ಟೀಮ್ ಇಂಡಿಯಾದಲ್ಲಿ ಎರಡು ಬಣ! ವಿರಾಟ್ ಮತ್ತು ರೋಹಿತ್; ಯಾರ್ಯಾರು ಯಾವ ಬಣದಲ್ಲಿ ನೀವೇ ನೋಡಿ….

ಕ್ರಿಕೆಟ್ ಇದು ಒಂದು ತಂಡವಾಗಿ ಆಡುವ ಆಟವಾಗಿದೆ. ಆದರೆ ಈ t-20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡದಿಂದ ಒಳ್ಳೆಯ ಆಟ ಪ್ರದರ್ಶಿಸಲು ಆಗಲಿಲ್ಲ. ಇದೇ ಕಾರಣದಿಂದ ಭಾರತ ಬಹುಬೇಗ ವರ್ಲ್ಡ್ ಕಪ್ ಸ್ಪರ್ಧೆಯಿಂದಲೇ ಹೊರಬಿದ್ದಿತು. ಸದ್ಯ ವಿರಾಟ್ ಮತ್ತು ರೋಹಿತ್ ಅವರ ನಡುವಿನ ಮತಭೇದದ ಕಾರಣದಿಂದಲೇ ಟೀಮ್ ಇಂಡಿಯಾ ನಿರಾಶೆಯ ಪ್ರದರ್ಶನ ತೋರಿತು ಎಂಬ ಚರ್ಚೆ ನಡೆದಿದೆ. ಇವರಿಬ್ಬರು ಭಾರತ ತಂಡದಲ್ಲಿಯ ಪ್ರತಿಭಾನ್ವಿತ ಆಟಗಾರರಾಗಿದ್ದಾರೆ. ಇವರಿಬ್ಬರು ಭಾರತಕ್ಕೆ ಅನೇಕ ಪಂದ್ಯಗಳನ್ನು ಜಯಿಸಿ ಕೊಟ್ಟಿದ್ದಾರೆ.

ಆದರೆ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ತಮ್ಮ ತಮ್ಮ ಗುಂಪನ್ನು ತಯಾರಿಸಿದ್ದಾರೆ ಎಂಬ ಮಾತುಗಳು ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ವಿರಾಟ್ ಗುಂಪಿನಲ್ಲಿ ಕೆಎಲ್ ರಾಹುಲ್ ಮತ್ತು ಸಿರಾಜ್ ಇದ್ದರೆ ರೋಹಿತ್ ಶರ್ಮ ಅವರ ಗುಂಪಿನಲ್ಲಿ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ಯಜುವೇಂದ್ರ ಚಹಲ್ ಈ ದಿಗ್ಗಜರು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಹೇಂದ್ರ ಸಿಂಗ್ ಧೋನಿಯವರು ನಾಯಕರಿರುವಾಗ ಆಟಗಾರರಿಗಾಗಿ ಅವರು 24 ಗಂಟೆಗಳು ಉಪಲಬ್ದವಿರುತ್ತಿದ್ದರು. ಅದರ ಜೊತೆಗೆ ರೋಹಿತ್ ಶರ್ಮಾ ಅವರು ಸಹ ಯಾವಾಗಲೂ ಸೀನಿಯರ್ ಹಾಗೂ ಜೂನಿಯರ್ ಆಟಗಾರರ ಜೊತೆ ಸಂಪರ್ಕದಲ್ಲಿರುವುದು ಕಂಡುಬರುತ್ತದೆ. ಆದರೆ ವಿರಾಟ್ ಕೊಹ್ಲಿ ಅವರು ಮಾತ್ರ ಆಟಗಾರರ ಜೊತೆಗೆ ಯಾವತ್ತು ಚರ್ಚೆಯಲ್ಲಿ ಇರುವುದಿಲ್ಲವೆಂಬ ಮಾತುಗಳು ಮೊದಲಿನಿಂದಲೂ ಟೀಮ್ ಇಂಡಿಯಾದಿಂದ ಕೇಳಿಬರುತ್ತಿವೆ.

ಭಾರತೀಯ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ತರಬೇತುದಾರ ರವಿಶಾಸ್ತ್ರಿ ಅವರಂತಹ ದಿಗ್ಗಜರು ಇರುವಾಗ ಬಿಸಿಸಿಐ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮೆಂಟರ್ ಜವಾಬ್ದಾರಿಯನ್ನು ನೀಡಿತು. ಮಾಹಿ ಟೀಮ್ ಜೊತೆ ಇರುವಾಗ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಏನಾದರೊಂದು ಮಾರ್ಗ ತೆಗೆಯುವ ವಿಶ್ವಾಸ ಬಿಸಿಸಿಐಗೆ ಇತ್ತು. ಆದರೆ ತಂಡದಲ್ಲಿಯ ಮತಭೇದದಿಂದಾಗಿ ಟೀಮ್ ಇಂಡಿಯಾ ಬಹುಶಃ ಯಶಸ್ಸು ಕಾಣಲಿಲ್ಲ ಅನಿಸುತ್ತೆ. ವಿರಾಟ್, ಶಾಸ್ತ್ರಿ ಮತ್ತು ಧೋನಿ ಇವರ ಕಾಂಬಿನೇಷನ್ ಯಾಕೋ ಕೈಗೂಡಲಿಲ್ಲ.