ಜೀಬ್ರಾದ ಈ ರೂಪವನ್ನು ನೀವೂ ಎಂದೂ ನೋಡಲಿಕ್ಕಿಲ್ಲ! ಜಿಂಕೆಮರಿ ಮೇಲೆ ಮಾಡಿದ ಮನಕಲಕುವ ದಾಳಿಯ ವೈರಲ್ ವಿಡಿಯೋ…
ಕಾಡು ಪ್ರಾಣಿಗಳ ಹೋರಾಟ ನೋಡಲು ಎಲ್ಲರೂ ಉತ್ಸುಕರಾಗಿರುತ್ತಾರೆ. ಎಷ್ಟೋ ಸಲ ಈ ಪ್ರಾಣಿಗಳ ಜಗಳ ಮತ್ತು ಬೇಟೆಯಾಡುವ ರೀತಿಯನ್ನು ನೋಡಿ ನಾವು ಸಹ ಮಂತ್ರಮುಗ್ಧರಾಗುತ್ತೇವೆ. ಕೆಲವು ಸಲವಂತೂ ಶಾಂತ ಪ್ರಾಣಿಗಳ ಭಯಂಕರ ರೂಪವನ್ನು ನೋಡಿದಾಗ ತುಂಬಾ ಆಶ್ಚರ್ಯವಾಗುತ್ತದೆ. ಸದ್ಯ ಇಂತಹದ್ದೊಂದು ಶಾಂತವಾಗಿ ಇರುವ ಪ್ರಾಣಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಕಾರಣ ಜೀಬ್ರಾ ಪ್ರಾಣಿಗಳ ದಂಡು ಜಿಂಕೆ ಮರಿಯ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ನೋಡಬಹುದಾಗಿದೆ.
ವೈಲ್ಡ್ ಲೈಫ್ ಜಗತ್ತಿನಲ್ಲಿ ಜೀವನ ಪರದಾಟದ ಒಂದಕ್ಕಿಂತ ಒಂದು ವೀಡಿಯೋಗಳು ನೋಡಲು ಸಿಗುತ್ತವೆ. ಕೆಲವೊಂದು ವಿಡಿಯೋಗಳು ನಮ್ಮ ಮನಸ್ಸು ಗೆಲ್ಲುತ್ತವೆ, ಇನ್ನು ಕೆಲವು ವಿಡಿಯೋಗಳು ನೋಡಿದಾಗ ಗಾಬರಿಯೂ ಆಗುತ್ತೇವೆ. ಈ ವಿಡಿಯೋವನ್ನು ನೋಡಿದಾಗ ಮಾತ್ರ ನಿಶ್ಚಿತವಾಗಿಯೂ ಮನಕಲಕುತ್ತದೆ. ಏಕೆಂದರೆ ಜೀಬ್ರಾ ಪ್ರಾಣಿಗಳ ಒಂದು ದಂಡು ಜಿಂಕೆಮರಿಯ ಮೇಲೆ ಅಟ್ಯಾಕ್ ಮಾಡಿವೆ. ಜೀಬ್ರಾ ಪ್ರಾಣಿಗಳ ಈ ರೀತಿಯ ವ್ಯವಹಾರ ನಾವು ಯಾವತ್ತೂ ನೋಡಲಿಕ್ಕಿಲ್ಲ. ಇದೇ ಕಾರಣದಿಂದಾಗಿ ವಿಡಿಯೋ ನೋಡುಗರ ಮನಸ್ಸನ್ನು ಹಿಂಡುತ್ತಿದೆ.
ಈ ಸಂದರ್ಭದಲ್ಲಿ ತಾಯಿ ಜಿಂಕೆಯು ತನ್ನ ಮರಿಯನ್ನು ಜೀಬ್ರಾಗಳ ದಂಡಿನಿಂದ ಉಳಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿಯ ಒಂದು ಜೀಬ್ರಾ ಅಂತೂ ಜಿಂಕೆ ಮರಿಗೆ ತುಂಬಾ ಬೆನ್ನಟ್ಟಿದೆ. ಜೀಬ್ರಾದ ಈ ರೂಪವು ನೋಡುಗರಿಗೆ ನಿಜಕ್ಕೂ ಆಶ್ಚರ್ಯವನ್ನು ಮೂಡಿಸುತ್ತದೆ. ಜೀಬ್ರಾವು ಜಿಂಕೆಯ ಎಳೆಯ ಮರಿಯ ಮೇಲೆ ಡೆಡ್ ಕಿಕ್ ನ ಉಪಯೋಗ ಮಾಡಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಮೇಲೆ nature27_12 ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಜೀಬ್ರಾ ಪ್ರಾಣಿಯ ಈ ರೂಪವನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಈ ವಿಡಿಯೋವನ್ನು ನೋಡಿ ಅನೇಕರು ಕಾಮೆಂಟ್ ನಲ್ಲಿ ಜೀಬ್ರಾ ಪ್ರಾಣಿಯು ಜಿಂಕೆಮರಿಯ ಹಿಂದೆ ಯಾಕೆ ಬಿದ್ದಿದೆ? ಎಂಬ ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿದ ಇನ್ನೊಬ್ಬ, ಜೀಬ್ರಾ ಪ್ರಾಣಿಯು ನನ್ನ ಪಾಲಿಗೆ ಸತ್ತು ಹೋಗಿದೆ ಎಂದಿದ್ದಾನೆ. ಜೀಬ್ರಾ ಪ್ರಾಣಿಯು ಈ ರೀತಿಯಾಗಿ ವರ್ತಿಸುತ್ತದೆ ಅಂತ ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ ಎಂದು ಇನ್ನೊಬ್ಬ ಕಾಮೆಂಟ್ ಮಾಡಿದ್ದಾನೆ.