‘ಈ’ ವ್ಯಕ್ತಿ ಬಡ ಮಕ್ಕಳಿಗೆ ಹೋಟೆಲ್ ನಲ್ಲಿ ಊಟ ಮಾಡಿಸಿದ, ಊಟದ ಬಿಲ್ ನೋಡಿದರೆ ನೀವು ಆಶ್ಚರ್ಯ ಪಡುವಿರಿ!
ನಮ್ಮ ಹೃದಯದಲ್ಲಿ ಮಾನವೀಯತೆ ಇರುವವರೆಗೂ ನಮ್ಮಿಂದಾಗಿಯೇ ಜಗತ್ತಿನ ಅನೇಕ ಜನರು ಸುಖವಾಗಿರುತ್ತಾರೆ. ಸಂತೋಷವನ್ನು ಹಂಚಿಕೊಳ್ಳುವುದು ಯಾವುದೇ ಸಾಮಾನ್ಯ ವ್ಯಕ್ತಿಯ ಕೆಲಸವಲ್ಲ. ನಗು ಸಂತೋಷದ ಸಾಧನವೂ ಆಗಿದೆ. ಕೇರಳದ ಮಲ್ಲಪುರಂನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಈ ಮಾನವೀಯ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಅಖಿಲೇಶ್ ಕುಮಾರ್ ಕೆಲಸ ಮುಗಿಸಿ ಕೇರಳದ ಮಲ್ಲಪುರಂನಲ್ಲಿರುವ ಸಾಬ್ರಿ ರೆಸ್ಟೋರೆಂಟ್ಗೆ ಊಟಕ್ಕೆ ಹೋಗುತ್ತಾರೆ. ಅಖಿಲೇಶ್ ಊಟಕ್ಕೆಂದು ಹೋದ ಹೋಟೆಲಿನ ಹೊರಗಡೆ ಇಬ್ಬರು ಬಡ ಮಕ್ಕಳು ನಿಂತು ನೋಡುತ್ತಿದ್ದರು. ಆ ಮಕ್ಕಳನ್ನು ಗಮನಿಸಿದ ಅಖಿಲೇಶ್ ಕೈ ಸನ್ನೆ ಮಾಡಿ ಅವರನ್ನು ಕರೆದರು. ಇಬ್ಬರು ಸಹೋದರ ಸಹೋದರಿಯಾಗಿದ್ದರು.
ಅವರನ್ನು ಕರೆದು ಹೋಟೆಲ್ ನಲ್ಲಿಯ ಟೇಬಲ್ ಮೇಲೆ ಕುಳ್ಳಿರಿಸಿ ” ನೀವು ಏನು ತಿನ್ನುವಿರಿ? ” ಎಂದು ಅಖಿಲೇಶ್ ಅವರಿಗೆ ಕೇಳಿದರು. ಆದರೆ ಆ ಇಬ್ಬರು ಮಕ್ಕಳು ಏನನ್ನು ಮಾತನಾಡದೆ ಅವರ ಮುಂದಿದ್ದ ಊಟದ ತಟ್ಟೆಯ ಕಡೆಗೆ ಕೈ ಸನ್ನೆ ಮಾಡಿದರು. ತದನಂತರ ಅಖಿಲೇಶ್ ಎರಡು ಊಟವನ್ನು ತರಿಸಿದರು. ಮೊದಲು ಕೈಯನ್ನು ತೊಳೆದುಕೊಂಡು ಬರಲು ಹೇಳಿದರು. ನಂತರ ಊಟ ಮಾಡಲು ಹೇಳಿದರು.
ಇಬ್ಬರು ಮಕ್ಕಳು ಹೊಟ್ಟೆ ತುಂಬಾ ಊಟ ಮಾಡಿದರು. ತದನಂತರ ಹೊರಡುವಾಗ ಇಬ್ಬರು ಮಕ್ಕಳು ಅಖಿಲೇಶ್ ಕಡೆಗೆ ನೋಡಿ ಒಂದು ಸ್ಮಿತ್ ಹಾಸ್ಯ ನೀಡಿದರು. ಇದನ್ನು ಕಂಡು ಅಖಿಲೇಶ್ ಅವರಿಗೂ ಸಹ ತುಂಬಾ ಖುಷಿಯಾಯಿತು. ನಂತರ ಅಖಿಲೇಶ್ ಹೋಟೆಲ್ ವೇಟರ್ ಗೆ ಬಿಲ್ ವಿಚಾರಿಸಿದರು. ವೇಟರ್ ಅವರ ಕೈಯಲ್ಲಿ ಬಿಲ್ ನೀಡಿದನು, ಬಿಲ್ ಕಂಡು ಅಖಿಲೇಶ್ ಆಶ್ಚ#ರ್ಯ ಗೊಂಡರು.

ಅಖಿಲೇಶ್ ಇದಕ್ಕಿಂತ ಮುಂಚೆ ಇಂತಹ ಬಿಲ್ ನೋಡೇ ಇರಲಿಲ್ಲ. ಬಿಲ್ ದಲ್ಲಿ ಹಣದ ಬದಲಾಗಿ ಒಂದು ಸಂದೇಶ ವಿತ್ತು. “ ನಮ್ಮ ಹತ್ತಿರ ಮಾನವೀಯತೆಯ ಬಿಲ್ ಪಾವತಿಸುವ ಯಂತ್ರವಿಲ್ಲ! ಸಂತೋಷವಾಗಿರಿ”. ಎಂದು ಸಂದೇಶ ಬರೆಯಲಾಗಿತ್ತು. ಇದನ್ನು ಓದಿ ಅಖಿಲೇಶ್ ತುಂಬಾ ಭಾವುಕರಾಗಿ ಆ ಬಿಲ್ ನ ಒಂದು ಫೋಟೋ ತಗೆದು ಅದನ್ನು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದರು.
ಈ ಹೋಟೆಲ್ ಸಿ ನಾರಾಯಣ್ ನ ಹೆಸರಿನ ವ್ಯಕ್ತಿಯದ್ದಾಗಿದ್ದು ಇವರು ದುಬೈ ನಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಒಂದು ವರದಿಯ ಪ್ರಕಾರ, ಈ ಘಟನೆ 2013 ರಲ್ಲಿ ನಡೆದಿದೆ ಅಖಿಲೇಶ್ ಇದನ್ನು ತಮ್ಮ ಡೈರಿಯಲ್ಲೂ ಬರೆದು ಇಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.