VIDEO: 15 ಅಡಿಗೂ ಹೆಚ್ಚು ಉದ್ದದ ಹೆಬ್ಬಾವನ್ನು ಭುಜದ ಮೇಲೆ ಹೊತ್ತುಕೊಂಡು ಮುಂದೆ ಮಾಡಿದ್ದೇನು? ನೋಡಿ ವೈರಲ್ ವಿಡಿಯೋ….

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸದ್ದು ಮಾಡುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ 15 ಅಡಿಗೂ ಹೆಚ್ಚು ಎತ್ತರದ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋನೋಡಿದ ಕೂಡಲೇ ನೀವು ಆಶ್ಚರ್ಯ ಪಡುವಿರಿ. ಅದರಲ್ಲೂ ಹಾವಿನ ಹೆಸರೇ ತಗೆದರೆ ಭಯಪಡುವವರಿಗೆ ಈ ವಿಡಿಯೋ ತುಂಬಾನೇ ವಿಶೇಷ .ಬನ್ನಿ ಈ ವಿಡಿಯೋದ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಭುಜದ ಮೇಲೆ ಭಾರವಾದ ಹೆಬ್ಬಾವನ್ನು ಹೊತ್ತಿರುವುದನ್ನು ನೀವು ನೋಡಬಹುದು. ಹೆಬ್ಬಾವು ಸುಮಾರು 15 ಅಡಿ ಉದ್ದವಿದೆಯಂತೆ. ವ್ಯಕ್ತಿ ತನ್ನ ಭುಜದ ಮೇಲೆ ಹೆಬ್ಬಾವಿನೊಂದಿಗೆ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ಕಾಣಬಹುದು. ನಂತರ ಅವನು ಒಂದು ಮನೆಗೆ ಪ್ರವೇಶಿಸುತ್ತಾನೆ. ಈ ದೃಶ್ಯವು ಹಾರರ್ ಚಿತ್ರಕ್ಕಿಂತ ಕಡಿಮೆಯಿಲ್ಲ.

ವಿಡಿಯೋ ನೋಡಿ

royal_pythons_ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವೀಡಿಯೊವನ್ನು ತುಂಬಾನೆ ಇಷ್ಟಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಶೇರ್ ಮಾಡಿರುವ ವಿಡಿಯೋವನ್ನು ಸುಮಾರು 6 ಸಾವಿರ ಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಲೈಕ್ ಸಹ ತುಂಬಾನೇ ಹೆಚ್ಚುತ್ತಲಿವೇ. ವಿಡಿಯೋ ನೋಡಿದ ಜನ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ‘ಅಮ್ಮಾ, ನಾನು ನನ್ನ ಜೊತೆಗೆ ಏನೋ ತಂದಿದ್ದೇನೆ ಅದನ್ನು ನಮ್ಮ ಮನೆಯಲ್ಲಿ ಇಡಬಹುದಾ?” ಎಂದು ಕಾಮೆಂಟ್ ಮಾಡಿದ್ದಾನೆ.

ಈ ವಿಡಿಯೋ ನೋಡಿದ ಮೇಲೆ ಅನೇಕ ಜನರು ಚಿಂತೆನಿರ್ಮಾಣ ಮಾಡುವ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಯುಜರ್ಸ್, ” ಅಣ್ಣಾ ಅದನ್ನು ಕೆಳಗಡೆ ಇಡು, ಅರೆ ಅದು ನೋಡು ಎಷ್ಟು ದೊಡ್ಡದಾಗಿ ಮತ್ತು ಭಯಾನಕವಾಗಿ ಕಾಣಿಸುತ್ತಿದೆ” ಎಂದು ಕಾಮೆಂಟ್ಮಾಡಿದ್ದಾನೆ.