ರಿಬ್ರಾಂಡಿಂಗ್: ರಾತ್ರೋರಾತ್ರಿ ಫೇಸ್ಬುಕ್ ಹೆಸರನ್ನು ಬದಲಾಯಿಸಿ ‘ಮೆಟಾ’ ಹೆಸರನ್ನಿಟ್ಟ ಮಾರ್ಕ್ ಜೂಕರಬರ್ಗ್ !
ಸೋಶಿಯಲ್ ಮೀಡಿಯಾದಲ್ಲಿ ಎಲ್ಲಕ್ಕಿಂತ ಹೆಚ್ಚು ಉಪಯೋಗ ಮಾಡುವ ಸಾಧನ ಎಂದರೆ ಅದು ಫೇಸ್ಬುಕ್ ಹೌದು. ಇಂದು ಪ್ರತಿಯೊಬ್ಬರೂ ದಿವಸಕ್ಕೆ ಅದೆಷ್ಟೋ ಸಲ ಫೇಸ್ಬುಕ್ ಉಪಯೋಗ ಮಾಡುತ್ತಾರೆ ಎಂಬುದು ಅವರಿಗೆ ತಿಳಿಯುವದಿಲ್ಲ. ಫೇಸ್ಬುಕ್ ನಲ್ಲಿ ಎಲ್ಲ ಸೌಲಭ್ಯಗಳಿವೆ ಅಂದರೆ ಉತ್ತಮವಾದ ಆರ್ಟಿಕಲ್ಸ್, ಉತ್ತಮವಾದ ವಿಡಿಯೋ, ಫೋಟೋಗಳನ್ನು ಸಹ ನೋಡಲು ನಮಗೇ ದೊರೆಯುತ್ತದೆ. ಇದರಿಂದ ಎಲ್ಲ ವಿಷಯಗಳು ಒಂದೇ ಆಪ್ ನಲ್ಲಿ ದೊರೆಯುವದರಿಂದ ಹೆಚ್ಚಾಗಿ ಜನರು ಫೇಸ್ಬುಕ್ ಉಪಯೋಗ ಮಾಡುತ್ತಿದ್ದಾರೆ.
ಫೇಸ್ಬುಕ್ ಫೌಂಡರ್ ಮಾರ್ಕ್ ಜೂಕಾರಬರ್ಗ್ ಅವರು ಫೇಸ್ಬುಕ್ 2004 ರಲ್ಲಿ ರಚನೆ ಮಾಡಿದ್ದಾರೆ. ಇವರು ತಮ್ಮ ಕಾಲೇಜ್ ಕಲಿಯುತ್ತಿರುವಾಗ ಇದರ ರಚನೆ ಮಾಡಿದ್ದಾರೆ. ಸುಮಾರು 17 ವರ್ಷಗಳ ವರೆಗೆ ಫೇಸ್ಬುಕ್ ನಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ಆದರೆ ಕೆಲವು ದಿವಸಗಳ ಹಿಂದೆ ಫೇಸ್ಬುಕ್ ನ್ನು ರಿಬ್ರಾಂಡಿಂಗ್ ಮಾಡುವ ಉದ್ದೇಶವನ್ನು ಮಾರ್ಕ್ ಅವರು ಹೊಂದಿದ್ದರು. ಆದ್ದರಿಂದ ನಿನ್ನೆ ಅಂದರೆ ಗುರುವಾರ ರಾತ್ರಿ ಸಭೆಯೊಂದು ತಗೆದುಕೊಂಡು ಫೇಸ್ಬುಕ್ ಹೆಸರನ್ನು ಬದಲಾಯಿಸಿ ಅದಕ್ಕೆ ‘ಮೆಟಾ’ ಎಂಬ ಹೊಸ ಹೆಸರನ್ನು ನೀಡಿದ್ದಾರೆ. ಹೀಗಾಗಿ ಈ ಅಪ್ ನ್ನು ಮೆಟಾ ಹೆಸರಿನಿಂದ ಪರಿಚಯಿಸಲಾಗುತ್ತದೆ.

ನಿನ್ನೆಯಿಂದ ವಿಕಿಪೀಡಿಯಾದಲ್ಲಿ ಸಹ ಫೇಸ್ಬುಕ್ ನ ಕುರಿತು ಮಾಹಿತಿ ಬದಲಾವಣೆ ಮಾಡಲಾಗಿದೆ. ಅಂದರೆ ಫೇಸ್ಬುಕ್ ಎಂಬ ಹೆಸರು ತಗೆದು ಮೆಟಾ ಎಂಬ ಹೆಸರು ಇಡಲಾಗಿದೆ. ಅಷ್ಟೇ ಅಲ್ಲ ಮೆಟಾದ ಹೊಸ ಲೋಗೋ ಸಹ ಇಡಲಾಗಿದೆ. ಮೇಲಿನ ಫೋಟೋದಲ್ಲಿ ಮೆಟಾದ ಹೊಸ ಲೋಗೋ ಕಾಣಬಹುದು.