ವೈರಲ್ ಫೋಟೋ! ಮಾನವೀಯತೆಯನ್ನು ಮರೆತ ವರ್ಚುವಲ್ ಜನ; ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ನೋಡುಗರಿಗೆ ತಂದಿತು ಕಣ್ಣಲ್ಲಿ ನೀರು…
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವೊಂದು ಫೋಟೋಗಳು ಅಥವಾ ವಿಡಿಯೋಗಳು ನಮಗೆ ತುಂಬಾ ಖುಷಿ ಕೊಡುತ್ತದೆ. ಇನ್ನು ಕೆಲವು ದೃಶ್ಯಗಳು ಆಳವಾದ ವಿಚಾರ ಮಾಡಲಿಕ್ಕೆ ಹಚ್ಚುತ್ತವೆ. ಕಳೆದ ಕೆಲವು ದಿವಸಗಳಿಂದ ಕಣ್ಣಲ್ಲಿ ನೀರು ಬರುವಂತಹ ವಿಡಿಯೋ ಒಂದು ವೈರಲ್ ಆಗುತ್ತಿದೆ. ಒಂದು ಅಸಹಾಯಕ ತಾಯಿಯ ಭಾವನಾತ್ಮಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿಸಿದೆ. ಜನರು ಈ ವಿಡಿಯೋವನ್ನು ನೋಡಿ ಕಮೆಂಟ್ಸ್ ಗಳಲ್ಲಿ ತಮ್ಮ ರೋಷವನ್ನು ವ್ಯಕ್ತ ಮಾಡುತ್ತಿರುವದು ಕಂಡುಬರುತ್ತಿದೆ. ಈ ಫೋಟೋದಲ್ಲಿ ಮೆಟ್ರೋ ಟ್ರೈನ್ ನ ಮಹಿಳೆಯರ ಬೋಗಿಯಲ್ಲಿ ಮಹಿಳೆಯರು ತಮ್ಮ ಸೀಟ್ ಮೇಲೆ ಕುಳಿತಿದ್ದಾರೆ. ಆಗ ಪ್ರತಿಯೊಬ್ಬರ ಗಮನ ತಮ್ಮ ಕೈಯಲ್ಲಿಯ ಮೊಬೈಲ್ ಮೇಲೆ ಇದೆ. ಅದೇ ಸಮಯಕ್ಕೆ ಸೀರೆಯುಟ್ಟ ಮಹಿಳೆಯೊಬ್ಬಳು ತನ್ನ ಹಸುಗೂಸನ್ನು ತೆಗೆದುಕೊಂಡು ಅವರ ಹತ್ತಿರವೇ ಕೆಳಗೆ ಕುಳಿತಿದ್ದಾಳೆ. ಶಿಕ್ಷಣದಿಂದ ಎಲ್ಲವನ್ನು ಸಂಪಾದಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ, ಸಂಪಾದಿಸಿದ್ದಕ್ಕೆ ಮಾನವೀಯತೆಯ ಜೊತೆ ಬೇಕೇಬೇಕು ಎಂಬ ಕ್ಯಾಪ್ಷನ್ ದೊಂದಿಗೆ ಈ ಫೋಟೋ ಶೇರ್ ಮಾಡಲಾಗಿದೆ.
ಈ ಫೋಟೋವನ್ನು ನೋಡಿದ ಪುರುಷರು ತಮ್ಮ ಕಮೆಂಟ್ಸ್ ಗಳಲ್ಲಿ ಅಸಮಾಧಾನ ವ್ಯಕ್ತ ಮಾಡಿದ್ದಾರೆ. ಮಹಿಳೆಯರೇ ಮಹಿಳೆಯರ ಜೊತೆಗೆ ಈ ರೀತಿ ಸಂವೇದನೆ ಇಲ್ಲದೆ ವರ್ತಿಸುತ್ತಾರೆ ಎಂಬುದಕ್ಕೆ ಇದೊಂದು ಜೀವಂತವಾದ ಉದಾಹರಣೆ ಎಂದಿದ್ದಾರೆ. ಇನ್ನೊಬ್ಬ ಇದಕ್ಕೆ ಮುಖ್ಯವಾದ ಕಾರಣ ಮೊಬೈಲ್ ಎಂದಿದ್ದಾನೆ. ಎದ್ದು ನಿಂತಾಗ ಫೋನ್ ಆಪರೇಟ್ ಮಾಡುವುದು ಕಠಿಣವಾಗುತ್ತದೆ ಎಂದು ಬಹುಶಃ ಯಾರು ಇನ್ನೊಬ್ಬರಿಗೆ ತಮ್ಮ ಸೀಟ್ ನೀಡಲಿಕ್ಕಿಲ್ಲ ಎಂದಿದ್ದಾನೆ.
ಇನ್ನು ಸೀಟ್ ಮೇಲೆ ಕುಳಿತಿರುವ ಮಹಿಳೆಯರ ಪರವಾಗಿ ಕೆಲವು ಕಮೆಂಟುಗಳು ನೋಡಲು ಸಿಗುತ್ತವೆ. ಚೇರ್ ಮೇಲೆ ಕುಳಿತಿರುವ ಮಹಿಳೆಗೆ ಏನಾದರೂ ಸಮಸ್ಯೆಗಳಿರಬಹುದು. ಅಥವಾ ಅವರಿಗೆ ಮಾಸಿಕ ನೋವು ಇರಬಹುದು ಎಂದು ತನ್ನ ಭಾವನೆ ವ್ಯಕ್ತ ಮಾಡಿದ್ದಾನೆ. ಒಂದೇ ಕ್ಷಣದಲ್ಲಿ ಯಾವುದೇ ವಿಚಾರ ಮಾಡದೇ ಚೇರ್ ಮೇಲೆ ಕುಳಿತಿರುವ ಮಹಿಳೆಯನ್ನು ದೂಷಿಸುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದಾರೆ. ಅಥವಾ ಬಹುಶಃ ಆ ಮಹಿಳೆಯು ಫೋಟೋ ತೆಗೆದ ನಂತರ ಆಕೆಗೆ ತನ್ನ ಸೀಟನ್ನು ನೀಡಿರಬಹುದು ಎಂಬ ವಿಚಾರ ಸಹಿತ ನೆಟ್ಟಿಗರು ವ್ಯಕ್ತ ಮಾಡಿದ್ದಾರೆ.

ಒಬ್ಬನಂತೂ ಕ್ಯಾಮೆರಾ ಬಂದ ನಂತರ ಎಲ್ಲರೂ ಪತ್ರಕರ್ತರಾಗಿದ್ದಾರೆ ಎಂದು ಹೇಳಿದ್ದಾನೆ. ಮೊದಮೊದಲು ಒಬ್ಬಳು ಮಹಿಳೆ ಬಸ್ಸಿನಲ್ಲಿ ನಿಂತಿರುವುದನ್ನು ನೋಡಿದರೆ ಸಾಕು ಪುರುಷನು ಎದ್ದು ಆಕೆಗೆ ಕುಳಿತುಕೊಳ್ಳಲು ತನ್ನ ಸೀಟನ್ನು ಬಿಟ್ಟು ಕೊಡುತ್ತಿದ್ದನು. ಅಲ್ಲಿಂದ ನಾವು ಈಗ ಎಲ್ಲಿ ಬಂದು ನಿಂತಿರುವೆವು ನೋಡಿ. ಸೆಲ್ಫಿ ಗಿಂತಲೂ ಕ್ಯಾಮೆರಾದ ಉಪಯೋಗ ಹೀಗೂ ಆಗುತ್ತಿದೆ. ಇದರಿಂದ ಸಾಮಾಜಿಕ ವಿಷಯಗಳು ಸಮಸ್ಯೆಗಳು ನಿರ್ಮಾಣವಾಗಿ ಒತ್ತಡ ನಿರ್ಮಾಣವಾಗುತ್ತಿದೆ ಎಂದು ಈ ಮಹಿಳೆಯ ಫೋಟೋ ಶೇರ್ ಮಾಡಿ ತಮ್ಮ ಮಾತುಗಳನ್ನು ಹೇಳಿದ್ದಾರೆ.