ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಪ್ಪು ಮಾಡಿದ ಮೂನ್ ವಾಕ್ ಡ್ಯಾನ್ಸ್ ನೋಡಿಲ್ಲ ಅಂದ್ರೆ ಮತ್ತೇನು ನೋಡಿದ್ದೀರಾ? ಇಲ್ಲಿ ನೋಡಿ…

ಯುವರತ್ನ ನಮ್ಮನ್ನು ಅಗಲಿ ದೂರ ಹೋದರೂ ಅವರ ವಿಡಿಯೋಗಳು ಮಾತ್ರ ನಮ್ಮ ನೆನಪುಗಳನ್ನು ಇನ್ನಷ್ಟು ಕಾಡುತ್ತಿವೆ. ದಿನಂಪ್ರತಿ ಅವರ ವಿವಿಧ ವಿಡಿಯೋಗಳು ಅಭಿಮಾನಿಗಳ ನಿದ್ದೆಗೆಡಿಸುತ್ತಿವೆ.

ಇಂಥದ್ದೇ ಸೂಪರ್ ಆಗಿ ಡ್ಯಾನ್ಸ್ ಮಾಡಿದ ವಿಡಿಯೋ ಒಂದು ಅಪ್ಪು ಅವರೇ ಭರ್ಜರಿಯಾಗಿ ನಡೆಸಿ ಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿಯದು ಸೆರೆ ಹಿಡಿಯಲಾಗಿದೆ. ಅವರ ಕಾಲುಗಳಲ್ಲಿ ನಿಜಕ್ಕೂ ಎಂಥ ಜಾದೂ ಇತ್ತು ಅನ್ನೋದು ಈ ವಿಡಿಯೋದಿಂದ ಗೊತ್ತಾಗುತ್ತೆ. ಬರೀ ಅವರ ಸ್ಟೆಪ್ಸ್ ಗಳು ಬಿದ್ದರೇನೆ ಅಭಿಮಾನಿಗಳು ಹುಚ್ಚರಾಗಿ ಬಿಡ್ತಿದ್ದರು. ಅವರ ಕುಣಿತಕ್ಕೆ ಸಿಳ್ಳೆಗಳ ಮೇಲೆ ಸಿಳ್ಳೆಗಳ ಸುರಿಮಳೆ ಬೀಳುತ್ತಿತ್ತು. ಅದಕ್ಕೆ ತಾಜಾ ಉದಾಹರಣೆ ಈ ವಿಡಿಯೋದಲ್ಲಿ ನೀವೇ ನೋಡಿ….

https://youtube.com/shorts/YadUSuFBg5w?feature=share

ಅಪ್ಪು ನೀವು ನಮ್ಮನ್ನು ನಿಜಕ್ಕೂ ಬಿಟ್ಟು ಹೋಗಬಾರದಿತ್ತು. ನಿಮ್ಮ ಆ ಮನಮುಟ್ಟುವ ಮಾತುಗಳು, ನಿಮ್ಮ ಆ ಡ್ಯಾನ್ಸ್ ಸ್ಟೈಲ್ ಗಳು, ನಿಮ್ಮ ಆ ಮುಗ್ಧನಗು ನಮ್ಮನ್ನು ಪದೇ ಪದೇ ಕಾಡುತ್ತಿವೆ. ಅಪ್ಪು ಮತ್ತೆ ಬೇಗನೇ ಈ ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ…