ವೈರಲ್ ವಿಡಿಯೋ; ತುಂಬು ಮೈದಾನದಲ್ಲಿಯೇ ಶಾಹಿನ್ ಆಫ್ರಿದಿ ಮಾಡಿದ ಈ ಕೃತ್ಯ ಭಾರತೀಯ ಅಭಿಮಾನಿಗಳಿಗೆ ತಂದಿತು ಸಿ#ಟ್ಟು….!

T20 ವರ್ಲ್ಡ್ ಕಪ್ ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ಭಾರತಕ್ಕೆ ಸಹಜವಾಗಿ ಮಣಿಸಿತು. ಆ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಶಹೀನ್ ಆಫ್ರಿದಿ ತಮ್ಮ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತದ ಬ್ಯಾಟ್ಸ್ ಮನ್ ಗಳಿಗೆ ತುಂಬಾ ಇಕ್ಕಟ್ಟಿಗೆ ಸಿಲುಕಿಸಿದರು. ಪಾಕಿಸ್ತಾನ ಮೊದಲ ಬ್ಯಾಟ್ ಮಾಡಿ 151 ರನ್ ಗಳನ್ನು ಬಾರಿಸಿದ್ದರು. ಅದಕ್ಕೆ ಉತ್ತರವಾಗಿ ಭಾರತ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಶಹೀನ್ ಆಫ್ರಿದಿ ಅವರು ಮುಖ್ಯವಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್ ಬಹುಬೇಗ ಪಡೆಯುವಲ್ಲಿ ಯಶಸ್ವಿಯಾದರು. ತದನಂತರ 19 ನೇ ಓವರ್ ನಲ್ಲಿ ವಿರಾಟ್ ಅವರ ವಿಕೆಟ್ ಪಡೆಯುವಲ್ಲಿಯೂ ಆಫ್ರಿದಿ ಯಶಸ್ವಿಯಾದರು. ಹೀಗೆ ಒಟ್ಟು ಭಾರತದ ಬಲಿಷ್ಠ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಸಫಲವಾದರು. ತಮ್ಮ ನಾಲ್ಕು ಓವರ್ ಸ್ಪೆಲ್ ನಲ್ಲಿ 31 ರನ್ ನೀಡಿ ಮಹತ್ವದ ಮೂರು ವಿಕೆಟ್ ಗಳನ್ನು ಪಡೆದರು. ಇದೇ ಶಾಹೀನ್ ಆಫ್ರಿದಿ ಸದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಕೆಟ್ಗಳನ್ನು ಯಾವ ರೀತಿ ನೀವು ಪಡೆದಿರಿ? ಅದರ ಆಕ್ಷನ್ ಮಾಡಿ ತೋರಿಸಿ ಎಂದು ಅಭಿಮಾನಿಗಳು ಕೇಳಿದಾಗ ಶಹೀನ್ ಆಫ್ರಿದಿ ಅವರು ತುಂಬು ಮೈದಾನದಲ್ಲಿ ನಮ್ಮ ಬ್ಯಾಟ್ಸ್ಮನ್ಗಳ ನಕಲು ಮಾಡಿ ತೋರಿಸಿದ್ದಾರೆ.

ನೋಡಿ ಈ ವಿಡಿಯೋ…

ಶಾಹಿನ್ ಆಫ್ರಿದಿ ಅವರು ಮಾಡಿದ ಈ ಚೇಷ್ಟೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರುಚಿಸಿಲ್ಲ. ಹೀಗಾಗಿ ಶಾಹೀನ್ ಮೇಲೆ ಸಿಟ್ಟಾಗಿ ಅವರನ್ನು ತುಂಬಾ ಟೀಕೆಗೆ ಗುರಿ ಮಾಡಿದ್ದಾರೆ.