ಶಾರುಖ್ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿರುವಾಗಲೇ ಇತ್ತ ಆರ್ ಮಾಧವನ್ ಮಗ ವೇದಾಂತ ಮಾಡಿದ್ದು ನೋಡಿ…
ಬಾಲಿವುಡ್ ಕಿಂಗ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕು ಒದ್ದಾಡುತ್ತಿರುವದರಿಂದ ಎಲ್ಲ ಸ್ಟಾರ್ ಕಿಡ್ಸ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಟ್ರೊಲ್ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ನಟ ಆರ್ ಮಾಧವನ್ ಮಗ ವೇದಾಂತ ಮಾತ್ರ ತಂದೆಗೆ ಗರ್ವ, ಅಭಿಮಾನವೆನಿಸುವಂಥ ಕೆಲಸವನ್ನು ಮಾಡಿದ್ದಾನೆ. ಈ ಕಾರಣದಿಂದ ಮೀಡಿಯಾದಲ್ಲಿ ನೆಟ್ಟಿಗರು ವೇದಾಂತನಿಗೆ ಕೊಂಡಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಆರ್ ಮಾಧವನ್ ಮಗ ವೇದಾಂತ ಮಹಾರಾಷ್ಟ್ರಕ್ಕಾಗಿ ಏಳು ಪದಕಗಳನ್ನು ಗೆದ್ದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ವೀಟ್ ಮುಖಾಂತರ ವೇದಾಂತನನ್ನು ಬಾಯಿ ತುಂಬ ಹೊಗಳುತ್ತಿದ್ದಾರೆ.
‘ದ ಬ್ರಿಜ್’ ನೀಡಿದ ರಿಪೋರ್ಟ್ ಪ್ರಕಾರ, ವೇದಾಂತನು 800 ಮೀಟರ್ ಫ್ರೀ ಸ್ಟೈಲ್ ಸ್ವಿಮ್ಮಿಂಗ್, 1500 ಮೀಟರ್ ಫ್ರೀ ಸ್ಟೈಲ್, 4×100 ಫ್ರೀ ಸ್ಟೈಲ್ ಮತ್ತು 4×200 ಮೀಟರ್ ಫ್ರೀ ಸ್ಟೈಲ್ ಸ್ವಿಮ್ಮಿಂಗ್ ರಿಲೇ ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. 100 ಮೀಟರ್, 200 ಮೀಟರ್ ಮತ್ತು 400 ಮೀಟರ್ ಫ್ರೀ ಸ್ಟೈಲ್ ಸ್ವಿಮ್ಮಿಂಗ್ ನಲ್ಲಿ ರಜತವನ್ನು ಸಂಪಾದಿಸಿದ್ದಾರೆ.

ಆರ್ ಮಾಧವನ್ ಅವರು ತಮಿಳಿನೊಂದಿಗೆ ಬಾಲಿವುಡ್ ನಲ್ಲಿಯೂ ನಟಿಸುವರು. ಇವರು ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಯಾರೇ ಎಷ್ಟೇ ಶ್ರೀಮಂತರಾಗಿದ್ದರೂ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆಯನ್ನು ಕಲಿಸುವದೇ ನಿಜವಾದ ಶಿಕ್ಷಣವೆಂದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.