ಮಹಿಳಾ ಸಂಸದೆಯ ಬಾಯ್ ಫ್ರೆಂಡ್ ಜೊತೆಗಿನ ಹೊಸ ಸಂಸಾರ! ಸೋಶಿಯಲ್ ಮೀಡಿಯಾದಲ್ಲಿ ಎದ್ದಿತು ಬಿಸಿಬಿಸಿ ಚರ್ಚೆ!

ಭಾರತದಲ್ಲಿ ರಾಜಕೀಯ ನಾಯಕರು, ಚಿತ್ರನಟರು ಮತ್ತು ಕ್ರಿಕೆಟ್ ಆಟಗಾರರು ಏನೇ ಮಾಡಲಿ ನೋಡುನೋಡುವಷ್ಟರಲ್ಲಿ ದೊಡ್ಡ ಸುದ್ದಿಗಳಾಗಿ ಬಿಡುತ್ತವೆ. ಈಗ ಪಶ್ಚಿಮ್ ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾ ಅನೇಕ ದಿನಗಳಿಂದ ತುಂಬಾ ಚರ್ಚೆಯಲ್ಲಿ ಇದ್ದಾರೆ. ನಿಖಿಲ್ ಜೈನ್ ಹೆಸರಿನ ವ್ಯಕ್ತಿಯೊಂದಿಗೆ ಮೊದಲು ಮದುವೆ ನಂತರ ತಾಯಿಯಾದ ಸುದ್ದಿಗಳು ಬಂದಿದ್ದವು. ತದನಂತರ ನಿಖಿಲ್ ಜೊತೆಗಿನ ಮದುವೆ ಮುರಿದು ನಟ ಯಶ್ ದಾಸ್ ಗುಪ್ತಾ ಅವರ ಜೊತೆಗೆ ಅಫೇರ್, ಹೀಗೆ ಇನ್ನಿತರ ಸುದ್ದಿಗಳಿಂದ ನುಸ್ರತ್ ತುಂಬಾ ಚರ್ಚೆಯಲ್ಲಿ ಇದ್ದರು.

ಆಗಸ್ಟ್ ನಲ್ಲಿ ನುಸ್ರತ್ ಒಂದು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ತಂದೆಯಾಗಿ ಯಶ್ ದಾಸ್ ಗುಪ್ತಾ ಅವರ ಹೆಸರನ್ನು ನೀಡಿದಳು. ಈ ಸುದ್ದಿಯ ನಂತರ ನುಸ್ರತ್ ಜಹಾ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ತದನಂತರ ಜನರು ಯಶ್ ಅವರ ಜೊತೆಗಿನ ಮದುವೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈಗ ಅನೇಕ ದಿನಗಳ ನಂತರ ತಮ್ಮ ವೈವಾಹಿಕ ಜೀವನದ ಬಗ್ಗೆ ನುಸ್ರತ್ ಮೌನ ಮುರಿದಿದ್ದಾರೆ.

ನುಸ್ರತ್ ಜಹಾ ಇದೇ ವರ್ಷ ನಿಖಿಲ್ ಜೊತೆಗೆ ತಾವು ಮಾಡಿಕೊಂಡ ವಿವಾಹವು ಕಾನೂನುಬದ್ಧವಲ್ಲವೆಂದು ಹೇಳಿ ಎಲ್ಲರಿಗೂ ಬೆರಗುಗೊಳಿಸಿದರು. ನುಸ್ರತ್ 2019ರಲ್ಲಿ ನಿಖಿಲ್ ಅವರ ಜೊತೆಗೆ ಮದುವೆಯಾಗಿ ಆಮೇಲೆ ಯಶ್ ಜೊತೆಗಿನ ರೋಮ್ಯಾನ್ಸ್ ನಿಂದಾಗಿ ತುಂಬಾ ಚರ್ಚೆಯಲ್ಲಿ ಇದ್ದರು.

ಮದುವೆಯ ವಿವಾದದ ಬಗ್ಗೆ ಮೌನ ಮುರಿಯುತ್ತಾ ನುಸ್ರತ್ ಜಹಾನ್ ಹೀಗೆ ಹೇಳುತ್ತಾರೆ, ನನಗೆ ಜೀವನಾಂಶ ನೀಡಿಲ್ಲ, ಯಾವುದೇ ರೀತಿಯ ಹೋಟೆಲ್ ಬಿಲ್ ಸಹ ಕೊಟ್ಟಿಲ್ಲ. ನನಗೆ ಅವರ ಮೇಲೆ ಯಾವುದೇ ರೀತಿ ಆರೋಪ ಮಾಡಲು ಇಷ್ಟವಿಲ್ಲ. ಆದರೆ ನಾನು ಈ ವಿಷಯದಲ್ಲಿ ಪ್ರಾಮಾಣಿಕಳಾಗಿದ್ದೇನೆ. ಪ್ರಪಂಚದ ಮುಂದೆ ನನ್ನನ್ನು ತಪ್ಪಾಗಿ ಪ್ರೆಸೆಂಟ್ ಮಾಡಲಾಗಿದೆ. ಈಗ ಮಾತ್ರ ನಾನು ಎಲ್ಲವನ್ನೂ ಗುಡಿಸಿ ಸ್ವಚ್ಚವಾಗಿ ಮಾಡಿ ಬಿಟ್ಟಿದ್ದೇನೆ.

ನುಸ್ರತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಹೆಸರನ್ನು ತೆಗೆದುಕೊಳ್ಳದೆ, ಇನ್ನೊಬ್ಬರಿಗೆ ದೂಷಿಸುವುದು ಮತ್ತು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ತುಂಬಾ ಸರಳವಾಗಿದೆ. ನಾನು ಮಾತ್ರ ನನ್ನ ಈ ಸಂಕಟದ ಸಮಯದಲ್ಲಿ ಯಾರಿಗೂ ನಿರಾಶೆ ಮಾಡಿಲ್ಲ ಎಂದು ನುಸ್ರತ್ ದಾವೆ ಮಾಡಿ ಹೇಳುತ್ತಾರೆ.