ಈ ‘ಕಲ್ಲು’ ಕತ್ತರಿಸಿದಾಗ ರಕ್ತ ಹೊರಬರುತ್ತದೆ, ಕಾರಣ ತಿಳಿದರೆ ಆಶ್ಚರ್ಯಪಡುವಿರಿ!
ನಾವು ಜಗತ್ತಿನಲ್ಲಿ ಹಿಂದಿನಿಂದ ಇಂದಿನವರೆಗೂ ಎಷ್ಟೋ ಆಶ್ಚರ್ಯಕರ ಮತ್ತು ಅವಿಶ್ವಸನಿಯ ಘಟನೆಗಳು ಹಾಗೂ ವಸ್ತುಗಳು ಕಂಡು ಬರುತ್ತಿವೆ. ನಾವು ಇಂತಹದೇ ಒಂದು ಆಶ್ಚರ್ಯಕರ ಸಂಗತಿಯ ಬಗ್ಗೆ ತಿಳಿಸುವವರಿದ್ದೇವೆ ಅದೇನೆಂದರೆ ಒಂದು ಕಲ್ಲಿನ ಕುರಿತು. ಕಲ್ಲಿನ ಬಗ್ಗೆ ಅಂದರೆ ಏನಿರಬಹುದು ಎಂಬುದು ತಿಳಿದುಕೊಳ್ಳಲು ಮುಂದೆ ಓದಿ.
ಈ ಕಲ್ಲು ಬಂಡೆಗಲ್ಲಿಗೆ ಅಂಟಿಕೊಂಡಿರುವ ಒಂದು ವಿಚಿತ್ರವಾದ ಕಲ್ಲು ಇದೆ. ಇದರ ವಿಶೇಷತೆ ಏನೆಂದರೆ ಈ ಕಲ್ಲನ್ನು ಕತ್ತರಿಸಿದಾಗ ಅಥವಾ ಒಡೆದಾಗ ಅದರಿಂದ ರಕ್ತ ಬರುವದು. ಕೇಳಿ ಆಶ್ಚರ್ಯವಾಯಿತಲ್ಲ ಹೌದು ಇದು ನಿಜ. ಈ ಕಲ್ಲು ಸಾಧಾರಣ ಕಲ್ಲಿನ ತರ ಗಟ್ಟಿಯಾಗಿರದೆ ಇದು ಮೃದು ಹಾಗೂ ನಯವಾಗಿರುತ್ತದೆ. ಇದನ್ನು ಪಾಯುರಾ ಚಿಲಿನಿಸೆಸ್ ಎಂದು ಸಹ ಗುರುತಿಸಲಾಗುವದು. ಈ ಕಲ್ಲು ಒಡೆಯುವ ತಕ್ಷಣವೇ ಅದರಿಂದ ರಕ್ತ ಹರಿಯಲು ಪ್ರಾರಂಭ ವಾಗುವದು ಮನುಷ್ಯನಿಗೆ ಏನಾದರೂ ಗಾಯವಾದಾಗ ಹೇಗೆ ರಕ್ತ ಹರಿಯುವದೋ ಅದೇ ತರ ಈ ಕಲ್ಲಿನಿಂದಲೂ ಸಹ ರಕ್ತ ಹರಿಯುವದು ಅಷ್ಟೇ ಅಲ್ಲ ಅದರ ಒಳಭಾಗದಲ್ಲಿ ಮಾಂಸದ ತರ ಒಂದು ಪದಾರ್ಥ ಸಹ ಕಂಡು ಬರುವದು. ಜನರು ಆ ಪದಾರ್ಥವನ್ನು ಮಾಂಸದ ತರ ಸೇವನೆ ಮಾಡುವರು ಆದುದರಿಂದ ಈ ವಿಚಿತ್ರವಾದ ಕಲ್ಲಿಗೆ ತುಂಬಾ ಬೇಡಿಕೆ ನಿರ್ಮಾಣವಾಗಿದೆ.

ವಾಸ್ತವವಾಗಿ ಈ ವಿಚಿತ್ರ ಕಲ್ಲು ಚಿಲಿ ಮತ್ತು ಪೇರು ಸಮುದ್ರದ ದಂಡೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುವದು. ಮೊದಲನೆಯ ಬಾರಿಗೆ ಈ ಕಲ್ಲಿಗೆ ನೋಡಿದಾದ ಸಾಮಾನ್ಯಕಲ್ಲಿನ ತರನೆ ಕಾಣುವದು ಆದರೆ ಅದಕ್ಕೆ ಸ್ಪರ್ಶ ಮಾಡಿ ನೋಡಿದಾಗ ಮಾತ್ರ ಅದು ಮೃದು ಎಂದು ತಿಳಿಯುವದು.
ಜನರು ಈ ವಿಚಿತ್ರ ಪ್ರಕಾರದ ಕಲ್ಲು ಹುಡುಕುವ ಸಲುವಾಗಿ ಅಲ್ಲಿಯ ಜನರು ಸಮುದ್ರದ ಆಳದಲ್ಲಿ ಧುಮುಕಿ ಇದರ ಶೋಧ ಮಾಡುತ್ತಿದ್ದಾರೆ. ಮಾಂಸದ ತರ ಇದನ್ನು ಸಹ ವಿವಿಧ ಪ್ರಕಾರದ ಆಹಾರ ತಯಾರಿಸಿ ಇದರ ಸೇವನೆ ಮಾಡುವರು. ಅಲ್ಲಿಯ ಸ್ಥಾನಿಕ ಜನರು ಇದನ್ನು ಸಲಾಡ್ ರೂಪದಲ್ಲಿಯು ಸಹ ಸೇವನೆ ಮಾಡುವರು. ಹೆಚ್ಚಾಗಿ ಇಲ್ಲಿಯ ಜನರು ಇದನ್ನು ಕಚ್ಚಾ ರೂಪದಲ್ಲಿ ತಿನ್ನಲು ಇಷ್ಟ ಪಡುವರಂತೆ. ಆದುದರಿಂದ ಈ ವಿಚಿತ್ರ ಕಲ್ಲಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ನಾವು ಹೇಳುವದೇನೆಂದರೆ, ಈ ವಿಚಿತ್ರವಾದ ಕಲ್ಲು ಕಲ್ಲಲ್ಲ, ಅದರ ಹೊರತಾಗಿ ಇದೊಂದು ಪ್ರಾಣಿಯಾಗಿದೆ. ಪ್ರಾಣಿಯು ಕಲ್ಲಿನ ರೂಪದಲ್ಲಿದೆ. ಅದು ಸಹ ಶ್ವಾಸ ತಗೆದುಕೊಳ್ಳುವದು ಅಲ್ಲದೆ ಆಹಾರದ ಸೇವನೆ ಸಹ ಮಾಡುವರು. ಅದರಂತೆ ಇದರಲ್ಲಿ ಲೈಂಗಿಕ ಬದಲಾವಣೆ ಮಾಡುವ ಕ್ಷಮತೆ ಹೊಂದಿದೆ ಅದರಿಂದ ಇದು ಮೊಟ್ಟೆಯು ಸಹ ಕೊಡುವದು. ಈ ವಿಚಿತ್ರ ಪ್ರಾಣಿ ಕಲ್ಲಿನ ಹಾಗೆ ಕಾಣುವದು.