ಆರ್ಯನ್ ಖಾನ್ ಅವರ ಹೊಸ ವಕೀಲ ಮುಕುಲ್ ರೋಹತಗಿ ಯಾರು? ಇವರ ಒಂದು ಬಾರಿಯ ಫೀಸ್ ಕೇಳಿದರೆ ಆಶ್ಚ#ರ್ಯ ಪಡುವಿರಿ!

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕ್ರೂಸ್ ಡ್ರ#ಗ್ಸ್ ಪ್ರಕರಣದಲ್ಲಿ ಬಂಧನದ ನಂತರ ಕಳೆದ 24 ದಿನಗಳಿಂದ ಜೈಲಿನಲ್ಲಿದ್ದಾರೆ.  ಆರ್ಯನ್ ಖಾನ ಅವರಿಗೆ  ವಿಶೇಷ ನ್ಯಾಯಾಲಯ, ಕನಿಷ್ಠ  ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯವು  ಜಾಮೀನು ನೀಡಲಿಲ್ಲ. ಜಾಮೀನು ನೀಡುವ ಸಲುವಾಗಿ  ಮಂಗಳವಾರದಂದು ಸಲ್ಲಿಸಿದ ಅರ್ಜಿಯ ಕುರಿತು ಉಚ್ಚ ನ್ಯಾಯಾಲಯದಲ್ಲಿ  ಪರಿಶೀಲನೆ  ನಡೆದಿದೆ. ಬುಧವಾರವೂ ಸಹ ಈ ಪ್ರಕರಣದ ವಿಚಾರಣೆ ನಡೆದಿದೆ ಆದರೂ ಸಹಿತ ಅವರಿಗೆ ಜಾಮೀನು ಮಂಜೂರ ಮಾಡಲಿಲ್ಲ.  ಇಬ್ಬರು ಹಿರಿಯ ವಕೀಲರಾದ ಸತೀಶ್ ಮನ್ಶಿಂದೆ ಮತ್ತು ಅಮಿತ್ ದೇಸಾಯಿ ಅವರು ಆರ್ಯನ್ ಖಾನ್‌ಗೆ  ಜಾಮೀನು ನೀಡಲು ಇವರಿಂದ ಇನ್ನೂ ಸಾಧ್ಯವಾಗಿಲ್ಲ.

ಇಂತಹ ಪರಸ್ಥಿತಿಯಲ್ಲಿ  ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹತಗಿ ಇದೀಗ ಆರ್ಯನ್ ಖಾನ್ ಪರ ಹೈಕೋರ್ಟ್ ನಲ್ಲಿ ವಾದ ಮಂಡಿಸಲಿದ್ದಾರೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ನ್ಯಾಯಾಲಯದಲ್ಲಿ ವಕೀಲರಾದ ಸತೀಶ್ ಮನ್ಶಿಂದೆ ಮತ್ತು ಅಮಿತ್ ದೇಸಾಯಿ ಮತ್ತು ಮುಕುಲ್ ರೋಹತಗಿ ಹಾಜರಿದ್ದರು. ಖ್ಯಾತ ವಕೀಲ ಮುಕುಲ್ ರೋಹತಗಿ ಅವರು ಮುಂಬೈನ ಸರ್ಕಾರಿ ವಿಧಿ ಮಹಾವಿದ್ಯಾಲಯದಲ್ಲಿ  ಕಾನೂನು ಕುರಿತು ಅಧ್ಯಯನ ಮಾಡಿದ್ದಾರೆ. ಅಲ್ಲಿಂದ ಶಿಕ್ಷಣ ಪಡೆದುಕೊಂಡು ರೋಹತಗಿಯವರು ಅಂದಿನ ಪ್ರಸಿದ್ಧ ವಕೀಲರಾದ ಯೋಗೇಶ್ ಕುಮಾರ ಸಭರವಾಲ್ ಇವರ ಕನಿಷ್ಠ ವಕೀಲರಾಗಿ ವೃತ್ತಿಯ ಪ್ರಾರಂಭ ಮಾಡಿದರು.

ಯೋಗೇಶ್ ಕುಮಾರ್ ಸಬರ್ವಾಲ್ ಅವರು 2005-2007ರ ಅವಧಿಯಲ್ಲಿ ದೇಶದ 36ನೇ ಮುಖ್ಯ ನ್ಯಾಯಮೂರ್ತಿಗಳೂ ಆಗಿದ್ದರು.  ಮುಕುಲ್ ರೋಹತಗಿ ಅವರಿಗೆ ದೆಹಲಿ ಹೈಕೋರ್ಟ್ 1993 ರಲ್ಲಿ ಹಿರಿಯ ಕೌನ್ಸಿಲ್ ಸ್ಥಾನಮಾನವನ್ನು ನೀಡಿತು ಮತ್ತು 1999 ರಲ್ಲಿ ರೋಹತಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆದರು.  2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮುಕುಲ್ ರೋಹತಗಿ ಗುಜರಾತ್ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.  ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನ್ಯಾಯಾಲಯದಲ್ಲೂ ವಾದ ಮಂಡಿಸಿದ್ದರು.

ಇದಲ್ಲದೇ ಬೆಸ್ಟ್ ಬೇಕರಿ ಪ್ರಕರಣ, ಜಹೀರಾ ಶೇಖ್ ಪ್ರಕರಣ, ಯೋಗೀಶ್ ಗೌಡ ಹ#ತ್ಯೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೋ#ರಾಟ ನಡೆಸಿದ್ದಾರೆ. ಮುಕುಲ್ ರೋಹತಗಿ ಅವರ ತಂದೆ ಅವಧ್ ಬಿಹಾರಿ ರೋಹತಗಿ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು.  ಜೂನ್ 19, 2014 ರಂದು ಅವರನ್ನು ದೇಶದ ಅಟಾರ್ನಿ ಜನರಲ್ ಆಗಿ ಮಾಡಲಾಯಿತು.  ಮುಕುಲ್ ಅವರು ಜೂನ್ 18, 2017 ರವರೆಗೆ ದೇಶದ 14 ನೇ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದರು.  ಮುಕುಲ್  ಅವರು ದೇಶದ ಖ್ಯಾತ ವಕೀಲರು ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ಸದಸ್ಯರಾಗಿದ್ದಾರೆ.

ಇತ್ತೀಚೆಗೆ, ಆರ್ಯನ್ ಖಾನ್ ಅವರನ್ನು ಹಿರಿಯ ವಕೀಲ ಮುಕುಲ್ ರೋಹತಗಿ ಬೆಂಬಲಿಸಿದರು.  ಸೆಷನ್ಸ್ ನ್ಯಾಯಾಲಯವು ಜಾಮೀನು ತಿರಸ್ಕರಿಸುವ ಮೊದಲು, ಮುಕುಲ್ ರೋಹಟಗಿ “ಆರ್ಯನ್ ಅವರನ್ನು ಜೈಲಿನಲ್ಲಿ ಇರಿಸಲು ಯಾವುದೇ ಸಮರ್ಥನೀಯ ಕಾರಣವಿಲ್ಲ” ಎಂದು ಹೇಳಿದ್ದರು.  ಎನ್‌ಸಿಬಿ ಮೇಲೆ ದಾಳಿ ನಡೆಸಿದ ಅವರು, ‘ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮರಳಿನಲ್ಲಿ ತಲೆ ಮರೆಸಿಕೊಂಡಿರುವ ಆಸ್ಟ್ರಿಚ್‌ನಂತಾಗಿದೆ’ ಎಂದು  ಹೇಳಿದ್ದರು. ಆರ್ಯನ್ ಸೆಲೆಬ್ರಿಟಿಗಳ ಮಗನಾಗಿದ್ದರಿಂದ ಈ ರೀತಿ ಬೆಲೆ ತೆರುತ್ತಿದ್ದಾರೆ ಎಂದು ಆರ್ಯನ್ ಪರ ವಾದ ಮಾಡಿದ್ದಾರೆ.

ಸಿಕ್ಕ ಮಾಹಿತಿಯ ಪ್ರಕಾರ, ರೋಹತಗಿಯವರು ಒಂದು ಬಾರಿಯ ವಿಚಾರಣೆಗೆ ಸುಮಾರು 10 ಲಕ್ಷ ರೂಪಾಯಿ ತಗೆದುಕೊಳ್ಳುತ್ತಾರೆ. ಆದರೆ ಆರ್ ಟಿ ಐಗೆ  ನೀಡಿದ ಉತ್ತರದಲ್ಲಿ ಮಹಾರಾಷ್ಟ್ರ ಸರಕಾರವು ಹೇಳಿದ್ದೇನೆಂದರೆ, ಅವರು ಮಹಾರಾಷ್ಟ್ರ ಸರಕಾರದ ವತಿಯಿಂದ ನ್ಯಾಯಮೂರ್ತಿ ‘ ಬಿ ಎಚ್ ಲೋಯಾ ಪ್ರಕರಣದ ಸಲುವಾಗಿ ವರಿಷ್ಠ ಕೌನ್ಸಿಲ್ ಮುಕುಲ್ ರೋಹತಗಿ ಯವರಿಗೆ ಫೀ ಸ್ವರೂಪದಲ್ಲಿ 1.21 ಕೋಟಿ ರೂಪಾಯಿ ಕೊಟ್ಟಿದ್ದಾಗಿ ತಿಳಿಸಿದೆ.