ಭಾರತ-ಚೀನಾ ಯುದ್ಧ ಪ್ರಾರಂಭವಾದರೆ ‘ರಶಿಯಾ ಯಾರ ಬೆಂಬಲಕ್ಕೆ’? ರಶಿಯನ್ TV ಸ್ಪಷ್ಟ ಪಡಿಸಿತು.
ಮುಂಬರುವ ದಿನಗಳಲ್ಲಿ ಒಂದು ವೇಳೆ ಭಾರತ ಮತ್ತು ಚೀನಾ ಮಧ್ಯೆ ಯುದ್ಧ ಪ್ರಾರಂಭವಾದರೆ ರಶಿಯಾ ಭಾರತದ ಬೆಂಬಲಕ್ಕೆ ನಿಲ್ಲುವ ಸೂಚನೆಯನ್ನು ರಶಿಯಾದ ಅತೀ ದೊಡ್ಡ ಮೀಡಿಯಾ ಹೌಸ್ ‘ರಶಿಯನ್ tv’ ರಶಿಯಾದ ನಿಲುವನ್ನು ಸ್ಪಷ್ಟ ಪಡಿಸಿದೆ.
ಸದ್ಯದ ಸಮಯದಲ್ಲಿ ಭಾರತ ಮತ್ತು ಚೀನಾದ ನಡುವೆ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆ ಸ್ವತಃ ಚೀನಾ ಕಾರಣವಾಗಿದೆ. ಚೀನಾ ಮೊದಲು ಸಿಕ್ಕಿಮ್ ಆನಂತರ ಲದ್ದಾಕ್ ನಲ್ಲಿ ತನ್ನ ಸೈನ್ಯ ಸಂಖ್ಯೆಯನ್ನು ಹೆಚ್ಚು ಮಾಡಿದ ನಂತರ ಭಾರತವು ಸಹ ಅದಕ್ಕೆ ಪ್ರತ್ತ್ಯುತ್ತರವಾಗಿ ತನ್ನ ಸೈನ್ಯ ಬಲವನ್ನು ಹೆಚ್ಚಿಸಿತು.
ಭಾರತದ ಸೈನ್ಯ ಗಡಿಯಲ್ಲಿ ತಲುಪಿದ ನಂತರ ಚೀನಾದ ರಾಗ ಬದಲಾಗಿ ಮಾತುಕತೆಯಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಚಾರ ವ್ಯಕ್ತ ಮಾಡುತ್ತಿದೆ. ಈ ವಿಚಾರದ ಹಿಂದೆ ರಶಿಯಾ ಇರಬಹುದೆನ್ನುವ ತರ್ಕವೂ ಇದೆ.

ಇದೆ ಸಂದರ್ಭದಲ್ಲಿ ರಶಿಯನ್ tv ಸಹಿತ ತನ್ನ ನಿಲುವನ್ನು ಸ್ಪಷ್ಟ ಪಡಿಸುತ್ತ ಒಂದು ವೇಳೆ ಯುದ್ಧ ಸ್ಥಿತಿ ನಿರ್ಮಾಣವಾದರೆ ತಾನು ಭಾರತದ ಜೊತೆಗೆ ನಿಲ್ಲೆತ್ತೇನೆಂಬ ಸಂದೇಶ ಕೊಟ್ಟಿದೆ.
ರಶಿಯನ್ tv ಲದ್ದಾಕ್ ವಿಷಯವಾಗಿ ನೀಡಿದ ತನ್ನ ಕವರೇಜ್ ನಲ್ಲಿ, ಚೀನಾ ತಪ್ಪು ಮಾಡುತ್ತಿದೆ, ಗಡಿಯಲ್ಲಿ ಬಿಗುವಿನ ವಾತಾವರಣವನ್ನು ಚೀನಾ ದೇಶವೇ ನಿರ್ಮಾಣ ಮಾಡಿದೆ, ಪ್ರಸ್ತುತ ಸಮಯದಲ್ಲಿ ಜಗತ್ತು ಕೊರೊನದ ಸಾಂಕ್ರಾಮಿಕ ರೋಗದಲ್ಲಿ ಸಿಲುಕಿರುವಾಗ ಇಂಥ ಸಂದರ್ಭದಲ್ಲಿ ಅದರ ಯೋಚನೆಯನ್ನು ಬಿಟ್ಟು ಚೀನಾ ತಪ್ಪು ಕೃತ್ಯಗಳನ್ನು ಎಸಗುತ್ತಿದೆ, ಭಾರತ ಒಂದು ತಿಳುವಳಿಕೆಯುಳ್ಳ ದೇಶವಾಗಿದೆ, ಅದೆಂದು ಬಿಗುವಿನ ವಾತಾವರಣವನ್ನು ನಿರ್ಮಾಣ ಮಾಡಲು ಬಯಸುವದಿಲ್ಲ. ಲದ್ದಾಕ್ ನಲ್ಲಿ ತಯಾರಾಗಿರುವ ಈಗಿನ ಉದ್ವಿಗ್ನ ಪರಿಸ್ಥಿತಿಗೆ ಚೀನಾನೇ ಕಾರಣವಾಗಿದೆ ಎಂದು ರಶಿಯಾ ಹೇಳಿದೆ. ಅದಕ್ಕೆ ಒಂದು ವೇಳೆ ಏನಾದರೂ ಯುದ್ಧದ ಸಂದರ್ಭ ನಿರ್ಮಾಣವಾದಲ್ಲಿ ರಶಿಯಾ ಭಾರತದ ಪಕ್ಷ ವಹಿಸುತ್ತದೆ.
ರಾಜಕೀಯ ತಜ್ಞರ ಪ್ರಕಾರ ಭವಿಷ್ಯದಲ್ಲಿ ಭಾರತ ರಶಿಯಾದಿಂದಲೇ ಯುದ್ಧ ಸಾಮಗ್ರಿಗಳನ್ನು ಖರೀದಿಸುತ್ತದೆ, ಅದೇ ಒಂದು ವೇಳೆ ಚೀನಾಗೆ ಹೋಲಿಸಿದರೆ ಚೀನಾ ಅಷ್ಟೊಂದು ಯುದ್ಧ ಸಾಮಗ್ರಿಗಳನ್ನು ರಶಿಯಾದಿಂದ ಖರೀದಿಸುವದಿಲ್ಲ, ಆದ್ದರಿಂದ ರಶಿಯಾದ ಸಲುವಾಗಿ ಭಾರತವೇ ಹೆಚ್ಚು ಪ್ರಮುಖವಾಗಿದೆ.