ಸೋನು ಸರ್, ನಾನು ಮನೆಯಲ್ಲೇ ಬಂಧಿಯಾಗಿದ್ದೇನೆ, ನನಗೆ ಮದ್ಯದಂಗಡಿಗೆ ಒಯ್ದು ಬಿಡಿ ಎಂದು ಕೇಳಿದ ಯೂಜರ್ ಗೆ ಸೋನು ಸರ್ ಕೊಟ್ಟ ಸಖತ್ ರಿಪ್ಲಾಯ್…!

ಕೊರೊನ ರೋಗ ಹಬ್ಬುವ ಭಯದಿಂದ ಅದನ್ನು ತಡೆಯಲು ಲಾಕ್ ಡೌನ್ ಉಪಾಯ ಪ್ರಾರಂಭಿಸಿದಾಗ ಅದರ ಸೈಡ್ ಇಫೆಕ್ಟ್ ನಿಂದ ಸಂಪೂರ್ಣ ಭಾರತದ ಕಾರ್ಮಿಕರು ಪಟ್ಟ ಸಂಕಷ್ಟ, ಬವಣೆ ಒಂದು ಬೇರೆಯದೇ ರೂಪ ಪಡೆಯಿತು.

ಬಾಲಿವುಡ್ ಎಕ್ಟರ್ ಸೋನು ಸೂದ್ ಈ ಕಷ್ಟದ ಸಮಯದಲ್ಲಿ ವಲಸಿಗರಿಗೆ ಮನೆಯನ್ನು ತಲುಪಿಸುವ ದೇವರಾಗಿ ಪ್ರತ್ಯಕ್ಷರಾದರು. ಅವರು ಮತ್ತು ಅವರ ಟೀಮ್ ಎಡೆಬಿಡದೆ ಅಸಂಖ್ಯಾತ ವಲಸಿಗರಿಗೆ ತಮ್ಮ ಸಹಾಯ ಹಸ್ತ ಚಾಚಿ ಅವರ ಇಚ್ಚಿತವಾದ ಸ್ಥಳಕ್ಕೆ ಕರೆದೊಯ್ದು ಬಿಟ್ಟು ಬರುವ ಮಹಾನ್ ಕೆಲಸ ಮಾಡುತ್ತಿದ್ದಾರೆ.

ಇಂಥ ಕೆಲಸ ಮಾಡುವಾಗ ಸೋನು ಅವರು ತಮ್ಮ ಮನಸ್ಥಿತಿಯನ್ನು ಎಳ್ಳಷ್ಟೂ ಕೆಡಿಸಿಕೊಳ್ಳದೆ ತಾವು ಮಾಡುವ ಕೆಲಸದೊಂದಿಗೆ ಪ್ರಾಮಾಣಿಕರಾಗಿ ಮುನ್ನುಗ್ಗುತ್ತಿದ್ದಾರೆ.

ಹೀಗೇಕೆ ಹೇಳುತ್ತಿದ್ದೇವೆ ಎನ್ನುತ್ತೀರಾ? ಅದಕ್ಕೆ ಒಂದು ಉದಾಹರಣೆ ಇಲ್ಲಿದೆ ನೀವೇ ನೋಡಿ. ಸಮಾಜದಲ್ಲಿ ಅನೇಕ ಪ್ರಕಾರದ ಜನ, ಅನೇಕ ರೀತಿಯ ವಿಚಾರಗಳನ್ನು ಹೊಂದಿದವರಾಗಿರುತ್ತಾರೆ. ಸೋನು ಅವರು ಕಳೆದ ಕೆಲವು ದಿವಸಗಳಿಂದ ಅವಿರತವಾಗಿ ವಲಸೆ ಕಾರ್ಮಿಕರಿಗೆ ಅವರು ಹೇಳಿದ ಸ್ಥಳಕ್ಕೆ ಅಥವಾ ಊರುಗಳಿಗೆ ಒಯ್ದು ತಲುಪಿಸುವ ಮುಖ್ಯ ಕಾರ್ಯವನ್ನು ಮಾಡುತ್ತಿದ್ದಾರೆ, ಇದನ್ನೇ ಮುಂದಿಟ್ಟುಕೊಂಡು ಒಬ್ಬ ಟ್ವೀಟರ್ ಯೂಜರ್ ‘ ಸರ್ ನಾನು ಮನೆಯಲ್ಲೇ ಬಂಧಿಯಾಗಿದ್ದೇನೆ, ನನಗೆ ಮದ್ಯದಂಗಡಿಗೆ ಒಯ್ದು ಬಿಡಿ ಎಂದು ಕೇಳಿದ್ದಕ್ಕೆ ಸೋನು ಸರ್ ಅವರು ಕೊಟ್ಟ ಉತ್ತರವೇನು ಕಡಿಮೇ ತೂಕದ್ದಾಗಿರಲಿಲ್ಲ. ‘ಬ್ರದರ್, ಮದ್ಯದಂಗಡಿಯಿಂದ ನಿನ್ನನ್ನು ಮನೆಗೆ ಬೇಕಾದ್ರೆ ತಲುಪಿಸುವೆನು ಅವಶ್ಯಕತೆ ಇದ್ರೆ ಹೇಳು, ಎಂದು ಸಖತ್ ಉತ್ತರ ಕೊಟ್ಟಿದ್ದಾರೆ.