ಸೋನು ಸರ್, ವಲಸಿಗರನ್ನು ಮನೆ ತಲುಪಿಸುವ ಕೆಲಸ ಎಲ್ಲಿಯವರೆಗೆ ಮಾಡುತ್ತೀರಿ? ಅಭಿಮಾನಿಯೊಬ್ಬನ ಪ್ರಶ್ನೆಗೆ ಸೋನು ಸರ್ ಅವರು ಕೊಟ್ಟ ಉತ್ತರವೇನು…?

ಲಾಕ್ ಡೌನ್ ಸಂದರ್ಭದಲ್ಲಿ ಬಾಲಿವುಡ್ ಎಕ್ಟರ್ ಸೋನು ಸೂದ್ ಅವರು, ದೇಶದ ಮೂಲೆ ಮೂಲೆಗಳಲ್ಲಿ ಯಾವುದೇ ದಾರಿ ಕಾಣದೆ ತಮ್ಮೂರಿಗೆ ಹೋಗಲು ತವಕಿಸುತ್ತಿದ್ದ ವಲಸೆ ಕಾರ್ಮಿಕರನ್ನು ಅವರವರ ಗೂಡಿಗೆ ಸೇರಿಸುವ ಮಹತ್ವದ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.

ಅವರು ಮಾಡುವ ಈ ಮಹತ್ವದ ಕೆಲಸದಿಂದ ದೇಶವೇ ಅವರನ್ನು ಕೊಂಡಾಡುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿಯಂತೂ ಸೋನು ಸೂದ್ ಅವರು ಟ್ರೆಂಡಿಂಗ್ ನಲ್ಲಿದ್ದಾರೆ. ಚಲನಚಿತ್ರಗಳಲ್ಲಿ ಮುಖ್ಯವಾಗಿ ಖಳನಟನಾಗಿಯೇ ಕಾಣಿಸುವ ಇವರು ನಿಜಜೀವನದಲ್ಲಿ ಮಾನವೀಯತೆಯ ಮೌಲ್ಯಗಳಿಗೆ, ಭಾವನೆಗಳಿಗೆ ಎಷ್ಟೊಂದು ಬೆಲೆ ಕೊಡುತ್ತಾರೆ ಎಂಬ ಸತ್ಯ ಅವರು ಮಾಡುತ್ತಿರುವ ಈ ಕೆಲಸವೇ ಸಾಕ್ಷಿ.

ಅವರ ಈ ಕೆಲಸವನ್ನು ನೋಡಿ ದಿನಾಲು ಸೋಶಿಯಲ್ ಮಿಡಿಯಾದ ಘಟಕಗಳಾದ ಫೇಸ್ಬುಕ್, ಟ್ವೀಟರ್ ಗಳಂತಹ ಮಾಧ್ಯಮಗಳಲ್ಲಿ ಸಾವಿರಾರು ಜನರು ಸಾವಿರಾರು ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅವುಗಳು ಹೇಗಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಅವರೆಲ್ಲರಿಗೂ ಸೋನು ಅವರು ಅಷ್ಟೇ ಶಾಂತವಾಗಿ ಪ್ರತ್ಯುತ್ತರವನ್ನು ಕೊಟ್ಟು ಸ್ಪಂದಿಸುತ್ತಿದ್ದಾರೆ.

ಟ್ವೀಟರ್ ನಲ್ಲಿ ಹೀಗೆಯೇ ಒಬ್ಬ ‘ಸೋನು ಸೂದ್ ಸರ್, ನೀವು ಎಲ್ಲಿಯವರೆಗೆ ಈ ವಲಸಿಗರಿಗೆ ಅವರ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಮಾಡುವಿರಿ? ಸಮಯದ ಮರ್ಯಾದೆ ಏನಾದರೂ ಇಟ್ಟಿದ್ದೀರಾ? ಇನ್ನು ಎಷ್ಟು ದಿನಗಳ ವರೆಗೆ ನೀವು ಅವರನ್ನು ಅವರ ನಿರ್ದಿಷ್ಟವಾದಸ್ಥಾನಕ್ಕೆ ಒಯ್ದು ಮುಟ್ಟಿಸುವಿರಿ? ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸೋನು ಅವರು ಹೇಳಿದ ಉತ್ತರ ಹೀಗಿತ್ತು…

<blockquote class=”twitter-tweet”><p lang=”hi” dir=”ltr”>आख़री प्रवासी ही मेरी मंज़िल है मेरे भाई। <a href=”https://t.co/nnOqDmWvsD”>https://t.co/nnOqDmWvsD</a></p>&mdash; sonu sood (@SonuSood) <a href=”https://twitter.com/SonuSood/status/1267541408971280384?ref_src=twsrc%5Etfw”>June 1, 2020</a></blockquote> <script async src=”https://platform.twitter.com/widgets.js” charset=”utf-8″></script>

“ಕಟ್ಟ ಕಡೆಯ ವಲಸಿಗನಿಗೆ ಆತನ ಸ್ಥಳಕ್ಕೆ ಒಯ್ದು ಮುಟ್ಟುಸುವದೇ ನನ್ನ ಗುರಿ” ಅಲ್ಲಿ ವರೆಗೆ ನನ್ನ ಈ ಕೆಲಸ ನಡೆದೇ ಇರುತ್ತೆ, ಎಂದು ಹೇಳಿದ್ದಾರೆ.