ಪುನೀತ್ ಅವರ ಮುಂದಿನ ‘ಈ’ ಹೊಣೆಯನ್ನು ಹೊತ್ತ ತಮಿಳ್ ನಟ ವಿಶಾಲ್!

ಕನ್ನಡ ಚಲನಚಿತ್ರರಂಗದ ಒಂದು ರತ್ನ ಶುಕ್ರವಾರದಂದು ಕಳೆದು ಹೋಗಿದೆ. ಮರಳಿ ಬಾರದ ಊರಿಗೆ ಪಯಣಿಸಿದ ಪುನೀತ್ ರಾಜಕುಮಾರ್. ನಾಡಿನ ಮಾಣಿಕ್ಯ ಮರೆ ಮಾಚಿದೆ. ಅದೆಷ್ಟೋ ಆಸೆ, ಕನಸ್ಸುಗಳ ಹೊತ್ತು ಸಾಗುತ್ತಿರುವ ಪಯಣದಲ್ಲಿ ದೇವರೇ ಬಂದು ಅವರ ಪಯಣದಿಂದ ಮುಕ್ತಿ ನೀಡಿದ್ದಾನೆ. ಚಂದನವನಕ್ಕೆ ಉತ್ತಮ ಹೆಸರು ತಂದು ಕೊಟ್ಟ ನಟರಲ್ಲಿ ಇವರೊಬ್ಬರು. ಇವರ ಅಭಿನಯ ಕಂಡು ಮಕ್ಕಳಿಂದ, ವೃದ್ಧರು ಕುಣಿದು ಕುಪ್ಪಳಿಸುವರು. ಅವರು ಮಾಡಿದ ಅದೆಷ್ಟೋ ಸಿನಿಮಾಗಳು ನಿಜ ಜೀವನದಲ್ಲಿ ತುಂಬಾ ಉಪಕಾರಿಯಾಗಿವೆ. ಪುನೀತ್ ಅವರ ‘ರಾಜಕುಮಾರ್’ ಚಿತ್ರವನ್ನು ನೋಡಿ ಸುಮಾರು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವೃದ್ಧಾಶ್ರಮದಲ್ಲಿದ್ದ ತಂದೆ-ತಾಯಿಗಳನ್ನು ತಮ್ಮ ಮಕ್ಕಳು ಮನೆಗೆ ಕರೆದುಕೊಂಡು ಹೋಗಿದ್ದಾರೆ.. ಗುಣಮಟ್ಟದ ಚಿತ್ರವನ್ನು ನಟಿಸುವ ಜೊತೆಗೆ ನಿಜ ಜೀವನದಲ್ಲಿ ಸಹ ರಾಜಕುಮಾರ್ ನ ಹಾಗೆ ಬದುಕುತ್ತಿದ್ದರು ಅಪ್ಪು.

ಚಿಕ್ಕ ವಯಸ್ಸಿನಲ್ಲಿ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾ ಚಂದನವನಕ್ಕೆ ಬಂದಿದ್ದರು. ಅವರು ಭಕ್ತ ಪ್ರಹ್ಲಾದ್ ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು. ಸುಮಾರು 50 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ‘ನಟಸಾರ್ವಭೌಮ’ ಎಂದೆನಿಸಿಕೊಂಡರು. ಯುವ ಪೀಳಿಗೆಗೆ ಧೈರ್ಯ ಸಾಹಸ ನೀಡುತ್ತಾ ‘ಯುವರತ್ನ’ ರಾದರು. ತಂದೆಯ ಗುಣಗಳನ್ನು ಹೊಂದಿದ ಪುನೀತ್ ಅವರು ಚಿತ್ರರಂಗದಲ್ಲಿ ಪ್ರತಿಯೊಬ್ಬ ಕಲಾವಿದರಿಗೆ ಕೈಲಾದಷ್ಟು ಸಹಾಯ ಮಾಡಿ ರಾಜಕುಮಾರ್ ಎನಿಸಿಕೊಂಡರು.

ಪುನೀತ್ ರಾಜಕುಮಾರ್ ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಹೇಳೋಕ್ಕೆ ಸಾಲದು. 26 ಅನಾಥಾಶ್ರಮ, 48 ಉಚಿತ ಶಾಲೆಗಳು, 16 ವೃದ್ಧಾಶ್ರಮ, 19 ಗೋಶಾಲೆ ಮತ್ತು 1800 ಮಕ್ಕಳ ಉಚಿತ ಶಿಕ್ಷಣ ನೀಡುವ ಹೊಣೆಯನ್ನು ಅಪ್ಪು ಅವರು ಹೊತ್ತಿದ್ದರು. ಇಷ್ಟೊಂದು ಪುಣ್ಯದ ಕೆಲಸ ಮಾಡುತ್ತಿರುವ ಯುವರಾಜನನ್ನು ಕೊನೆಗೂ ವಿಧಿ ಕರೆದುಕೊಂಡು ಹೋಯಿತು. ಅಪ್ಪು ಅವರ ಅಗಲುವಿಕೆ ಇಡೀ ಕರ್ನಾಟಕ ಜನತೆಗೆ ಅಷ್ಟೇ ಅಲ್ಲ ಕನ್ನಡ ಮೇಲೆ ಪ್ರೀತಿ ಹೊಂದಿದ

ಅಪ್ಪು ಅವರ ಸಾಮಾಜಿಕ ಕಾರ್ಯವನ್ನು ಕಂಡು ಹಿಂದಿ, ಕನ್ನಡ, ತೆಲಗು, ತಮಿಳು, ಮರಾಠಿ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರು ತಮ್ಮ ಶ್ರದ್ಧಾಂಜಲಿಯ ಹೊಳೆಯೇ ಹೊರೆಸಿದ್ದಾರೆ. ತೆಲಗು, ತಮಿಳ್ ಚಿತ್ರರಂಗದ ನಟರು ಅಪ್ಪುವಿಗೆ ತುಂಬಾ ಹತ್ತಿರವಾಗಿದ್ದರಿಂದ ಸ್ವತಃ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಷ್ಟೊಂದು ಪುಣ್ಯ ಮಾಡಿರುವ ಅಪ್ಪುವಿನ ಜಾಗ ಚಿತ್ರರಂಗದಲ್ಲಿ ಮತ್ತು ನಿಜ ಜೀವನದಲ್ಲಿ ಯಾರು ತಗೆದುಕೊಳ್ಳಲು ಸಾಧ್ಯವಾಗುವದಿಲ್ಲ. ಆದರೆ ಕೆಲವೊಬ್ಬರು ಅಪ್ಪುವಿನ ಹೊಣೆಗಾರಿಕೆ ತಾವು ಹೊರಲು ಸಿದ್ಧರಾಗಿದ್ದರೆ. ಅವರಲ್ಲಿ ತಮಿಳ್ ನಟ ವಿಶಾಲ್ ಒಬ್ಬರು.

ನಿನ್ನೆ ಅಷ್ಟೇ ಪುನೀತ್ ಅವರ ಅಂತ್ಯಕ್ರಿಯೆ ಆಯಿತು. ಆಗುತ್ತಿದ್ದಂತೆ ತಮಿಳು ನಟ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಪುನೀತ್ ಅವರು 1800 ಮಕ್ಕಳ ಶಿಕ್ಷಣದ ಹೊಣೆಯನ್ನು ಹೊತ್ತಿದ್ದರು ಹೊಣೆ ಹೊತ್ತ ಯುವರತ್ನ ಅಗಲಿ ಹೋದಾಗ ಮಕ್ಕಳು ಅನಾಥ ರಾಗಿದ್ದಾರೆ, ಇನ್ನು ಅವರ ಭವಿಷ್ಯ ಶಿಕ್ಷಣದ ಹೊರೆ ಹೇಗೆ? ಈ ಹೊರೆಯನ್ನು ಯಾರು ಹೊರುವರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ದೈವರಂತೆ ಬಂದು ಆ 1800 ಮಕ್ಕಳ ಶಿಕ್ಷಣದ ಹೊಣೆಯನ್ನು ತಮಿಳ್ ನಟ ವಿಶಾಲ್ ಅವರು ಹೊತ್ತಿದ್ದಾರೆ. ‘ಪುನೀತ್ ಅವರು ನನ್ನ ಆಪ್ತ ಗೆಳೆಯನಾಗಿದ್ದರು ಅವರು ಹೊತ್ತಿರುವ 1800 ಮಕ್ಕಳ ಶಿಕ್ಷಣದ ಹೊರೆಯನ್ನು ನಾನು ಹೊರುವೆ” ಎಂದು ಎಲ್ಲರೆದುರಿಗೆ ಘೋಷಣೆ ಮಾಡಿದ್ದರೆ. ಇಂತಹ ವ್ಯಕ್ತಿಗೆ ನಮ್ಮ ವತಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇವೇ.