“ಮೊದಲು ನಾನು ಹೋಗಬೇಕಿದ್ದ ಜಾಗದಲ್ಲಿ, ನನ್ನನ್ನು ಹಿಮ್ಮೆಟ್ಟಿ ಮೊದಲು ತಾನೇ ತಂದೆ-ತಾಯಿಯ ಬಳಿ ಹೋದ ಪುನೀತ್”- ರಾಘವೇಂದ್ರ ರಾಜಕುಮಾರ್…..

ನಿನ್ನೆ ನಮ್ಮ ಕನ್ನಡದ ಮಾಣಿಕ್ಯ, ಯುವರಾಜ್, ಯುವರತ್ನ್, ಪುನೀತ್ ರಾಜಕುಮಾರ್ ಇಹಲೋಕವನ್ನು ತ್ಯಜಿಸಿದರು. ದುಃಖದ ಸಾಗರದಲ್ಲಿ ಎಲ್ಲರನ್ನು ಧುಮುಕಿಸಿ ಹೋದ ಅಪ್ಪು ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಆದರೆ ಅಂತ್ಯಕ್ರಿಯೆ ಮಾಡುವ ಸಮಯ ಇನ್ನೂ ನಿಗಧಿತ ಪಡಿಸಿಲ್ಲ ಎಂದು ತಿಳಿದು ಬಂದಿದೆ. ಮೊದಲು ಇಂದೇ ಅಂತ್ಯಕ್ರಿಯೆ ಮಾಡಲು ನಿರ್ಧಸರಿಸಿದರು ಆದರೆ ಅವರ ಅಭಿಮಾನಿಗಳ ಸಾಗರದಂತೆ ಬರುತ್ತಿರುವದನ್ನು ಕಂಡು ಕೊನೆಗೆ ಈ ನಿರ್ಧಾರ ತಗೆದುಕೊಳ್ಳಲಾಯಿತು. ಅಪ್ಪು ಅವರ ಪ್ರತಿಯೊಬ್ಬ ಅಭಿಮಾನಿ ಕೊನೆಯ ಕ್ಷಣದಲ್ಲಿ ಅಪ್ಪು ಅವರ ಮುಖದರ್ಶನ ದೊರೆಯಬೇಕು ಎಂಬ ಉದ್ದೇಶದಿಂದ ಅವರ ಅಂತ್ಯಕ್ರಿಯೆ ನಾಳೆ ನಡೆಸಲಾಗುವದು ಎಂದು ರಾಕ್ಲೈನ್ ವೆಂಕಟೇಶ್ ಅವರು ತಿಳಿಸಿದ್ದಾರೆ.

ಅವರ ಮಗಳು ಧೃತಿ ಸಹ ಇನ್ನೂ ಬಂದಿಲ್ಲ, ಅವರನ್ನು ಕರೆತರಲು ಸರಕಾರದ ಕಡೆಯಿಂದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಧೃತಿ ಅವರ ಸಲುವಾಗಿ ವಿಶೇಷವಾದ ವಿಮಾನದ ವ್ಯವಸ್ಥೆ ಮಾಡಲಾಗಿದೆ ಅವರ ಬಂದ ನಂತರ ರಾಜ್ ಕುಟುಂಬದೊಂದಿಗೆ ಚರ್ಚಿಸಿ ಅಪ್ಪು ಅವರ ನಾಳೆಯ ಅಂತ್ಯಕ್ರಿಯೆ ಸಮಯ ನಿರ್ಧಾರ ಮಾಡಲಾಗುವದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜಕುಮಾರ್ ಅವರಿಗೆ ಮೂರು ರತ್ನಗಳಿದ್ದರು. ಅದರಲ್ಲಿ ನಿನ್ನೆ ಒಂದು ರತ್ನ ಕಳೆದು ಹೋಗಿದೆ. ತನ್ನ ತಮ್ಮನ ಸುದ್ಧಿ ಕೇಳಿ ರಾಘವೇಂದ್ರ ರಾಜಕುಮಾರ್ ಅವರು ಇಂದು ಸುದ್ಧಿಗೋಷ್ಠಿಯೊಂದಿಗೆ ತಮ್ಮನ ಕುರಿತು ಮಾತು ಹೇಳಿದರು, ” ನನ್ನ ತಮ್ಮ ನನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದ, ಅಪ್ಪು ಎಂದರೆ ಇಡೀ ಕುಟುಂಬವೇ ಹೆಮ್ಮೆ ಪಡುತ್ತಿತು. ನಾನು ಹೋಗಬೇಕಿದ್ದ ಜಾಗದಲ್ಲಿ ಅಪ್ಪು ನನ್ನನ್ನು ಹಿಂದೆ ತಳ್ಳಿ ಮೊದಲು ತಾನೇ ಹೋಗಿದ್ದಾನೆ. ಏಕೆಂದರೆ ಕೆಲವು ದಿವಸಗಳ ಹಿಂದೆ ನನಗೆ ಎರಡು ಮೂರು ಸಾರಿ ಹೃ#ದಯಾಘಾತ ಬಂದೊದಗಿತು ಆ ಸಮಯದಲ್ಲಿ ಸ್ವತಃ ಅಪ್ಪುನೇ ನನಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದಾನೆ. ಹೀಗಾಗಿ ತಂದೆ ತಾಯಿಯ ಹತ್ತಿರ ಮೊದಲು ಹೋಗಬೇಕಿದ್ದ ನನನ್ನು ಹಿಂದೆ ತಳ್ಳಿ ತಾನೇ ಮೊದಲು ಹೋಗಿ ಬಿಟ್ಟಿದ್ದಾನೆ” ಅಂತ ಹೇಳುತ್ತಾ ತಮ್ಮ ದುಃಖದ ಆ#ಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅಪ್ಪು ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ನೀಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ. ಅಪ್ಳು ಮತ್ತೆ ಹುಟ್ಟಿ ಬನ್ನಿ.