“ಸೂರ್ಯವಂಶಿ” ಚಿತ್ರದ ಸೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ! ನೋಡಿ ವೈರಲ್ ವಿಶೇಷ ಫೋಟೋ…..
ಎಂಎಸ್ ಧೋನಿ ವಿಶ್ವದಲ್ಲಿ ಅತಿ ಹೆಚ್ಚು ಫಾಲೋರ್ಸ್ ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರು. ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷ ಐಪಿಎಲ್ 2021 ಅನ್ನು ಗೆದ್ದುಕೊಂಡಿತು. ಅವರು ಪ್ರಸ್ತುತ 2021 ರ ಟಿ 20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹಿತ್ ಶೆಟ್ಟಿಯವರ ಬಹುಚರ್ಚಿತ ಚಿತ್ರ ಸೋರ್ಯವಂಶಿಯಲ್ಲಿ ಧೋನಿ ಕಾಣಿಸಿಕೊಳ್ಳುತ್ತಾರಾ? ಎಂಬ ಚರ್ಚೆ ಈಗ ಶುರುವಾಗಿದೆ.
ಅನೇಕ ಹಿಂದಿ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರಸಿದ್ಧ ನಟ ಗುಲ್ಶನ್ ಗ್ರೋವರ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಇತ್ತೀಚೆಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಟ್ವೀಟ್ ಮಾಡುವಾಗ ಗುಲ್ಶನ್ ಆ ಫೋಟೋಕ್ಕೆ ಒಂದು ಕ್ಯಾಪ್ಶನ್ ಬರೆದಿದ್ದಾರೆ ಇದರಿಂದ ಧೋನಿ ಸೂರ್ಯವಂಶಿ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆಯೇ? ಈ ಬಗ್ಗೆ ಎಲ್ಲರಿಗೂ ಉತ್ಸುಕತೆ ನಿರ್ಮಾಣವಾಗಿದೆ.
ಅವರು ಟ್ವೀಟ್ ಮಾಡುವ ಸಮಯದಲ್ಲಿ ” ಧೋನಿ ಅಣ್ಣನ ಜೊತೆಗೆ ಸೂರ್ಯವಂಶಿ ಸೆಟ್ ” ಅಂತ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಈ ಒಂದು ಕ್ಯಾಪ್ಶನ್ ನಿಂದಾಗಿ ಧೋನಿ ಕುರಿತು ಅನೇಕ ಪ್ರಶ್ನೆಗಳು ಉದ್ಭವವಾಗಿವೆ. ಮಹೇಂದ್ರ ಸಿಂಗ್ ಧೋನಿ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆಯೇ? ಅಥವಾ ಈ ಸೆಟ್ ನಲ್ಲಿ ಬೇರೆ ಯಾವ ಶೂಟಿಂಗ್ ಮಾಡಲು ಬಂದಿದ್ದಾರೆ? ಹೀಗೆ ಉತ್ಸುಕತೆ ನಿರ್ಮಾಣವಾಗುವ ಟ್ವೀಟ್ ಜೊತೆಗೆ ಅವರು ಸಿನಿಮಾದಲ್ಲಿಯ ಪ್ರಮುಖ ನಟ ಅಕ್ಷಯ ಕುಮಾರ್ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ.
ಸೂರ್ಯವಂಶಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ , ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರಿಬ್ಬರ ಜೊತೆಗೆ ಧೋನಿ ಸ್ಕ್ರೀನ್ ಶೇರ್ ಮಾಡುವವರಿದ್ದಾರೆಯೇ? ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆಯಾದ ಪ್ರತಿಕ್ರಿಯೆಗಳು ಬರುತ್ತಿವೆ, ಅಲ್ಲದೆ ಈ ಫೋಟೋ ಸಹ ತುಂಬಾ ವೈರಲ್ ಆಗುತ್ತಿದೆ.
On the sets of #Sooryavanshi with brother @msdhoni . What? Is MS Dhoni acting in the film or happened to filming in the same studio? @akshaykumar pic.twitter.com/BjMkadiZFF
— Gulshan Grover (@GulshanGroverGG) November 2, 2021
ಕೊರೊನಾ ವೈರಸ್ ನ ಪ್ರಭಾವ ಬಾಲಿವುಡ್ ತಟ್ಟಿದ್ದರಿಂದಾಗಿ ಬಾಲಿವುಡ್ ನ ಹಲವಾರು ಸಿನಿಮಾಗಳ ದಿನಾಂಕವನ್ನು ಮುಂದೂಡಲಾಗಿತ್ತು. ಸೂರ್ಯವಂಶ ಸಿನಿಮಾದ ಪ್ರದರ್ಶನ ಸಹ ಮುಂದೊಡಲಾಗಿತ್ತು. ಕೊನೆಗೆ ಈ ಚಲನಚಿತ್ರದ ಪ್ರದರ್ಶನ 5 ನವೆಂಬರ್ ರಂದು ಆಗಲಿದೆ. ಅಕ್ಷಯ ಕುಮಾರ್ ಮತ್ತು ಕತ್ರಿನಾ ಕೈಫ್, ಅಜಯ್ ದೇವ್ಗನ್ ಮತ್ತು ರಣವೀರ್ ಸಿಂಗ್ ಇವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು ಈ ಸಿನಿಮಾ ದೇಶದ ತುಂಬೆಲ್ಲ ಬಂಪರ್ ಓಪನಿಂಗ್ ಕಾಣುವ ಸಾಧ್ಯತೆ ಇದೆ.