ಬರೀ ಕುಡಿಯಲು ಸಿಗದೇ ಇದ್ದ ಕಾರಣಕ್ಕೆ ಪುನೀತ್ ಕುರಿತು ಅವಹೇಳಕನಕಾರಿ ಹೇಳಿಕೆ, ನಟ ಸುದೀಪ್ ಮಗಳು ಸಾನ್ವಿ ತರಾಟೆ!

ಪುನೀತ್ ನಮ್ಮನ್ನು ಅಗಲಿ 6 ದಿನಗಳು ಕಳೆದರೂ ಇಡೀ ಕರ್ನಾಟಕ ಮತ್ತು ಪುನೀತ್ ಅಭಿಮಾನಿಗಳು ಇನ್ನು ಚೇತರಿಸಿಕೊಳ್ಳುತ್ತಿಲ್ಲ. ಯುವರತ್ನ ನಮ್ಮನ್ನು ಅಗಲಿದ ದುಃಖ, ಸತ್ಯವನ್ನು ಇನ್ನುವರೆಗೆ ಸಹಿಸಿಕೊಳ್ಳಲು, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ದುಃಖದ ಮಡುವಿನಲ್ಲಿ ಇರುವಾಗಲೇ ಕೆಲವು ಕಿಡಿಗೇಡಿ ಉತ್ತರ ಭಾರತೀಯರು ಪುನೀತ್ ಅವರ ಬಗ್ಗೆ ಅವಮಾನಕರ ಹೇಳಿಕೆಯನ್ನು ನೀಡಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ.

ಅಪ್ಪು ಅಂತಿಮ ಸಂಸ್ಕಾರದಲ್ಲಿ ಅಭಿಮಾನಿಗಳು ಕುಡಿತದ ಅಮಲಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ಮದಿಕೊಳ್ಳಬಾರದು ಅಥವಾ ನಡೆಯಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ಪಬ್ ಮತ್ತು ಬಾರ್ ಗಳನ್ನು ಕಳೆದ ರವಿವಾರದ ವರೆಗೆ ಬಂದ್ ಮಾಡಿತ್ತು. ಆಗ ಉತ್ತರ ಭಾರತದ ಕೆಲವು ಕಿಡಿಗೇಡಿಗಳು ಮ#ಧ್ಯಕ್ಕಾಗಿ ಅತ್ತ ಇತ್ತ ಸುತ್ತಾಡಿದ್ದಾರೆ. ಕೊನೆಗೆ ಎಲ್ಲೋ ಅವರಿಗೆ ಬೀರ್ ಸಿಕ್ಕಿದೆ. ಆಮೇಲೆ ಕಾರಿನಲ್ಲಿ ಬೀರ್ ಬಾಟಲ್ ಜೊತೆಗೆ ಫೋಟೋ ತೆಗೆದುಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ ಪುನೀತ್ ಅವರನ್ನು ಅಶ್ಲೀಲ ಪದಗಳಿಂದ ಹೀಗೆ ನಿಂದಿಸಿದ್ದಾನೆ, ರಾಜ್ ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ, ಮರೆಯಬೇಡಿ ನಾನು ಮಾತ್ರ ಎಣ್ಣೆ ಕುಡಿದ ಬಳಿಕ ಆತನ ಸಮಾಧಿ ಮೇಲೆ ** ಮಾಡುತ್ತೇನೆ ಎಂದು ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆ.

ಇದನ್ನು ತಿಳಿದ ಮತ್ತು ಸಹಿಸದ ಸುದೀಪ್ ಪುತ್ರಿ ಸಾನ್ವಿ ಈ ಕಿಡಿಗೇಡಿಗಳ ವಿರುದ್ಧ ಸಿಟ್ಟನ್ನು ಹೊರ ಹಾಕಿದ್ದಾರೆ. ಜನರಿಗೆ ಮನುಷ್ಯತ್ವ ಇಲ್ಲವೇ? ಮ#ದ್ಯಕ್ಕಾಗಿ ಈ ರೀತಿ ವರ್ತಿಸುವದೇ ಎಂದು ಪ್ರಶ್ನೆ ಹಾಕಿದ ಸಾನ್ವಿ ‘ಕರ್ನಾಟಕ ಸರಕಾರ ಪಬ್ ಮತ್ತು ಬಾರ್ ಗಳನ್ನು ಬಂದ್ ಇಡುವ ನಿರ್ಧಾರ ತೆಗೆದುಕೊಂಡು ಒಳ್ಳೆಯದನ್ನೇ ಮಾಡಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಭಾರತೀಯರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ’ ಎಂದು ಚಾಟಿ ಬೀಸಿದ್ದಾರೆ.

ಪುನೀತ್ ಬಗ್ಗೆ ಈ ರೀತಿಯ ಅವಹೇಳನಕಾರಿ ಪೋಸ್ಟ್ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪೊಲೀಸರು ಅವರಿಗೆ ಸರಿಯಾಗಿ ಶಿಕ್ಷೆಯನ್ನು ನೀಡಬೇಕೆಂದು ಕನ್ನಡಿಗರು ಕೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇದ್ದು ಇಲ್ಲಿಯ ಅನ್ನವನ್ನು ತಿಂದು ಇಲ್ಲಿಯ ನಾಯಕ ನಟರನ್ನೇ ಹೀಯಾಳಿಸುವುದು ಇದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ ಕನ್ನಡಿಗರೇ. ಅಪ್ಪು ನಮ್ಮ ಆಸ್ತಿ. ಅವರ ಜೀವನ ನಮಗೆ ಮಾದರಿ. ಏನೂ ಗೊತ್ತಿಲ್ಲದ ಎಲ್ಲಿಂದಲೋ ಬಂದ ಕೆಲವು ನಾಯಿಗಳು ಉದ್ಧಟತನದಿಂದ ನಡೆದರೆ ಇವರಿಗೆ ಚೆನ್ನಾಗಿ ಶಿಕ್ಷೆ ಆಗಲೇಬೇಕು, ಅಲ್ವಾ?