ತುಂಬಿದ ಕಲ್ಯಾಣ ಮಂಟಪದಲ್ಲಿ ವಧುವಿನ ಜೊತೆ ವರ ಮಾಡಿದ ಕೃತ್ಯ ನೋಡಿ ಸಿಟ್ಟಿಗೆದ್ದರು ನೆಟ್ಟಿಗರು! ನೀವೇ ನೋಡಿ ಏನು ಮಾಡಿದ್ದಾನೆ…?

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳಿಂದ ಜನರ ಮನರಂಜನೆಯಾಗುವುದು, ಇನ್ನು ಕೆಲವು ವಿಡಿಯೋಗಳನ್ನು ನೋಡಿ ನೆಟ್ಟಿಗರು ತಮ್ಮ ಸಿಟ್ಟನ್ನು ವ್ಯಕ್ತ ಮಾಡುತ್ತಾರೆ. ಇಲ್ಲಿಯವರೆಗೆ ಮದುವೆ ಮಂಟಪದಲ್ಲಿ ನಡೆಯುವ ವಿವಿಧ ಘಟನೆಗಳ ಅನೇಕ ವಿಡಿಯೋಗಳನ್ನು ನೋಡಿರಬಹುದು. ಈಗಲೂ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರನು ವಧುವಿನ ಜೊತೆಗೆ ನಡೆದುಕೊಂಡ ಅಧಿಕಪ್ರಸಂಗತನ ನೋಡುಗರಿಗೆ ಸಿಟ್ಟು ತರುತ್ತಿದೆ. ತನ್ನ ಹೆಂಡತಿಯಾಗುವವಳ ಜೊತೆಗೆ ವರ ನಡೆದುಕೊಳ್ಳುವ ರೀತಿ ತುಂಬಾ ಅಪವಾದಾತ್ಮಕವಾಗಿದೆ.

ಮದುವೆ ಸಮಾರಂಭದಲ್ಲಿ ವರನು ಸ್ಟೇಜ್ ಮೇಲೆ ವಧುವಿನ ಕೊರಳಿಗೆ ಹೂವಿನ ಹಾರವನ್ನು ಹಾಕುತ್ತಿರುವ ದೃಶ್ಯದ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಈ ದೃಶ್ಯದಲ್ಲಿ ವಧು ಸ್ಟೇಜ್ ಮೇಲೆ ಶಾಂತವಾಗಿ ನಿಂತಿದ್ದಾಳೆ. ವಧು-ವರರು ಪರಸ್ಪರ ಹೂವಿನ ಹಾರವನ್ನು ಕೊರಳಲ್ಲಿ ಹಾಕಿಕೊಳ್ಳುವ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ಹಾರವನ್ನು ಸರಿಯಾಗಿ ಹಾಕದೆ ಆಕೆಯ ಮೇಲೆ ಎಸೆದಿದ್ದಾನೆ. ವರನ ಈ ಒರಟುತನವನ್ನು ನೋಡಿ ಅಲ್ಲಿದ್ದವರೆಲ್ಲರೂ ಒಮ್ಮೆಲೆ ಬೆರಗಾಗುವದರ ಜೊತೆಗೆ ಸಿಟ್ಟಿಗೂ ಬಂದಿದ್ದಾರೆ. ವಧುವಿನ ಜೊತೆಗೆ ಆ ವರ ನಡೆದುಕೊಂಡ ರೀತಿ ಅವರಲ್ಲಿ ಪ್ರಶ್ನೆ ಮೂಡಿಸಿತ್ತು. ಇದರ ಮೇಲಿಂದ ಮದುವೆ ಆತನ ಇಷ್ಟದ ವಿರುದ್ಧ ನಡೆಯುತ್ತದೆ ಎಂಬ ಅರ್ಥ ಹುಟ್ಟು ಹಾಕಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಯೂಸರ್ಸ್ ಗಳಿಂದ ಈ ವಿಡಿಯೋ ಬಗ್ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಪ್ರಸ್ತುತ ವಿಡಿಯೋದ ವೈರಲ್ ಕ್ಲಿಪ್ ಇನ್ಸ್ಟಾಗ್ರಾಮ್ ಪೇಜ್ ಮುಖಾಂತರ ಶೇರ್ ಮಾಡಲಾಗಿದೆ.

ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಇದನ್ನು ಲೈಕ್ ಮಾಡುವುದರೊಂದಿಗೆ ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ಸಹ ಹೊರಹಾಕಿದ್ದಾರೆ.

ನೋಡಿ ಈ ವಿಡಿಯೋ…

ಈ ವಿಡಿಯೋ ನೋಡಿದ ಒಬ್ಬ ಯೂಜರ್, ಪಾಪ ಬಡಪಾಯಿ ಹುಡುಗಿಯ ಎಂಥ ಅವಮಾನವಾಯಿತು ಎಂದಿದ್ದಾನೆ. ಇನ್ನೊಬ್ಬ ಈ ವಿಡಿಯೋವನ್ನು ನೋಡಿ ಸಿಟ್ಟಿನಿಂದ ನಾನು ಅಲ್ಲಿ ಹೋಗಿ ವರನಿಗೆ ಹೊಡೆದರೆ ಆತ ಅಲ್ಲಿ ನಿಲ್ಲುವುದಿಲ್ಲ ಎಂದಿದ್ದಾನೆ. ಇನ್ನೊಬ್ಬ ಭಾರತದಲ್ಲಿ ಈ ರೀತಿಯ ಘಟನೆಗಳು ಮದುವೆ ಸಮಾರಂಭದಲ್ಲಿ ನಡೆಯುವುದು ಸಹಜ ಎಂದಿದ್ದಾನೆ.