ಆರ್ಯನ್ ಖಾನ್ ಸಹ ಮೂವರಿಗೆ ಜಾಮೀನು ನೀಡಿದ ಮುಂಬೈ ಹೈ ಕೋರ್ಟ್!
ಆರ್ಯನ್ ಖಾನ್ ಜಾಮೀನು: ಕ್ರೂಸ್ ನಲ್ಲಿ ಡ್ರ#ಗ್ ಪಾರ್ಟಿ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸಹ ಮೂವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಮುಂಬೈ ಹೈಕೋರ್ಟ್ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮೂನ್ಮೂನ್ ಧಮೇಚಾ ಅವರಿಗೆ ಜಾಮೀನು ಮಂಜೂರ ಮಾಡಿದೆ. ಮೂರು ದಿನಗಳ ಕಾಲ ವಾದವಿವಾದವನ್ನು ಪರಿಶೀಲಿಸಿದ ನ್ಯಾಯಾಲಯ ಇದೀಗ ಸಂಪೂರ್ಣ ಆದೇಶದ ಪ್ರತಿಯನ್ನು ನಾಳೆ (ಶುಕ್ರವಾರ) ಬಹಿರಂಗ ಪಡಿಸಲಿದೆ. ನಾಳೆ ಅಥವಾ ಶನಿವಾರದ ವೇಳೆಗೆ ಆರ್ಯನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಆರ್ಯನ್ ಪರ ವಕೀಲರು ತಿಳಿಸಿದ್ದಾರೆ. ಆರ್ಯನ್ ಖಾನ್ ಪರ ವಕೀಲ ಮುಕುಲ್ ರೋಹಟಗಿ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅನಿಲ್ ಸಿಂಗ್ ನಡುವಿನ ವಿಚಾರಣೆಯ ನಂತರ ಜಾಮೀನು ನೀಡಲಾಗಿದೆ. ನ್ಯಾಯಾಲಯವು ಅರ್ಬಾಜ್ ಮರ್ಚೆಂಟ್ ಪರ ಅಮಿತ್ ದೇಸಾಯಿ ಮತ್ತು ಮೂನ್ಮೂನ್ ಧಮೇಚಾ ಪರವಾಗಿ ಕಾಶಿಫ್ ಅಲಿ ಈ ಇಬ್ಬರು ವಕೀಲರ ವಾದವನ್ನು ಸಹ ಪರಿಶೀಲಿಸಿದೆ. ಎನ್ಸಿಬಿ ಅಕ್ಟೋಬರ್ 3 ರಂದು ಆರ್ಯನ್, ಅರ್ಬಾಜ್ ಮತ್ತು ಮೂನ್ಮೂನ್ ಅವರನ್ನು ಬಂಧಿಸಿತ್ತು.
“ಕ್ರೂಜ್ ನಲ್ಲಿ ಎಂಟು ಜನರ ಕಡೆಗೆ ಡ್ರ#ಗ್ಸ್ ದೊರಕಿದೆ. ಅಷ್ಟೇ ಅಲ್ಲ ಅವರ ವಾಟ್ಸಾಪ್ ಚಾಟ್ ಸಹ ಲಭ್ಯವಾಗಿದೆ. ಪಂಚನಾಮದಲ್ಲೂ ಇದರ ಉಲ್ಲೇಖವಿದೆ. ಕೆಲವು ಆ#ರೋಪಿಗಳ ಹತ್ತಿರ ವ್ಯಾಪಾರ ಪ್ರಮಾಣದ ಮತ್ತು ವಿವಿಧ ರೀತಿಯ ಮಾ#ದಕ ದ್ರವ್ಯಗಳನ್ನು ಹೊಂದಿರುವುದು ಪತ್ತೆಯಾಗಿದೆ. ಅಲ್ಲದೆ, 11 ಜನರ ಈ ಗುಂಪು ಕ್ರೂಜ್ ನಲ್ಲಿ ಭೇಟಿಯಾಗುವವರಿದ್ದರು. ಆದ್ದರಿಂದ ಅವುಗಳನ್ನು ವೈಯಕ್ತಿಕ ಬಳಕೆಗಾಗಿ ಇರಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ಎನ್ಡಿಪಿಎಸ್ ಪ್ರಕರಣಗಳಲ್ಲಿ ಜಾಮೀನು ನಿಯಮವಿರುವದಿಲ್ಲ. ಮೇಲ್ನೋಟಕ್ಕೆ ಪ್ರಕರಣವಿದ್ದರೆ, ಜಾಮೀನು ನಿರಾಕರಿಸಬಹುದು” ಎಂದು ಎನ್ಸಿಬಿ ವಕೀಲ ಅನಿಲ್ ಸಿಂಗ್ ಇತರ ಪ್ರಕರಣಗಳನ್ನು ಉಲ್ಲೇಖಿಸಿ ವಾದಿಸಿದರು.
“ಆರೋಪಿಗಳನ್ನು ಬಂಧಿಸುವ ಮುನ್ನ ತನಿಖಾ ಸಂಸ್ಥೆ ಬಂ#ಧನಕ್ಕೆ ಕಾರಣಗಳನ್ನು ತಿಳಿಸುವ ನಿರೀಕ್ಷೆ ಇತ್ತು. ಆದರೆ, ಕೇಂದ್ರ ಮಾ#ದಕ ವಸ್ತು ನಿಯಂತ್ರಣ ಮಂಡಳಿ (ಎನ್ ಸಿಬಿ) ಸೂಕ್ತ ಕಾರಣ ನೀಡದೆ ಬಂಧಿಸುವ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ” ಎಂದು ಆರೋಪಿಸಿ ಆರ್ಯನ್ ಸೇರಿದಂತೆ ಮೂವರು ಬುಧವಾರ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.
Bombay High Court grants bail to Aryan Khan in drugs-on-cruise case pic.twitter.com/MerVWcfpYZ
— ANI (@ANI) October 28, 2021
ಹೀಗಾಗಿ ಅವರ ವಾದವಿವಾದಗಳನ್ನು ಪರಿಶೀಲಿಸಿದ ಹೈ ಕೋರ್ಟ್ ಕೊನೆಗೆ ಈ ಮೂವರನ್ನು ಜಾಮಿನು ಮಂಜೂರ ಮಾಡಲಾಗಿದೆ. ಆರ್ಯನ್ ಪರ ಎರಡು ದಿನಗಳ ಹಿಂದೆಯಷ್ಟೇ ದಾವೆ ನಡೆಸಿರುವ ವಕೀಲ ಮುಕುಲ್ ರೋಹಟಗಿಯವರ ವಿಚಾರಕ್ಕೆ ಹೈಕೋರ್ಟ್ ಕೊನೆಗೆ ಜಾಮೀನು ಮಂಜೂರ ಮಾಡಲಾಗಿದೆ.