ಕಾಡಿನ ರಾಜ ಎಂದೇ ಮೆರೆಯುವ ಸಿಂಹಗಳಿಗೆ ಹೆದರಿಸಿ ಓಡಿಸಿದ ನಾಯಿಯ ಅದ್ಭುತ ಡೇರಿಂಗ್ ನ ವೈರಲ್ ವಿಡಿಯೋ…!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಂಹಗಳನ್ನು ಹೆದರಿಸಿ ಓಡಿಸಿ ಕಳುಹಿಸಿದ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಿಂಹ ಮತ್ತು ನಾಯಿಯ ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬನಂತೂ ಇದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾನೆ. ಇನ್ನೊಬ್ಬ ಈ ದಾರಿ ಬಹುಶಃ ನಾಯಿಯದೇ ಇರಬೇಕು. ಯಾಕೆಂದರೆ ಪ್ರತಿಯೊಂದು ನಾಯಿಯು ತನ್ನ ಏರಿಯಾದಲ್ಲಿ ಸಿಂಹವೇ ಆಗಿರುತ್ತದೆ. ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಲ್ಲಿಯೂ ಈ ವಿಡಿಯೋ ತುಂಬಾ ಶೇರ್ ಆಗುತ್ತಿದೆ.

ನಾಯಿಯು ಸಿಂಹದ ಮೇಲೆ ಅಟ್ಯಾಕ್ ಮಾಡಿದೆ ಅಥವಾ ಹಲ್ಲೇ ಮಾಡಿದೆ ಅಂದರೆ ಯಾರಿಗೂ ನಿಜವೆನಿಸುವದಿಲ್ಲ. ಆದರೆ ಈ ವಿಡಿಯೋ ನೋಡಿದಾಗ ಮಾತ್ರ ನಿಜಕ್ಕೂ ನಿಮಗೂ ಅದ್ಭುತ ವೆನಿಸುವುದು.

ವಿಡಿಯೋ ನೋಡಿ

ವೈರಲ್ ಆದ ಈ ವಿಡಿಯೋ ನಿಜಕ್ಕೂ ಅದ್ಭುತವೇ ಸರಿ. ನಾಯಿಯು ಅಲ್ಲಿ ಒಂದು ಸೆಕೆಂಡ್ ಸಹ ಸಿಂಹಗಳಿಗೆ ನಿಲ್ಲಲು ಬಿಡುವುದಿಲ್ಲ, ಅವುಗಳ ಮೈಮೇಲೆ ಏರಿ ಹೋಗಿ ಹೆದರಿಸಿ ಓಡಿಸಿಯೇ ಕಳಿಸುತ್ತದೆ. ಸಫಾರಿಯಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋವನ್ನು IFS ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಕ್ಯಾಪ್ಷನ್ ನಲ್ಲಿ ತನ್ನ ಫಾಲೋವರ್ಸ್ ಗಳಿಗೆ ಕೊನೆಗೆ ಏನಾಗುತ್ತದೆ? ಎಂದು ಪ್ರಶ್ನೆ ಹಾಕಿದ್ದಾರೆ.

ಸುಶಾಂತ್ ನಂದಾ ಅವರು ಯಾವತ್ತೂ ಇಂತಹ ಪ್ರಾಣಿಗಳ ಅದ್ಭುತವಾದ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರು ಶೇರ್ ಮಾಡಿದ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ.