್ಕಿಂತ ಚಿಕ್ಕ ವಯಸ್ಸಿನ ಈ ಮಗುವಿನ ಸಂಪಾದನೆ ಎಲ್ಲರನ್ನು ಆಕರ್ಷಿಸಿಕೊಂಡಿದೆ.
ಬ್ರಿಗ್ಸ್ ಡ್ಯಾರಿಂಗ್ಟನ್ ಮೂರು ತಿಂಗಳಿನ ಮಗುವಿದ್ದಾಗಿನಿಂದಲೂ ಅಮೇರಿಕಾದಲ್ಲಿ ಪ್ರವಾಸ ಮಾಡುತ್ತಿದೆ. ಈ ಮಗು ತನ್ನ ಪಾಲಕರೊಂದಿಗೆ ತಿರುಗಾಡುತ್ತ ಇದುವರೆಗೆ ಸುಮಾರು 45 ಬಾರಿ ವಿಮಾನ ಪ್ರವಾಸ ಮಾಡಿದೆ. ಈ ಮಗು ಕೇವಲ 9 ವಾರಗಳ ಮಗುವಿದ್ದಾಗ ಮೊದಲನೆಯ ಬಾರಿ ವಿಮಾನ ಪ್ರವಾಸ ಮಾಡಿದೆ. ಬ್ರಿಗ್ಸ್ ಜನ್ಮ 14 ಅಕ್ಟೊಬರ್ 2020 ರಲ್ಲಿ ಆಯಿತು. ಬ್ರಿಗ್ಸ್ ಕೇವಲ ಮೂರು ವಾರದ ಮಗುವಿದ್ದಾಗ ತನ್ನ ತಾಯಿಯೊಂದಿಗೆ ಮೊದಲನೆಯ ಪ್ರವಾಸ ನೆಬ್ರಾಕ್ಸ್ ನಲ್ಲಿಯ ಒಂದು ಗ್ಲ್ಯಾಮಪಿಂಗ್ ಸೈಟ್ ನಲ್ಲಿ ಮಾಡಲಾಗಿದೆ. ಈ ಮಗು ಇದುವರೆಗೆ ಅಮೆರಿಕಾದಲ್ಲಿಯ ಸುಮಾರು 16 ರಾಜ್ಯಗಳಿಗೆ ಭೇಟಿ ಕೊಟ್ಟಿದೆ.

ಈ ಪ್ರವಾಸದಲ್ಲಿ ಮಗು ಅಲಾಸ್ಕಾಗೆ ಪ್ರಯಾಣ ಮಾಡಿದೆ. ಯಲೊಸ್ಟೋನ್ ನ್ಯಾಷನಲ್ ಪಾರ್ಕ್ ನಲ್ಲಿಯ, ಕರಡಿಗಳು, ತೋಳ ಮತ್ತು ಅನೇಕ ಪ್ರಾಣಿಗಳು ನೋಡಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿಯ ಅನೇಕ ಸಮುದ್ರ ದಂಡೆಗಳಲ್ಲಿ ಸಹ ಮಗು ತಿರುಗಾಡಿದೆ. ಆ ಮಗುವಿನ ತಾಯಿ ಅನೇಕ ವರ್ಷಗಳಿಂದ ಪಾರ್ಟ್ ಟೈಮ್ ಟೂರಿಸ್ಟ್ ಎಂಬ ಹೆಸರಿನ ಬ್ಲಾಗ್ ನಡೆಸುತ್ತಿದ್ದರು. ತಾವು ಗರ್ಭಿಣಿಯಾದಾಗ ತಮ್ಮ ಕರಿಯರ್ ಮುಗಿಯಿತು ಎಂದು ಅಂದುಕೊಂಡಿದ್ದರು. ಆದರೆ ಅವರ ವಿಧಿಲಿಖಿತವೇ ಬೇರೆ ಯಾಗಿತ್ತು. ಅವರು ಮಾಡುತ್ತಿರುವ ಬ್ಲಾಗ್ ಕೆಲಸಕ್ಕಾಗಿ ಅವರ ಪತಿ ಅವರನ್ನು ಪ್ರೋತ್ಸಾಹ ನೀಡಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಹುರಿದುಂಬಿಸಿದರು. ಮಗುವಿನ ಜೊತೆಗೆ ನಾವು ಪ್ರವಾಸ ಮಾಡಬಹುದು ಎಂದು ಅವರ ಮನದಲ್ಲಿ ಆಸೆ ಹುಟ್ಟಿಸಿದರು. ತಕ್ಷಣವೇ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಜೊತೆಗೆ ಪ್ರವಾಸ ಮಾಡುವದು ಹೇಗೆ ಎಂಬುದು ತಿಳಿದುಕೊಳ್ಳಲು ಪ್ರಾರಂಭಿಸಿದರು.
ಮಗುವಿನೊಂದಿಗೆ ಪ್ರವಾಸ ಮಾಡುವದಿದ್ದರೆ ಹೇಗೆ ಮಾಡಬೇಕು, ಯಾವ ವಿಷಯದ ಕುರಿತು ಹೆಚ್ಚು ಜಾಗ್ರತೆ ವಹಿಸಬೇಕು ಎಂಬುದರ ಅಭ್ಯಾಸ ಮಾಡಲು ಶುರು ಮಾಡಿದರು. ಆದರೆ ಅವರಿಗೆ ಈ ಕುರಿತು ಬೇಕಾದಷ್ಟು ಮಾಹಿತಿ ದೊರೆಯಲಿಲ್ಲ. ಈ ಸಮಸ್ಯೆ ಹೇಗಾದರೂ ದೂರ ಮಾಡಬೇಕು ಎಂಬ ಉದ್ದೇಶದಿಂದ ಸ್ವತಃ ತಾವೇ ಈ ಕುರಿತು ಅಭ್ಯಾಸ ಮಾಡಿ ಜನರಿಗೆ ತಿಳಿಸಬೇಕು ಎಂದು ನಿರ್ಧಾರ ಮಾಡಿದರು. ತನ್ನ ಮಗುವಿನ ಜೊತೆಗಿನ ಪ್ರವಾಸದ ಮೂಲಕ ಕಲಿತ ಪಾಠದ ವಿಡಿಯೋ ಪ್ರತಿಯೊಬ್ಬ ತಂದೆ ತಾಯಿಯರು ನೋಡಬೇಕು ಎಂಬ ಉದ್ದೇಶದಿಂದ ಒಂದು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಶುರು ಮಾಡಲು ನಿರ್ಧರಿಸಿದರು.
ಬ್ರಿಗ್ಸ್ ನ ಜನನವಾದ ನಂತರದ ಕೆಲವು ತಿಂಗಳಿಂದ ಲಾಕ್ಡೌನ್ ಬಂದಿತು. ಪ್ರವಾಸ ನಿಂತ ಸಮಯದಿಂದ ಅವರು ರಸ್ತೆಯ ಮೂಲಕ ನಡೆದುಕೊಂಡು ಹೋಗುವ ನಿರ್ಧಾರ ತಗೆದುಕೊಂಡರು. ಮೊದಲು ಸಣ್ಣ ಪ್ರವಾಸ ಮಾಡಿದರು. ಜನಸಂದಣಿ ಹೊಂದಿದ ಸ್ಥಳಕ್ಕೆ ಹೋಗುವದನ್ನು ತ್ಯಜಿಸಿದರು. ಬ್ರಿಗ್ಸ್ ನೊಂದಿಗಿನ ಎಲ್ಲಕ್ಕಿಂತ ದೊಡ್ಡ ವಿಮಾನ ಪ್ರವಾಸ ಎಂದರೆ ಉಟಾ ದಿಂದಾ ಹವಾಯಿವರೆಗಿನ ಪ್ರಯಾಣ ಆಗಿತ್ತು. ಏಕೆಂದರೆ ಈ ಪ್ರವಾಸ ಸತತವಾಗಿ 8 ಗಂಟೆಗಳವರೆಗಿನ ಪ್ರವಾಸವಾಗಿತ್ತು. ಈ ಪ್ರಯಾಣದಲ್ಲಿ ಮಗುವಿನೊಂದಿಗೆ ಪ್ರವಾಸ ಮಾಡುವದು ತುಂಬಾ ಕ#ಠಿಣ ವಾಗಿತ್ತು. ಆದರೆ ಮಗುವಿನ ಸುರಕ್ಷಿತತೆಯ ಎಲ್ಲ ಕ್ರಮಗಳನ್ನು ಕೈಗೊಂಡು ಪ್ರವಾಸ ಮಾಡಿದೆ” ಎಂದು ಬ್ರಿಗ್ಸ್ ತಾಯಿ ಹೇಳುತ್ತಾರೆ.

ಸದ್ಯಕ್ಕೆ ಬ್ರಿಗ್ಸ್ ಗೆ ಇಂತಹ ಪ್ರವಾಸದ ಅಭ್ಯಾಸವಾಗಿದೆ. ಹೊಸ ಹೊಸ ಸ್ಥಳಗಳನ್ನು ಹುಡುಕಾಡಿ ಅಲ್ಲಿ ಇರುವದು ಈತನಿಗೆ ಇಷ್ಟ ವಾಗುತ್ತದೆ. ಜೆಸ್ ಅವರ ಹೇಳುವದೇನೆಂದರೆ, ” ಈ ವಯಸ್ಸಿನಲ್ಲಿ ಕಂಡ ಸ್ಥಳಗಳು ಆತನಿಗೆ ನೆನಪು ಬರುವದಿಲ್ಲ, ಆದರೆ ಮಗುವಿನ ಬೆಳೆವಣಿಗೆಯ ಸಲುವಾಗಿ ವಿಭಿನ್ನ ಜನರು, ಅಲ್ಲಿಯ ವಿಭಿನ್ನ ಸಂಸ್ಕೃತಿ, ವಾತಾವರಣ, ಬೇರೆ ಬೇರೆಯಾದ ಸ್ಥಳಗಳಲ್ಲಿ ತಿರುಗಾಡುವದು ಮಹತ್ವದಾಗಿರುತ್ತದೆ. ಮಕ್ಕಳು ಬಹಳಷ್ಟು ಬೇಗ ಅಲ್ಲಿಯ ಪರಿಸರದೊಂದಿಗೆ ಹೊಂದಿಕೊಳ್ಳುತ್ತಾರೆ”. ಮುಂದಿನ 6 ತಿಂಗಳಲ್ಲಿ ಈ ಕುಟುಂಬ ಯುರೋಪ ದೇಶದ ಪ್ರವಾಸದ ನಿಯೋಜನೆ ಮಾಡಲಾಗುತ್ತಿದೆ. ಇವರ ಸೋಶಿಯಲ್ ಅಕೌಂಟ್ whereisbriggs ಗೆ 30.6k ಫಾಲೋರ್ಸ್ ಇದ್ದಾರೆ. ಅವರಿಗೆ ಪ್ರಾಯೋಜಕರೂ ಇದ್ದಾರೆ, ಅವರು ಉಚಿತವಾಗಿ ಡೈಪರ್‌ಗಳು ಮತ್ತು ವಾಯಿಪ್ಸ್ ನೀಡುತ್ತಾರೆ.
ಬ್ರಿಗ್ಸ್ ಫೋಟೋ ಮತ್ತು ವಿಡಿಯೋ ನೋಡಿದರೆ ಸಾಕು ಆತನನ್ನು ಫಾಲೋ ಮಾಡದೆ ನೀವು ಮುಂದೆ ಹೋಗಲು ಸಾಧ್ಯವಿಲ್ಲ.