ಮಿಡತೆಗಳನ್ನು ಹೊಡೆದೋಡಿಸಲು ಮಾಡಿದ ಈ ಐಡಿಯಾ ಭಾರತೀಯರು ಬಿಟ್ಟು ಬೇರಾರೂ ಮಾಡಲಾರರು!
ಸದ್ಯ ದೇಶ ಕೊರೊನ ಸಾಂಕ್ರಾಮಿಕ ರೋಗದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವಾಗಲೇ ಪಾಕಿಸ್ತಾನದ ಮಾರ್ಗವಾಗಿ ಬಂದ ಮರಳುಗಾಡಿನ ಮಿಡತೆಗಳ ದಂಡು ದೇಶದ ಅನೇಕ ರಾಜ್ಯಗಳ ಆತಂಕವನ್ನು ಹೆಚ್ಚಿಸಿದೆ. ರೈತ ಇವುಗಳಿಂದ ತನ್ನ ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ವಿಚಾರದಲ್ಲಿದ್ದಾನೆ. ಕೆಲವರು ಪಾತ್ರೆಗಳ ಶಬ್ದ ಮಾಡಿ, ಇನ್ನು ಹಲವರು ನಗಾರಿ, ಮತ್ತು ಡಿ ಜೆ ಸೌಂಡ್ ಸಿಸ್ಟಮ್ ಸದ್ದಿನಿಂದ ಹೀಗೆ ನಾನಾ ರೀತಿಯ ಉಪಾಯಗಳನ್ನು ಮಾಡುತ್ತಿದ್ದಾರೆ.
‘ಅವಶ್ಯಕತೆಯೇ ಶೋಧದ ಜನನಿ’ ಎನ್ನುವ ಹಾಗೆ ಈ ಮಿಡತೆಗಳ ಹಾವಳಿಯನ್ನು ತಡೆಗಟ್ಟಲು ಮಾಡಿದ ಈ ಐಡಿಯಾ ‘ಟಿಕ್ ಟಾಕ್’ ನಲ್ಲಿ ತುಂಬಾ ವೈರಲ್ ಆಗಿದೆ. ಈ ವಿಡಿಯೋವನ್ನು ಟಿಕ್ ಟಾಕ್ ಯೂಜರ್ pinkipate1855 ಶೇರ್ ಮಾಡಿದ್ದಾರೆ. ಈ ಸುದ್ದಿ ಪ್ರಕಟಿಸುವ ತನಕ 24 ಮಿಲಿಯನ್ ಗಿಂತ ಹೆಚ್ಚು ವ್ಯೂವ್ಜ್ ಮತ್ತು 10 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿವೆ.
डीजे सिर्फ़ नाच गाने के लिये ही नहीं बल्कि टिड्डी दल भगाने में भी कारगर होता है ।
— RAHUL SRIVASTAV (@upcoprahul) May 27, 2020
दिन सबके बदलते हैं !
आप मुँह से आवाज़ निकाल सकते हैं या थाली भी पीट सकते हैं ।#DiscJockey #Locustswarm #locustswarms #Locusts #Locustsattack #LocustInvasion #LocustSwarmsAttack pic.twitter.com/zUcpYiJTGb
ವಿಡಿಯೋದಲ್ಲಿ ಕಾಣುವ ಹಾಗೆ ಒಂದು ಖಾಲಿ ಬಾಟಲಿಯಿಂದ ಕ್ಯಾನ್ ದಂತಹ ಡಬ್ಬಿಗೆ ಜೋಡಿಸಲಾಗಿದೆ. ಜೊತೆಗೆ ಕೂಲರ್ ನಲ್ಲಿ ಉಪಯೋಗಿಸಲಾಗುವ ಗಾಳಿಯನ್ನು ತೂರುವ (ಬ್ಲೇಡ್) ಎಲೆಗಳನ್ನು ಅಳವಡಿಸಲಾಗಿದೆ. ಗಾಳಿಯಿಂದ ಯಾವಾಗ ಆ ಬ್ಲೇಡುಗಳು ತಿರುಗುತ್ತವೆಯೋ ಆಗ ಹಿಂದೆ ಅಳವಡಿಸಿದ ಕ್ಯಾನ್ ಅಥವಾ ಟೀನ ಡಬ್ಬಿಯಿಂದ ಕಟ್ ಕಟ್ ಶಬ್ದ ಹೊರಹೊಮ್ಮುವದರಿಂದ ಮಿಡತೆಗಳ ಆಕ್ರಮಣ ತಡೆಯುವದು.
ಇನ್ನೊಂದು ವಿಡಿಯೋ ಶೇರ್ ಮಾಡಿದ ಟ್ವೀಟರ್ ಯೂಜರ್ ರಾಹುಲ್ ಶ್ರೀವಾಸ್ತವ ಪ್ರಕಾರ ಡಿ ಜೆ ಬರೀ ಕುಣಿಯಲಿಕ್ಕಲ್ಲ ಮಿಡತೆಗಳ ಹಾವಳಿಯನ್ನು ತಡೆಯಲು ಸಹಿತ ಉಪಯೋಗವಾಗುವದು ಎನ್ನುತ್ತಾರೆ. ಭವಿಷ್ಯದ ದಿನಗಳು ಒಂದೇ ರೀತಿ ಇರುವದಿಲ್ಲ, ಬದಲಾವಣೆ ಆಗುತ್ತಲೇ ಇರುತ್ತೆ. ಮಿಡತೆಗಳನ್ನು ಓಡಿಸಲು ನೀವು ಬಾಯಿಯಿಂದ ಶಬ್ದ ಮಾಡಬಹುದು, ಪಾತ್ರೆಗಳನ್ನು ಬಡಿಯಬಹುದು. ಹೀಗೆ ಅನೇಕ ಉಪಾಯಗಳನ್ನು ರೈತರು ಮಾಡುತ್ತಿದ್ದಾರೆ. ಮಿಡತೆಗಳ ಕಾಟಕ್ಕಾಗಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.