ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನದ ಈ ಆಟಗಾರನ ಟ್ವೀಟ್ ವೈರಲ್; ಶಮಿಗೆ ತೆಗಳಿದವರಿಗೆ…

T20 ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಹೀನಾಯ ಸೋಲು ಎಲ್ಲರಿಗೂ ಗೊತ್ತೇ ಇದೆ. ಈ ಸೋಲಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ಶಮಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರಿಗೆ ಬೈಗುಳ ಸಹಿತ ನೀಡಲಾಗುತ್ತಿದೆ. ತಂಡ ಮತ್ತು ದೇಶದ ಮೇಲಿನ ನಿಷ್ಠೆಯ ಬಗ್ಗೆ ಸಂಶಯ ವ್ಯಕ್ತ ಮಾಡಲಾಗುತ್ತಿದೆ. ಮತ್ತು ಅವರ ಬಗ್ಗೆ ಅನವಶ್ಯಕವಾದ ಮಾತುಗಳನ್ನು ಆಡಲಾಗುತ್ತಿದೆ. ಈ ಕಠಿಣ ಪ್ರಸಂಗದಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ರಂತಹ ದಿಗ್ಗಜರು ಮೊಹಮ್ಮದ್ ಶಮಿಗೆ ಸಮರ್ಥನೆಯನ್ನು ನೀಡಿದ್ದಾರೆ. ಈಗ ಮೊಹಮ್ಮದ್ ಶಮಿಗೆ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಸಹ ಬೆಂಬಲ ನೀಡಿದ್ದಾರೆ. ಇವರು ತಮ್ಮ ಟ್ವೀಟ್ ನಲ್ಲಿ ಶಮಿಗೆ ಸಮರ್ಥನೆಯನ್ನು ನೀಡಿದ್ದಾರೆ. ಮಾಧ್ಯಮಗಳಲ್ಲಿ ಶಮಿ ಅವರನ್ನು ದ್ವೇಷಿಸುವವರಿಗೆ ಹಿಡಿಶಾಪ ಹಾಕಿದ್ದಾರೆ.

ಮೊಮ್ಮದ್ ರಿಜ್ವಾನ್ ತಮ್ಮ ಟ್ವೀಟ್ ನಲ್ಲಿ, ಒಬ್ಬ ಆಟಗಾರ ತನ್ನ ದೇಶಕ್ಕಾಗಿ ಮತ್ತು ಜನರಿಗಾಗಿ ಆಡುವಾಗ ಯಾವ ರೀತಿಯ ಒತ್ತಡ, ಸಂಘರ್ಷ ಮತ್ತು ತ್ಯಾಗ ಮಾಡುತ್ತಾನೆ ಎಂಬುದರ ಬಗ್ಗೆ ಕಲ್ಪನೆಯು ಮಾಡಲು ಅಸಾಧ್ಯವಿದೆ. ಮೊಹಮ್ಮದ್ ಶಮಿ ಒಬ್ಬ ಸ್ಟಾರ್ ಆಟಗಾರ ಮತ್ತು ಜಗತ್ತಿನ ಉತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ದಯವಿಟ್ಟು ನಿಮ್ಮ ಆಟಗಾರರನ್ನು ಗೌರವಿಸಿ, ಆಟವು ಎಲ್ಲರನ್ನು ಸಮೀಪ ತೆಗೆದುಕೊಂಡು ಬರಬೇಕು, ಅವರನ್ನು ವಿಭಜಿಸಬಾರದು, ಎಂದು ಮೊಮ್ಮದ್ ರಿಜ್ವಾನ್ ತಮ್ಮ ಟ್ವೀಟ್ ನಲ್ಲಿ ಮೊಮ್ಮದ್ ಶಮಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.