ಮಕ್ಕಳು ನಮ್ಮ ಕಣ್ಣು ಮರೆಯಲ್ಲಿ ಎಂಥ ಕತ#ರ್ನಾಕ್ ಆಟಗಳನ್ನು ಆಡುತ್ತಿರುತ್ತಾರೆ ಗೊತ್ತಾ? ಬೆಚ್ಚಬೀಳಿಸುವ ಈ ವಿಡಿಯೋ ನೋಡಿ.

ಈಗಿನ ಸಮಯದಲ್ಲಿ ಮಕ್ಕಳ ಕಡೆಗೆ ಪಾಲಕರು ಯಾವತ್ತೂ ಗಮನ ನೀಡುವುದು ತುಂಬಾ ಅನಿವಾರ್ಯವಾಗಿದೆ. ಏಕೆಂದರೆ ಪೋಷಕರ ಗಮನ ಸ್ವಲ್ಪ ಅತ್ತಿತ್ತ ಹರಿದರೆ ಸಾಕು ಮಕ್ಕಳು ಕಣ್ಣುಮುಚ್ಚಿ ತೆರೆಯುವುದರೊಳಗೆ ಏನಾದರೊಂದು ರಾದ್ಧಾಂತ ಮಾಡಿಯೇ ಬಿಟ್ಟಿರುತ್ತಾರೆ. ಕೆಲವೊಮ್ಮೆ ತಮ್ಮ ಜೀವಕ್ಕೆ ಕುತ್ತು ತಂದಿರುತ್ತಾರೆ. ಹೀಗಾಗಿ ಪೋಷಕರು ತಮ್ಮ ಎಂಥದ್ದೇ ವ್ಯಸ್ತವಾದ ಕೆಲಸವಿರಲಿ ಮಕ್ಕಳ ಕಡೆಗೆ ಮಾತ್ರ ಗಮನ ನೀಡುವುದು ಎಷ್ಟೊಂದು ಅವಶ್ಯಕವಾಗಿದೆ ಎಂಬುದು ಈ ವಿಡಿಯೋ ನೋಡಿದ ಮೇಲೆ ಅರ್ಥವಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ಎತ್ತರ ಗಗನಚುಂಬಿತವಾದ ಕಟ್ಟಡ ಅಥವಾ ಅಪಾರ್ಟ್ ಮೆಂಟ್ ಕಂಡು ಬರುತ್ತಿದೆ. ಈ ಬಹು ಮಹಡಿಯ ಬಿಲ್ಡಿಂಗ್ ಮೇಲಿನ ಟೆರೆಸ್ ಮೇಲೆ ಎರಡು ಮಕ್ಕಳು ನೆಲದ ಮೇಲೆ ಆಟ ಆಡುವಂತೆ ತುಂಬಾ ಸಹಜವಾಗಿ ಆಡುತ್ತಿದ್ದಾರೆ. ಈ ವಿಡಿಯೋ ನೋಡುವಾಗ ನಮ್ಮ ಉಸಿರಾಟದ ಮೇಲೆ ಸ್ಪಷ್ಟವಾಗಿ ಪರಿಣಾಮವಾಗುತ್ತಿರುವದು ಅನುಭವಕ್ಕೆ ಬರುತ್ತದೆ. ಕಾರಣ ಇಲ್ಲಿ ಮುಂದಿನ ಕ್ಷಣದಲ್ಲಿ ಏನಾದರೊಂದು ಅವಘಡ ಘಟಿಸಿಯೆ ಬಿಡುತ್ತದೆ ಎನ್ನುವಂತೆ ಭಾಸವಾಗುತ್ತದೆ.

ಈ ಟೆರೆಸ್ ಮೇಲೆ ಮಕ್ಕಳು ಸಹಜವಾಗಿ ಅತ್ತಿಂದಿತ್ತ ಇತ್ತಿಂದತ್ತ ಜಂಪ್ ಮಾಡುತ್ತಿದ್ದಾರೆ. ಅದನ್ನು ನೋಡುವವರು ಉಸಿರು ಬಿಗಿ ಹಿಡಿಯ ಬೇಕಾಗುತ್ತದೆ. ಆ ಮಕ್ಕಳು ಹಾರಾಡುವದನ್ನು ನೋಡಿದರೆ ಏನೋ ದುರ್ಘಟನೆ ನಡೆದು ಹೋಗಿ ಬಿಡುತ್ತದೆ ಎನಿಸುವುದು. ಆದರೆ ದೇವರ ದಯೆ ಅಂಥ ಯಾವುದೇ ಹಾನಿ ನಡೆದಿಲ್ಲ. ವಿಡಿಯೋ ಎಲ್ಲಿಯದು ಎಂಬುದು ಮಾತ್ರ ಗೊತ್ತಾಗಿಲ್ಲ.

ನೋಡಿ ಈ ವಿಡಿಯೋ….

ದಯವಿಟ್ಟು ಮಕ್ಕಳ ಕಡೆಗೆ ಪೋಷಕರು ಗಮನ ನೀಡಿ ಎಂದು ಹೇಳುವದಷ್ಟೆ, ಅಲ್ವಾ ಮಿತ್ರರೇ?