Video: ನಂದಿಯ ಹಣೆಯ ಮೇಲೆ UPI Scan ಕೋಡ್, ವಿಡಿಯೋ ಶೇರ್ ಮಾಡುತ್ತಾ ಆನಂದ್ ಮಹಿಂದ್ರಾ ಹೇಳಿದ್ದೇನು ನೋಡಿ!

ಆನಂದ್ ಮಹಿಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಸಕ್ರಿಯರಾಗಿರುತ್ತಾರೆ. ಅವರು ಶೇರ್ ಮಾಡಿರುವ ಅನೇಕ ವಿಡಿಯೋ ಮತ್ತು ಫೋಟೋಗಳು ತುಂಬಾನೇ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ಆನಂದ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಆ ವಿಡಿಯೋ ನೋಡಿ ಎಲ್ಲರಿಗೂ ಆಶ್ಚರ್ಯ ವಾಗುತ್ತಿದೆ. ಸದ್ಯಕ್ಕೆ ತಂತ್ರಜ್ಞಾನದಿಂದಾಗಿ ಎಲ್ಲಡೆಗೂ ವಿಕಾಸದ ಸಾಗರವೇ ಹರಿಯುತ್ತಿದೆ. ಡಿಜಿಟಲ್ ಕಾಲದಲ್ಲಿ ಡಿಜಿಟಲ್ ಪೆಮೆಂಟ್ ಗೆ ತುಂಬಾ ಪ್ರಾಮುಖ್ಯತೆ ಇದೆ. ಇದರಿಂದಾಗಿ ಇಂದು ಪ್ರತಿಯೊಬ್ಬರೂ ಡಿಜಿಟಲ್ ಪೆಮೆಂಟ್ ತುಂಬಾನೇ ಇಷ್ಟ ಪಡುತ್ತಿದ್ದಾರೆ. ಏಕೆಂದರೆ ಡಿಜಿಟಲ್ ಪೆಮೆಂಟ್ ನಿಂದ ಯಾವುದೇ ತರಹದ ಹಣ ಜೇಬಿನಲ್ಲಿ ಇಟ್ಟಿಕೊಂಡು ಓಡಾಡುವ ಗೋಜು ಹೋಗಿ ಬಿಟ್ಟಿದೆ. ಜೇಬಿನಲ್ಲಿ ಒಂದು ಮೊಬೈಲ್ ಇಟ್ಟುಕೊಂಡು ಹೋದರೆ ಸಾಕು ಏನೇ ಬೇಕಾದರೂ ತಗೆದುಕೊಂಡು ಅದರ ಪೆಮೆಂಟ್ ಡಿಜಿಟಲ್ ಮುಖಾಂತರ ಮಾಡಬಹುದು.

ಲಾಕ್‌ಡೌನ್ ಸಮಯದಲ್ಲಿ ಡಿಜಿಟಲ್ ಪೆಮೆಂಟ್ ವಿಧಾನಗಳನ್ನು ವಿಶೇಷವಾಗಿ ಬಳಸಲಾಯಿತು. ಈ ನಿಟ್ಟಿನಲ್ಲಿ, ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವೀಡಿಯೊವನ್ನು ನೋಡಿದ ನಂತರ ನೀವು ಆಶ್ಚರ್ಯಪಡದೇ ಇರುವದಿಲ್ಲ. ಮಹಿಂದ್ರಾ ಅವರು 30 ಸೆಕೆಂಡ್‌ನ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಅವರು, ‘ಭಾರತವು ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ವೇಗವಾಗಿ ಸಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕೇ?’ ಎಂದು ವಿಡಿಯೋ ಗೆ ಶೀರ್ಷಿಕೆ ಬರೆದಿದ್ದಾರೆ.

ವಿಡಿಯೋ ನೋಡಿ

ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸ್ಮಾರ್ಟ್‌ಫೋನ್‌ನೊಂದಿಗೆ ನಂದಿಯ ಹಣೆಯ ಮೇಲೆ ಯುಪಿಐ ಕೋಡ್ ಅನ್ನು ದೇಣಿಗೆಗಾಗಿ ಸ್ಕ್ಯಾನ್ ಮಾಡುತ್ತಿರುವುದನ್ನು ಕಾಣಬಹುದು.

ಈ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಸಾಕಷ್ಟು ರೀಟ್ವೀಟ್‌ ಮಾಡಿದ್ದಾರೆ. ಬಸವಣ್ಣ ಆಡಿಸುವವರು ಆಗಾಗ ಮನೆಬಾಗಿಲಿಗೆ ಬರುತ್ತಿರುತ್ತಾರೆ ಆದರೆ ಅವರು ಮನೆಯ ಮುಂದೆ ಬಂದಾಗ ಅವರಿಗೆ ಕೊಡಲು ಹಣವಿಲ್ಲ ಎಂಬ ಕಾರಣಕ್ಕೆ ಮುಂದೆ ಕಳುಹಿಸುತ್ತಾರೆ. ಆದರೆ ಈಗ ಅವರು UPI ಸ್ಕ್ಯಾನ್‌ಗಳನ್ನು ಅಳವಡಿಸಿ ಹಣವಿಲ್ಲ ಎಂದವರ ಬಳಿ ಸ್ಕ್ಯಾನ್ ಆಂಡ್ ಪೇ ಮಾಡಿಸಿಕೊಳ್ಳುತ್ತಿದ್ದಾರೆ.

ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋಗೆ ಹಲವಾರು ಕಾಮೆಂಟ್‌ಗಳು ಬಂದಿವೆ. ಈ ವಿಡಿಯೋ ನೋಡಿ ಕೆಲವರು ಮೋದಿಯನ್ನು ಹೊಗಳಿದ್ದಾರೆ. ‘ಮೋದಿ ಜೀ ಹೈ ತೊ ಮುಮ್ಕಿನ್ ಹೈ..’, ‘ಇದಕ್ಕಿಂತ ಡಿಜಿಟಲೀಕರಣ ಬೇರೊಂದಿಲ್ಲ’ ಎಂಬಂತಹ ಕಾಮೆಂಟ್‌ಗಳು ಅದರ ಮೇಲೆ ಬಂದಿವೆ. ಡಿಜಿಟಲೀಕರಣವನ್ನು ಈ ಮಟ್ಟಕ್ಕೆ ತಂದಿದ್ದಕ್ಕಾಗಿ ಒಬ್ಬ ಬಳಕೆದಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.