“ಅಮ್ಮ ದಯವಿಟ್ಟು ನನಗೆ ಕ್ಷಮಿಸು, ಆದರೆ….” ಜಾಹ್ನವಿ ತಾಯಿ ಶ್ರೀದೇವಿಯ ಈ ಇಚ್ಛೆಯನ್ನು ನಿರಾಕರಿಸಿದಳು.
ಬಾಲಿವುಡ್ ನಟಿ ಶ್ರೀದೇವಿಯವರ ಮಗಳಾದ ಜಾಹ್ನವಿ ಕಪೂರ್ ಕಡಿಮೆ ಸಮಯದಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿದ್ದು ಲಕ್ಷಾವಧಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸತತವಾಗಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.

ಜಾಹ್ನವಿ ತಾಯಿ ಶ್ರೀದೇವಿ ಅವರು ಸಹ ಬಾಲಿವುಡ್ನಲ್ಲಿ ದೊಡ್ಡ ನಟಿಯಾಗಿದ್ದರು. ಶ್ರೀದೇವಿ ಅವರು ತಮ್ಮ ಎರಡು ಮಕ್ಕಳನ್ನು ಫಿಲಂ ಇಂಡಸ್ಟ್ರಿಯಲ್ಲಿ ತೆಗೆದುಕೊಳ್ಳುವ ಇಚ್ಛೆ ಸ್ವಲ್ಪವೂ ಇರಲಿಲ್ಲ.

ಸಂದರ್ಶನವೊಂದರಲ್ಲಿ ಜಾಹ್ನವಿ ಕಪೂರ್ ಒಂದು ವಿಷಯವನ್ನು ಬಿಚ್ಚಿಟ್ಟರು. ಜಾಹ್ನವಿ ಅಭಿನಯ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ಅಭಿರುಚಿ ತೋರಬೇಕೆಂದು ಶ್ರೀದೇವಿ ಆಶಿಸುತ್ತಿದ್ದರು ಎಂದು ಜಾಹ್ನವಿ ಹೇಳಿದರು.

ಪ್ರತಿಯೊಂದು ಪೋಷಕರು ತಮ್ಮ ಮಕ್ಕಳ ಸಲುವಾಗಿ ವಿವಿಧ ರೀತಿಯ ಕನಸುಗಳನ್ನು ಕಾಣುತ್ತಾರೆ. ಮಕ್ಕಳು ಕರಿಯರ್ ಬಗ್ಗೆ ವಿಚಾರ ಮಾಡುವಾಗ ತಮ್ಮ ಮಕ್ಕಳು ಏನು ಮಾಡಬೇಕು ಎಂದು ಪೋಷಕರು ಮೊದಲೇ ಯೋಜನೆ ಹಾಕಿರುತ್ತಾರೆ.

ಒಂದು ತಾಯಿಯಾಗಿ ಶ್ರೀದೇವಿಯು ಸಹ ತಮ್ಮ ಮಕ್ಕಳು ಫಿಲಂ ಇಂಡಸ್ಟ್ರಿಯಲ್ಲಿ ಬರದೆ ಡಾಕ್ಟರ್ ಆಗಿ ಮುಂದುವರೆಯಬೇಕು ಎಂದು ಕನಸು ಕಂಡಿದ್ದರಂತೆ.

ಆದರೆ ಜಾಹ್ನವಿ ಮಾತ್ರ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟವನ್ನು ಜಮಾಯಿಸಿದರು. ಶ್ರೀದೇವಿಯವರಿಗೆ ಜಾಹ್ನವಿ ಅವರ ಈ ನಿರ್ಣಯಕ್ಕೆ ತಲೆಬಾಗಿಸಲೇಬೇಕಾಯಿತು ಎಂದು ಜಾಹ್ನವಿ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದರು.

ಜಾಹ್ನವಿ ಅವರು ನೀಡಿದ ಮಾಹಿತಿಯ ಪ್ರಕಾರ, ಜಾಹ್ನವಿ ಚಿಕ್ಕವಳಿದ್ದಾಗಲೇ ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂದು ಶ್ರೀದೇವಿ ಯೋಚನೆ ಮಾಡಿದ್ದರಂತೆ. ಆದರೆ ನಾನು ಮಾತ್ರ ಅದೇ ಸಮಯದಲ್ಲಿ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ಜಾಹ್ನವಿ ಹೇಳುತ್ತಾರೆ.

ನಾನು ಆ ಸಮಯದಲ್ಲಿ ನನ್ನ ತಾಯಿಗೆ, ಅಮ್ಮ ದಯವಿಟ್ಟು ನನಗೆ ಕ್ಷಮಿಸು, ಕಾರಣ ಡಾಕ್ಟರ್ ಆಗುವಷ್ಟು ಬುದ್ಧಿ, ತಿಳುವಳಿಕೆ ನನ್ನ ಹತ್ತಿರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಜಾಹ್ನವಿ ಹೇಳುತ್ತಾರೆ.

ನನ್ನ ನಿರ್ಣಯವನ್ನು ನಾನು ಹೇಳಿದ ನಂತರವೂ ನನ್ನ ತಾಯಿ ಫಿಲಂ ಇಂಡಸ್ಟ್ರಿಯಲ್ಲಿ ನನಗೆ ನನ್ನ ಕರಿಯರ್ ಮಾಡಲು ಸ್ಪಷ್ಟವಾಗಿ ವಿರೋಧಿಸಿದ್ದರು. ಕೊನೆಗೆ ತಂದೆ ಬೋನಿ ಕಪೂರ್ ಅವರು ನನ್ನ ತಾಯಿಗೆ ತಿಳಿಹೇಳಿದ ನಂತರ ಕೊನೆಗೆ ಅಮ್ಮ ಒಪ್ಪಿದರು ಎಂದು ಜಾಹ್ನವಿ ಕಪೂರ್ ಹೇಳುತ್ತಾರೆ.

ನಾನು ನನ್ನ ತಾಯಿಯ ಮಾತನ್ನು ಕೇಳದೇ ಇದ್ದರೂ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಕಷ್ಟು ಪರಿಶ್ರಮವನ್ನು ತೆಗೆದುಕೊಳ್ಳಬೇಕಾಯಿತು. ಇಂದು ನಾನು ಬಾಲಿವುಡ್ ನಲ್ಲಿ ಸ್ಥಾಪಿಸಿದ ನನ್ನ ಸ್ಥಾನವನ್ನು ನೋಡಿದಾಗ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಜಾಹ್ನವಿ ಹೇಳುತ್ತಾರೆ.