ನಡು ಕಾಡಿನಲ್ಲಿ ಟ್ಯಾಕ್ಸಿ ನಿಲ್ಲಿಸಿ ‘Nature call’ ಗೆ ಹೋದ 15 ರ ಹುಡುಗಿ, ತುಂಬಾ ಹೊತ್ತಾದರೂ ಹುಡುಗಿ ಏಕೆ ಬರುತ್ತಿಲ್ಲವೆಂದು ನೋಡಲು ಹೋದ ಡ್ರೈವರ್ ಫುಲ್ ಶಾಕ್!

ಘಟನೆ ಚೀನಾದ ಜಿಯಾಜಿಂಗ್ ನಲ್ಲಿ ವರದಿಯಾಗಿದೆ. ಅಲ್ಲಿ 15 ವರ್ಷದ ಅನಾಥ ಹುಡುಗಿಯೊಬ್ಬಳು ಮನೆಗೆ ಟ್ಯಾಕ್ಸಿ ಕರೆಯಿಸಿಕೊಂಡು ಆಸ್ಪತ್ರೆಗೆ ಹೋಗಬೇಕಾಗಿದೆ ಬೇಗ ನಡೆ ಎಂದು ಜಿಯಾಜಿಂಗ್ ಕಡೆಗೆ ಪಯಣ ಬೆಳೆಸಿದ್ದಾಳೆ. ಆಸ್ಪತ್ರೆಗೆ ಹೋಗುವಾಗ ದಾರಿ ಮಧ್ಯೆದಲ್ಲಿ ಕಾಡಿನಂಚಿನಲ್ಲಿ ಒಮ್ಮೆಲೇ ಡ್ರೈವರ್ ಗೆ ತಾನು ಮೂತ್ರ ವಿಸರ್ಜನೆಗೆ ಹೋಗಬೇಕಾಗಿದೆ ಸ್ವಲ್ಪ ಟ್ಯಾಕ್ಸಿಯನ್ನು ನಿಲ್ಲಿಸು ಎಂದು ಹೇಳಿ ಬದಿಯ ಪೊದೆಯಲ್ಲಿ ಹೋದವಳು ಎಷ್ಟೊತ್ತಾದರು ಮರಳಿ ಬಾರದಿದ್ದಕ್ಕಾಗಿ ಡ್ರೈವರ್ ಆತಂಕಗೊಂಡು ಅವಳು ಹೋದ ದಾರಿಯಲ್ಲಿಯೇ ಹುಡುಕುತ್ತ ಮುಂದೆ ಹೋಗಿದ್ದಾನೆ.

ಸ್ವಲ್ಪ ಕಾಡಿನ ಒಳಗೆ ಹೋದ ನಂತರ ಆತ ಅಲ್ಲಿ ನೋಡಿದ ಚಿತ್ರ ಆತನನ್ನು ಬೆಚ್ಚಿ ಬೀಳಿಸುವಂತಿತ್ತು.

ಆ ಹುಡುಗಿಯು ಎಷ್ಟೊತ್ತಾದರು ಬಾರದೇ ಇದ್ದುದರಿಂದ ಅವಳು ಹೋದ ದಾರಿಯಲ್ಲಿಯೇ ಆಕೆಯನ್ನು ಅನುಸರಿಸುತ್ತ ಮುಂದೆ ಹೋದಾಗ ಮೊದಲು ಆತನಿಗೆ ಹಸುಗೂಸಿನ ಅಳುವ ಸಪ್ಪಳ ಕೇಳಿಸಿತು. ನಂತರ ಇನ್ನಷ್ಟು ಸಮೀಪ ಹೋಗಿ ನೋಡಿದಾಗ ಆತನ ಮೈಮೇಲಿನ ರೋಮಗಳು ತನ್ನಂತಾನೆ ಎದ್ದು ನಿಂತಿವೆ. ಡ್ರೈವರ್ ನೋಡಿದ ದೃಶ್ಯ ಹೀಗಿತ್ತು. ಹುಡುಗಿಯ ಕೈ ಮತ್ತು ಕಾಲುಗಳೆರಡು ರಕ್ತದಿಂದ ವ್ಯಾಪಿಸಿದ್ದವು. ಮತ್ತು ಮಗ್ಗುಲಲ್ಲಿ ಪುಟ್ಟ ಕಂದ ಅಳುತ್ತಿತ್ತು. ಇದನ್ನು ನೋಡಿ ಡ್ರೈವರ್ ಒಮ್ಮೆಲೇ ಹೆದರಿ ಸಹಾಯಕ್ಕಾಗಿ ಪೊಲೀಸರ ಮೊರೆ ಹೊಕ್ಕಿದ್ದಾನೆ.

ಡ್ರೈವರ ಪ್ರಕಾರ, ಆತ ಟ್ಯಾಕ್ಸಿ ತೆಗೆದುಕೊಂಡು ಬಾಡಿಗೆಗಾಗಿ ಬಂದಾಗ ಹುಡುಗಿಯ ಕಡೆಗೆ ಸರಿಯಾಗಿ ಗಮನವೇ ಕೊಟ್ಟಿರಲಿಲ್ಲ. ಆಸ್ಪತ್ರೆಗೆ ಹೋಗಬೇಕಾಗಿದೆ ಎಂದಾಗ ಆಯ್ತು ಅಂತ ಹೇಳಿ ತನ್ನ ಕೆಲಸದ ಕಡೆಗೆ ಗಮನಕೊಟ್ಟು ಹೋಗುವಾಗ ದಾರಿ ಮಧ್ಯೆದಲ್ಲಿ ನಡೆದ ಈ ಸಂಪೂರ್ಣ ಘಟನೆಯ ವರದಿ ಪೊಲೀಸರಿಗೆ ಒಪ್ಪಿಸಿದ್ದಾನೆ.

ಬದಲಾದ ಜಗತ್ತಿನ ಬದಲಾದ ವಿಚಾರಧಾರೆಗಳಿಂದ ಸೋಶಿಯಲ್ ಮಿಡಿಯಾದ ಅತ್ಯಧಿಕ ಪ್ರಭಾವ ಆಧುನಿಕ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವದರ ಕಾರಣ ಇಂಥ ಘಟನೆಗಳು ಆಗಿಂದಾಗ ವರದಿಯಾಗುತ್ತಲೇ ಇರುತ್ತವೆ. ಕಿಶೋರ ವಯಸ್ಸಿನಲ್ಲಿ ಮಕ್ಕಳ ಮೇಲಾಗುವ ಸಂಸ್ಕಾರ ತುಂಬಾ ಮಹತ್ವದ್ದು. ಆದ್ದರಿಂದ ಪೋಷಕರು ಆದಷ್ಟು ಮಕ್ಕಳ ಮೇಲೆ ನೇರ ಅಥವಾ ಅವರಿಗೆ ಗೊತ್ತಿಲ್ಲದೆ ಒಂದು ದೃಷ್ಟಿ ಇಡುವದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.