Elon Musk ರಚಿಸಿದರು ಇತಿಹಾಸ; ಒಂದೇ ದಿನದಲ್ಲಿ ಗಳಿಸಿದರು… 2,71,50,00,000,000 ರೂಪಾಯಿಗಳು.
ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಕಂಪನಿ ಟೆಸ್ಲಾದ ಮಾಲೀಕ ಮತ್ತು ಜಗತ್ತಿನ ಎಲ್ಲಕ್ಕೂ ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್ ಅವರು ಇತಿಹಾಸವನ್ನೇ ನಿರ್ಮಿಸಿದ್ದಾರೆ.
ಯಾವುದೇ ಶ್ರೀಮಂತ ವ್ಯಕ್ತಿಯ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ಹೆಚ್ಚಳವಾಗಿರುವ ಅತಿದೊಡ್ಡ ಗಳಿಕೆ ಇದಾಗಿದೆ.
ಟೆಸ್ಲಾ ಮಾಲೀಕ ಎಲನ್ ಮಸ್ಕ್ ಅವರ ಸಂಪತ್ತಿನಲ್ಲಿ 2.71 ಲಕ್ಷ ಕೋಟಿ ರೂಪಾಯಿಗಳ ಹೆಚ್ಚಳವಾಗಿದೆ. Bloomberg Billionaires Index ಪ್ರಕಾರ ಎಲನ್ ಮಸ್ಕ್ ಅವರ ಸಂಪತ್ತು 289 ಅಬ್ಜ ಡಾಲರ್ಸ್ ನಷ್ಟು ಆಗಿದೆ. ಸೋಮವಾರ ಅಲೆನ್ ಮಸ್ಕ್ ಅವರ ಸಂಪತ್ತಿನಲ್ಲಿ 2.71 ಲಕ್ಷ ಕೋಟಿ ರೂಪಾಯಿಗಳ (36.2 ಅಬ್ಜ ಡಾಲರ್) ಹೆಚ್ಚಳವಾಗಿದೆ. ಸೋಮವಾರ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಮಾರ್ಕೆಟ್ ಕ್ಯಾಪಿಟಲ್ 1 ಲಕ್ಷ ಕೋಟಿ ಡಾಲರ್ಸ್ ಗಳ ಹಂತ ದಾಟಿದೆ. ಈ ದಾಖಲೆಯನ್ನು ಮಾಡಿದ ಟೆಸ್ಲಾ ಅಮೆರಿಕೆಯಲ್ಲಿ 6 ನೇ ಕಂಪನಿಯಾಗಿದೆ.

ಸೋಮವಾರ ಕಂಪನಿಯ ಷೇರುಗಳಲ್ಲಿ 14.9 ಪ್ರತಿಶತ ಹೆಚ್ಚಳವಾಗಿ 1,045.02 ಡಾಲರ್ಸ್ ವರೆಗೆ ಮುಟ್ಟಿತು. ಈ ಷೇರು 52 ವಾರಗಳ ಗರಿಷ್ಠ ಮಟ್ಟ ತಲುಪಿದೆ. ಈ ಷೇರುಗಳ ಬೆಲೆಯಲ್ಲಿ ಆದ ಹೆಚ್ಚಳದಿಂದ ಅಲೆನ್ ಮಸ್ಕ್ ಅವರ ಸಂಪತ್ತಿನಲ್ಲಿ ಹೆಚ್ಚಳವಾಗಿದೆ. ಹರ್ಟ್ಸ್ ಗ್ಲೋಬಲ್ ಹೋಲ್ಡಿಂಗ್ಸ್ ಕಂಪನಿಯು 100000 ಕಾರುಗಳ ಆರ್ಡರ್ ಟೆಸ್ಲಾ ಕಂಪನಿಗೆ ನೀಡಿದೆ. ಟೆಸ್ಲಾ ಕಂಪನಿಗೆ ಈ 100000 ಕಾರುಗಳನ್ನು ಆರ್ಡರ್ ಸಿಕ್ಕಿದ್ದರಿಂದ ಕಂಪನಿಯ ಷೇರುಗಳಲ್ಲಿ ದೊಡ್ಡ ಫಿನಿಕ್ಸ್ ಜಿಗಿತ ಕಂಡು ಬಂದಿದೆ.
ಟೆಸ್ಲಾ ನಲ್ಲಿ ಎಲೆನ್ ಮಸ್ಕ್ ಅವರು 2.3 ಪ್ರತಿಶತ ಸಹಭಾಗಿತ್ವವನ್ನು ಹೊಂದಿದ್ದಾರೆ. ಈ ಷೇರಿನಲ್ಲಿ ಕಂಡುಬಂದ ಜಿಗಿತದಿಂದಾಗಿ ಅವರ ಸಂಪತ್ತು 2.71 ಲಕ್ಷ ಕೋಟಿ ರೂಪಾಯಿಗಳ ವರೆಗೆ ಹೆಚ್ಚಿತು. ಇದರ ಹೊರತಾಗಿ ಮಸ್ಕ್ ಅವರು ರಾಕೆಟ್ ನಿರ್ಮಿಸುವ ಸ್ಪೇಸ್ ಎಕ್ಸ್ ನ (SpaceX) ಪ್ರಮುಖ ಷೇರ್ ಹೋಲ್ಡರ್ ಮತ್ತು ಸಿಇಓ ಆಗಿದ್ದಾರೆ. CNBC ರಿಪೋರ್ಟ್ ಪ್ರಕಾರ, ಒಂದು ಖಾಸಗಿ ಕಂಪನಿಯ ಬೆಲೆ ಅಕ್ಟೋಬರ್ ಮಧ್ಯದಲ್ಲಿ ಷೇರು ಮಾರಾಟದ ಪ್ರಕಾರ $100 ಅಬ್ಜ ಡಾಲರ್ ಇದೆ. 2021 ರಲ್ಲಿ ಅಲೆನ್ ಮಸ್ಕ ಅವರ 119 ಅಬ್ಜ ಡಾಲರ್ಸ್ ಗಳ ಹೆಚ್ಚಳವಾಗಿದೆ. ಮಸ್ಕ್ ಅವರ ಒಟ್ಟು ಸಂಪತ್ತು 289 ಅಬ್ಜ ಡಾಲರ್ಸ್ ನಷ್ಟಿದ್ದು ಇದು ಎಕ್ಸಾಸ್ ಮೋಬಿಲ್ ಕಾರ್ಪ್ (Exxon Mobil Corp) ಈ Nike Inc ನ ಮಾರ್ಕೆಟ್ ವ್ಯಾಲ್ಯೂ ಗಿಂತಲೂ ಅಧಿಕವಾಗಿದೆ. Bloomberg Billionaires Index ಪ್ರಕಾರ ಇದು ಇತಿಹಾಸದಲ್ಲಿಯೇ ಇಲ್ಲಿಯವರೆಗಿನ ಅತ್ಯಧಿಕ ಹೆಚ್ಚಳವಾಗಿದೆ. ಕಳೆದ ವರ್ಷ ಚೈನಾ ಅಬ್ಜಾಧೀಶ ಜೊಂಗ್ ಶಾನ್ ಶಾನ್ ಅವರ ಸಂಪತ್ತಿನಲ್ಲಿ 32 ಬಿಲಿಯನ್ ಡಾಲರ್ಸ್ ನ ಹೆಚ್ಚಳವಾಗಿತ್ತು. ಅವರ ಮಿನರಲ್ ವಾಟರ್ ಕಂಪನಿಯಾದ (Nongfu Spring Co) ಲಿಸ್ಟ್ ಆಗಿತ್ತು.

ಟೆಸ್ಲಾ ಇದು ಟ್ರಿಲಿಯನ್ ಡಾಲರ್ಸ್ ಕಂಪನಿಗಳ ಕ್ಲಬ್ ನಲ್ಲಿ ಶಾಮೀಲಾದ ಮೊದಲ ಕಾರು ಕಂಪನಿಯಾಗಿದೆ. ಇವುಗಳಲ್ಲಿ ಇಲ್ಲಿಯವರೆಗೆ Apple Inc, Amazon.com Inc, Microsoft Corp ಮತ್ತು Alphabet Inc ಈ ಕಂಪನಿಗಳ ಸಮಾವೇಶವಿದೆ.