t20 ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನವು ಭಾರತದ ಕೆಲಸವನ್ನು ಮಾಡಿತು ಇನ್ನಷ್ಟು ಸುಲಭ; ಹೇಗೆ ಅಂತೀರಾ ಇಲ್ಲಿ ನೋಡಿ…

ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಜೊತೆಗೆ 10 ವಿಕೆಟ್ಗಳ ಸೋಲು ಕಂಡಿತು. ಈಗ ಪಾಕಿಸ್ತಾನವು ಈ ವರ್ಲ್ಡ್ ಕಪ್ ನ ಎರಡನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿತು. ಪಾಕಿಸ್ತಾನದ ವಿಜಯದಿಂದ ಭಾರತಕ್ಕೂ ಲಾಭವಾಗಿದೆ. ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಪಾಕಿಸ್ತಾನವು ಭಾರತದ ಕೆಲಸವನ್ನು ಇನ್ನಷ್ಟು ಸುಲಭ ಮಾಡಿತು. ಈಗ ಭಾರತ ನ್ಯೂಜಿಲೆಂಡ್ ತಂಡವನ್ನು ಮಣಿಸಿದರೆ ಸೆಮಿಫೈನಲ್ ದಾರಿ ಇನ್ನಷ್ಟು ಸುಗಮವಾಗಲಿದೆ.

ಟಿ20 ಯ ಈ ಸ್ಪರ್ಧೆಯಲ್ಲಿ ಭಾರತದ ಅಸ್ತಿತ್ವ ಉಳಿಯಬೇಕಾದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಭಾರತ ಗೆಲ್ಲಲೇಬೇಕಾಗಿದೆ. ನ್ಯೂಜಿಲೆಂಡ್ ಮೇಲೆ ಭಾರತ ವಿಜಯ ಸಾಧಿಸಿದರೆ ಸೆಮಿಫೈನಲ್ ಗೆ ಹೋಗುವ ದಾರಿ ಅತ್ಯಂತ ಸರಳವಾಗಲಿದೆ. ತದನಂತರ ಟೀಂ ಇಂಡಿಯಾಗೆ ಅಪಘಾನಿಸ್ತಾನ್, ಸ್ಕಾಟ್ಲ್ಯಾಂಡ್ ಮತ್ತು ನಮೀಬಿಯಾ ತಂಡಗಳ ಜೊತೆಗೆ ಅದ್ಭುತ ಏನಾದರೂ ಘಟಿಸಿದೆ ಇದ್ದರೆ ಈ ಮೂರು ವಿಜಯಗಳನ್ನು ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಡಲಿದೆ.

ಗುಂಪಿನಲ್ಲಿಯ ಪ್ರತಿಯೊಂದು ತಂಡಕ್ಕೆ 5 ಪಂದ್ಯಗಳನ್ನು ಆಡಬೇಕಾಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಪಾಕಿಸ್ತಾನ ತಂಡವು ತನ್ನ ಐದು ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಇದೆ. ಭಾರತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಸಾಧ್ಯತೆ ಇದೆ. (ಒಂದು ವೇಳೆ ನ್ಯೂಜಿಲೆಂಡ್ ಜೊತೆಗೆ ಗೆದ್ದರೆ) ಭಾರತದ ಮುಂದಿನ ಪಂದ್ಯ ಅಕ್ಟೋಬರ್ 31ರಂದು ನ್ಯೂಜಿಲೆಂಡ್ ಜೊತೆಗೆ ನಡೆಯಲಿದೆ.

ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ಅಪಘಾನಿಸ್ತಾನ ತಂಡದ ಪ್ರಾಬಲ್ಯ ನೋಡಲಾಗಿ ಸೆಮಿಫೈನಲ್ ವರೆಗೆ ಆಡುವ ಸಾಧ್ಯತೆಗಳಿಲ್ಲ. ಆದರೆ ಈ ತಂಡ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಂತಹ ದೊಡ್ಡ ತಂಡಗಳ ಆಟವನ್ನು ಯಾವಾಗಬೇಕಾದರೂ ಕೆಡಿಸಬಹುದು. ಹೀಗಾಗಿ ಇಂಥ ಪರಿಸ್ಥಿತಿಯಲ್ಲಿ ಭಾರತ ತುಂಬಾ ಎಚ್ಚರಿಕೆಯ ಆಟ ಆಡಬೇಕಾಗಿದೆ. ಭಾರತಕ್ಕೆ ವಿಶೇಷವೆಂದರೆ ಅಪಘಾನಿಸ್ತಾನದ ಜೊತೆಗೆ ಎಚ್ಚರಿಕೆಯ ಆಟ ಆಡಬೇಕಾಗಿದೆ. ಅಫ್ಘಾನಿಸ್ತಾನ ತಂಡವು ದೊಡ್ಡ ತಂಡಕ್ಕೆ ಸ್ಪರ್ಧೆ ನೀಡಿ ಸೋಲಿಸುವ ಶಕ್ತಿ ಹೊಂದಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡದ ಜೊತೆಗೆ ಅಕ್ಟೋಬರ್ 31ರಂದು ನಡೆಯುವ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದರೆ ಭಾರತ ಈ t20 ವರ್ಲ್ಡ್ ಕಪ್ ನಿಂದ ಹೊರಬೀಳುವ ಸಾಧ್ಯತೆಯಿದೆ.