‘ಪುನೀತ್’ ಅಂತ್ಯಕ್ರಿಯೆ ತಮ್ಮ ಫಾರ್ಮ್ ಹೌಸ್ ನಲ್ಲಿ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ ರಾಜ್ ಕುಟುಂಬ!!
ಕನ್ನಡ ಚಲನಚಿತ್ರರಂಗದ ಒಂದು ರತ್ನ ಇಂದು ಕಳೆದು ಹೋಗಿದೆ. ಮರಳಿ ಬಾರದ ಊರಿಗೆ ಪಯಣಿಸಿದ ಪುನೀತ್ ರಾಜಕುಮಾರ್. ನಾಡಿನ ಮಾಣಿಕ್ಯ ಮರೆ ಮಾಚಿದೆ. ಅದೆಷ್ಟೋ ಆಸೆ, ಕನಸ್ಸುಗಳ ಹೊತ್ತು ಸಾಗುತ್ತಿರುವ ಪಯಣದಲ್ಲಿ ದೇವರೇ ಬಂದು ಅವರ ಪಯಣದಿಂದ ಮುಕ್ತಿ ನೀಡಿದ್ದಾನೆ. ಚಂದನವನಕ್ಕೆ ಉತ್ತಮ ಹೆಸರು ತಂದು ಕೊಟ್ಟ ನಟರಲ್ಲಿ ಇವರೊಬ್ಬರು. ಇವರ ಅಭಿನಯ ಕಂಡು ಮಕ್ಕಳಿಂದ, ವೃದ್ಧರು ಕುಣಿದು ಕುಪ್ಪಳಿಸುವರು. ಅವರು ಮಾಡಿದ ಅದೆಷ್ಟೋ ಸಿನಿಮಾಗಳು ನಿಜ ಜೀವನದಲ್ಲಿ ತುಂಬಾ ಉಪಕಾರಿಯಾಗಿವೆ. ರಾಜಕುಮಾರ್ ಚಿತ್ರವನ್ನು ನೋಡಿ ಸುಮಾರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವೃದ್ಧಾಶ್ರಮದಲ್ಲಿದ್ದ ತಂದೆ-ತಾಯಿಗಳನ್ನು ತಮ್ಮ ಮಕ್ಕಳು ಮನೆಗೆ ಕರೆದುಕೊಂಡು ಹೋಗಿದ್ದಾರೆ.. ಗುಣಮಟ್ಟದ ಚಿತ್ರವನ್ನು ನಟಿಸುವ ಜೊತೆಗೆ ನಿಜ ಜೀವನದಲ್ಲಿ ಸಹ ರಾಜಕುಮಾರ್ ನ ಹಾಗೆ ಬದುಕುತ್ತಿದ್ದರು ಅಪ್ಪು.
ಈ ಕರಾಳ ದಿನಂದದು ಅಪ್ಪು ನಮ್ಮನ್ನೆಲ್ಲ ಆಗಲಿ ಹೋದ ಸುದ್ಧಿ ಕೇಳಿದರೆ ನಮ್ಮ ಕಣ್ತುಂಬ ನೀರು ಬರುತ್ತಿವೆ. ನಮಗೆ ಇಷ್ಟು ದುಃಖವಾಗಬೇಕಾದರೆ ಇನ್ನೂ ಅವರ ಕುಟುಂಬದವರಿಗೆ ಎಷ್ಟೊಂದು ದುಃಖ ವಾಗಿರಬಾರದು. ಮುಂಜಾನೆ ಇದ್ದ ಅಪ್ಪು ಈಗ ಅವರ ಮಧ್ಯದಲ್ಲಿಲ್ಲ ಎಂಬ ಸತ್ಯವನ್ನ ಊಹಿಸಿದರೆ ಸಾಕು ದುಃಖದ ಸಾಗರವೇ ಹರಿಯುತ್ತದೆ. ಅಪ್ಪು ಅವರ ಕೊನೆಯ ಅಂದರೆ ಅಂತಿಮ ಕ್ರಿಯೆಯನ್ನು ಕಂಠೀರವ ಸ್ಟೇಡಿಯಂನಲ್ಲಿ ರಾಜಕುಮಾರ್ ಅವರ ಸ್ಮಾರಕದ ಬಳಿಯಲ್ಲಿ ಮಾಡಬೇಕು ಎಂಬ ಯೋಚನೆ ಸರಕರದಾಗಿತ್ತು. ಆದರೆ ಅದಕ್ಕೆ ಅಪ್ಪು ಅವರ ಕುಟುಂಬ ಸಹಮತಿ ನೀಡಲಿಲ್ಲ.

“ಅಪ್ಪು ಅವರ ಪ್ರೀತಿಗಾಗಿ ನೀವು ಕೊಟ್ಟಿರುವ ಸಹಕಾರ್ಯಕ್ಕೆ ತುಂಬಾ ಧನ್ಯವಾದಗಳು, ಅಪ್ಪು ಅವರ ಅಂತಿಮ ಕ್ರಿಯೇ ಅವರ ಫಾರ್ಮ್ ಹೌಸ್ ನಲ್ಲಿ ಮಾಡುತ್ತೇವೆ” ಎಂದು ಅಪ್ಪು ಅವರ ಮಡದಿ ಸರಕಾರಕ್ಕೆ ತಿಳಿಸಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಗ್ರಾಮದ ಬಳಿ ಒಟ್ಟು 13 ಎಕರೆ 8 ಗುಂಟೆ ಜಮೀನಿನಲ್ಲಿ ಪುನೀತ್ ಫಾರ್ಮ್ ಹೌಸ್ ಇದೆ. ಪುನೀತ್ ರಾಜಕುಮಾರ್ ಅವರು ಆಗಾಗ್ಗೆ ಈ ಫಾರ್ಮ್ ಹೌಸ್ ನಲ್ಲಿ ಬಂದು ಹೋಗುತ್ತಿದ್ದರು. ಇದರ ವಿಕಾಸ ಮಾಡುವದು ಅವರ ಉದ್ದೇಶವಾಗಿತ್ತು. ಆದರೆ ವಿಧಿಬರಹ ನೋಡಿ ಕೊನೆಗೆ ಅಪ್ಪು ಅವರೇ ಈ ಮಣ್ಣಲ್ಲಿ ಲೀನರಾಗುವ ಸಮಯ ಬಂದಿದೆ. ವರದಿಯ ಪ್ರಕಾರ ಭಾನುವಾರ ಮಧ್ಯಾಹ್ನದಂದು ಪುನಿತ್ ಅವರ ಅಂತ್ಯಕ್ರಿಯೆ ಈ ಶೇಷಗಿರಿಹಳ್ಳಿಯ ಫಾರ್ಮ್ ಹೌಸ ನಲ್ಲಿ ನಡೆಯುವ ಸಾಧ್ಯತೆ ಇದೆ.