ಒಂದು ತಿಂಗಳುಗಳವರೆಗೆ ಬಂದಿದ್ದ ATM, ರಿಪೇರಿ ಮಾಡುವ ಸಲುವಾಗಿ ತೆರೆದು ನೋಡಿದಾಗ ದಂಗಾದ ಸಿಬ್ಬಂದಿ!

ಪ್ರತಿದಿನ ನಾವು ನಮ್ಮ ಸುತ್ತಲಿನ ವಿವಿಧ ರೀತಿಯ ಸುದ್ದಿಗಳನ್ನ ಕೇಳುತ್ತೇವೆ ಮತ್ತು ವಿವಿಧ ವಿಡಿಯೋಗಳು ನೋಡುತ್ತೇವೆ. ಇಂತಹ ಕೆಲವು ಸುದ್ದಿಗಳು ಕೇಳಿದ ತಕ್ಷಣ ನಂಬಲು ಸಾಧ್ಯ ಆಗುವುದಿಲ್ಲ. ಅಲ್ಲದೆ ಕೆಲವು ಸುದ್ದಿಗಳನ್ನು ಕೇಳಿದ ತಕ್ಷಣವೇ ನಂಬುತ್ತೇವೆ. ಇಂದು ನಾವು ನಿಮಗೆ ಅಸ್ಸಾಂನಲ್ಲಿ ನಡೆದ ವಿಚಿತ್ರ ಸುದ್ದಿಯ ಬಗ್ಗೆ ಹೇಳಲಿದ್ದೇವೆ. ಈ ಸುದ್ದಿ ಕೇಳಿದರೆ ನಿಮಗೂ ನಂಬಲು ಸಾಧ್ಯವಾಗುವದಿಲ್ಲ. ಹಾಗಾದರೆ ಈ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಅಸ್ಸಾಮ್ ನಲ್ಲಿಯ ತಿನಸುಕಿಯನಲ್ಲಿದ್ದ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ದ ಒಂದು ATM ಬಂದ್ ಸ್ಥಿತಿಯಲ್ಲಿದ್ದಿತ್ತು. ಬಂದಿದ್ದ ATM ಕುರಿತು ಅಲ್ಲಿಯ ಜನರು ಅನೇಕ ಸಲ ಬ್ಯಾಂಕ್ ನವರಿಗೆ ತಕರಾರು ನೀಡಿದರು ಸಹ ಬ್ಯಾಂಕಿನವರು ಯಾವದೇ ಪ್ರತಿಕ್ರಿಯೆ ನೀಡಲಿಲ್ಲ. ತದನಂತರ ಒಂದು ತಿಂಗಳ ನಂತರ ಅದನ್ನು ರಿಪೇರಿ ಮಾಡುವ ಸಲುವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿ ATM ಸ್ಥಳಕ್ಕೆ ಕಳುಹಿಸಿದರು. ಬಂದಿದ್ದ ATM ರಿಪೇರಿ ಮಾಡುವ ಸಲುವಾಗಿ ATM ಓಪನ್ ಮಾಡಿ ಅಲ್ಲಿದ್ದ ಪರಸ್ಥಿತಿಯನ್ನು ನೋಡಿ ಸಿಬ್ಬಂದಿಗಳು ದಂಗಾದರು.

ವಾಸ್ತವಿಕವಾಗಿ ಅಲ್ಲಿ ನಡೆದದ್ದು ಏನೆಂದರೆ, ಸರಿ ಪಡಿಸಲು ಸಿಬ್ಬಂದಿಗಳು ATM ಮಷಿನ್ ಓಪನ್ ಮಾಡಿದಾಗ ಅದರಲ್ಲಿದ್ದ ನೋಟುಗಳು ಎಲ್ಲವೂ ತುಂಡು ತುಂಡಾಗಿದ್ದವು. ಒಂದು ನೋಟು ಕೂಡಾ ಸರಿಯಾಗಿರದೆ ಎಲ್ಲವೂ ತುಂಡಾಗಿದ್ದವು. ಏಕೆಂದರೆ ಅಲ್ಲಿದ್ದ ಎಲ್ಲ ನೋಟುಗಳನ್ನು ಇಲಿಗಳು ಕತ್ತರಿಸಿ ಇಟ್ಟಿದ್ದವು. ಅಲ್ಲಿದ್ದ ನೋಟುಗಳ ಒಟ್ಟು ಮೊತ್ತ 20-30 ಸಾವಿರವಾಗಿರದೆ ಲಕ್ಷಾಂತರ ರೂಪಾಯಿಗಳಾಗಿದ್ದವು. ನೋಟುಗಳ ಈ ಸ್ಥಿತಿಯನ್ನು ಕಂಡು ಬ್ಯಾಂಕಿನ ಸಿಬ್ಬಂದಿ ಬೆರಗಾಗಿ ನಿಂತರು.

ಈ ಬಗ್ಗೆ ಎಸ್‌ಬಿಐ ಅಧಿಕಾರಿಯೊಬ್ಬರು ಹೇಳಿದ್ದೇನೆಂದರೆ, ಕೆಲವು ತಾಂತ್ರಿಕ ಕಾರಣಗಳಿಂದ ತಿನ್‌ಸುಕಿಯಾದ ಲಾಪುಲಿಯಲ್ಲಿರುವ ಎಸ್‌ಬಿಐನ ಎಟಿಎಂ ಸ್ಥಗಿತಗೊಂಡಿತು. ಎಟಿಎಂ ವಿಫಲವಾಗಿದೆ ಎಂದು ತಿಳಿದಾಗ, ನಾವು ಎಟಿಎಂ ಅನ್ನು ನಿರ್ವಹಿಸುತ್ತಿರುವ ‘ಗ್ಲೋಬಲ್ ಬ್ಯುಸಿನೆಸ್ ಸೊಲ್ಯೂಷನ್ಸ್ (ಜಿಬಿಎಸ್) ಗೆ ದೂರು ನೀಡಿದ್ದೇವೆ ತದನಂತರ ಆ ಕಂಪನಿಯು ಎಟಿಎಂ ದುರಸ್ತಿ ಮಾಡಲು ಉದ್ಯೋಗಿಯನ್ನು ಕಳುಹಿಸಿತು.

ಎಟಿಎಂನಲ್ಲಿದ್ದ 12 ಲಕ್ಷದ 38000 ಮೊತ್ತ ರೂಪಾಯಿ ನೋಟುಗಳನ್ನು ಇಲಿಗಳು ಪುಡಿ ಮಾಡಿದ್ದು, ಕೇವಲ 17 ಲಕ್ಷ ರೂಪಾಯಿ ಉಳಿತಾಯವಾಗಿದೆ ಎಂದು ಎಸ್‌ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಟಿಎಂನಲ್ಲಿ 29 ಲಕ್ಷ ರೂಪಾಯಿ ಜಮಾ ಮಾಡಿದ ಎರಡನೇ ದಿವಸದಂದೆ ATM ಸ್ಥಗಿತಗೊಂಡಿತ್ತು ಹೀಗಾಗಿ ಅದರಲ್ಲಿಯ ನೋಟುಗಳು ಹಾಗೆ ಉಳಿದಿದ್ದವು.

ಘಟನೆಯ ತನಿಖೆಗಾಗಿ ಬ್ಯಾಂಕ್ ಕೂಡ ಎಫ್ಐಆರ್ ದಾಖಲಿಸಿದೆ. ಆದರೆ ಇದೊಂದು ಸುನಿಯೋಜಿತ ಘಟನೆಯಾಗಿದೆ ಎಂಬುದು ಕೆಲವರ ಅನಿಸಿಕೆಯಾಗಿದೆ. ಎಟಿಎಂ ರಿಪೇರಿ ಮಾಡಲು ಬ್ಯಾಂಕ್ ಸಿಬ್ಬಂದಿ ಮೊದಲು ಏಕೆ ಬರಲಿಲ್ಲ? ತಿಂಗಳಿನ ನಂತರ ಏಕೆ ಬಂದರು? ಹೀಗಾಗಿ ಇದು ಒಂದು ಸುನಿಯೋಜಿತ ಘಟನೆ ಇದೆ ಎಂದು ಜನರು ಸಂಶಯ ಪಡುತ್ತಿದ್ದಾರೆ.