ಪಾಕಿಸ್ತಾನದ ಮಾಜಿ ಸೈನಿಕನಿಗೆ ಭಾರತದಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಸನ್ಮಾನ! ಯಾಕೆ? ಏನಿದು ವಿಷಯ?
ಮಹತ್ವದ ದಾಖಲೆ ಮತ್ತು ನಕಾಶೆಗಳನ್ನು ಆತ ತನ್ನ ಬೂಟಿನಲ್ಲಿ ಬಚ್ಚಿಟ್ಟಿದ್ದನು. ಪಾಕಿಸ್ತಾನ ಸೇನೆಯ 20 ವರ್ಷದ ಈ ತರುಣ ಸಿಯಲ್ಕೊಟ್ ಸೆಕ್ಟರ್ ನಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದನು. ಮಾರ್ಚ್ 1971 ರಲ್ಲಿ ಆತ ಹೇಗೋ ಭಾರತದ ಸೀಮೆಯಲ್ಲಿ ಪ್ರವೇಶಿಸಿದನು. ಆಗ ಅದೇ ವೇಳೆಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೈನಿಕರಿಂದ ಸಾಮಾನ್ಯ ಜನತೆಯ ಮೇಲೆ ಅತ್ಯಾಚಾರ ಮಾಡುವುದು ಶುರುವಾಗಿತ್ತು. ಅವರು ಅಕ್ಷರಶಃ ನರ ಸಂಹಾರದ ಯೋಜನೆಯನ್ನು ಹಾಕುತ್ತಿದ್ದರು. ಈ ತರುಣನು ಭಾರತದ ಸೀಮೆಯಲ್ಲಿ ಬಂದಾಗ ಆತನ ಜೇಬಿನಲ್ಲಿ ಬರೀ 20 ರೂಪಾಯಿ ಮತ್ತು ಪಾಕಿಸ್ತಾನ ಸೈನ್ಯದ ಬಗ್ಗೆ ಕೆಲವೊಂದು ಮಾಹಿತಿಗಳಿದ್ದವು.
ಭಾರತದ ಸೀಮೆಯಲ್ಲಿ ಆತ ಪ್ರವೇಶಿಸುತ್ತಲೇ ಭಾರತದ ಸೈನಿಕರು ಆತನನ್ನು ಬಂಧಿಸಿದರು. ಮೊದಮೊದಲು ಈತ ಪಾಕಿಸ್ತಾನದ ಗೂಢಾಚಾರನಂತೆ ಕಂಡುಬಂದ. ಹೀಗಾಗಿ ಆತನನ್ನು ಲಗುಬಗೆಯಲ್ಲಿ ಪಠಾಣ್ ಕೋಟಕ್ಕೆ ಒಯ್ಯಲಾಯಿತು. ಅಲ್ಲಿ ವರಿಷ್ಠ ಸೈನ್ಯ ಅಧಿಕಾರಿಗಳಿಂದ ಆತನ ತನಿಖೆ ಶುರು ಆಯಿತು. ತನಿಖೆ ಸಂದರ್ಭದಲ್ಲಿ ಆತ ತನ್ನ ಹತ್ತಿರವಿದ್ದ ಪಾಕಿಸ್ತಾನಿ ಸೈನ್ಯದ ಕಾಗದಪತ್ರಗಳನ್ನು ತೋರಿಸಿದಾಗ ಈ ವಿಷಯಗಳು ತುಂಬಾ ಗಂಭೀರವಾಗಿದೆ ಎಂದು ಭಾರತೀಯ ಸೈನ್ಯದ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ತದನಂತರ ಆ ಯುವ ಪಾಕಿಸ್ತಾನಿ ಸೈನಿಕನಿಗೆ ದೆಹಲಿಗೆ ಕಳುಹಿಸಲಾಯಿತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ನನ್ನ ಹೆಸರಿಗೆ ಇಂದಿಗೂ ಮರಣದಂಡನೆಯ ಶಿಕ್ಷೆ ಬಾಕಿ ಇದೆ ಎಂದು ಕಾಜಿ ಸಜ್ಜಾದ ಅಭಿಮಾನದಿಂದ ಹೇಳುತ್ತಾರೆ. 1971 ರಲ್ಲಿ ಬಾಂಗ್ಲಾದೇಶವನ್ನು ಸ್ವತಂತ್ರ ಮಾಡುವ ಸಲುವಾಗಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಲೆಫ್ಟಿನೆಂಟ್ ಕರ್ನಲ್ ಸಜ್ಜಾದ ಅಲಿ ಜಹೀರ್ ಇವರು ಭಾರತಕ್ಕೆ ಸಹಾಯ ಮಾಡಿದರು. ಬಾಂಗ್ಲಾದೇಶದಲ್ಲಿ ಕರ್ನಲ್ ಕಾಜಿ ಸಜ್ಜಾದ ಅಲಿ ಜಹೀರ್ ಇವರಿಗೆ ಬಾಂಗ್ಲಾದೇಶದ ಅತ್ಯುನ್ನತ ಪುರಸ್ಕಾರವನ್ನು ನೀಡಿ ಸನ್ಮಾನಿಸಿದೆ. ಈಗ ಭಾರತ ಸರ್ಕಾರವು ಸಹ ಕರ್ನಲ್ ಕಾಜಿ ಸಜ್ಜಾದ್ ಅಲಿ ಜಹೀರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. 1971 ರ ಯುದ್ಧದಲ್ಲಿ ಭಾರತಕ್ಕಾಗಿ ನೀಡಿದ ಕೊಡುಗೆಗಾಗಿ ಕರ್ನಲ್ ಕಾಜಿ ಸಜ್ಜಾದ ಅಲಿ ಜಹೀರ್ ಇವರಿಗೆ ಈಗ ಭಾರತ ಸರ್ಕಾರವು ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿತು.