ಪಾಕಿಸ್ತಾನ ವಿರುದ್ಧ ಡೇವಿಡ್ ವಾರ್ನರ್ ಔಟ್ ಇರದಿದ್ದರೂ ಸಹ DRS ತಗೆದುಕೊಳ್ಳಲಿಲ್ಲ, ಕಾರಣ ಬಹಿರಂಗ ಪಡಿಸಿದ ಸಚಿನ್ ತೆಂಡೂಲ್ಕರ್!

T20 ವಿಶ್ವಕಪ್ ನಲ್ಲಿ ಭಾರತ ತಂಡ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಈ ಬಾರಿ ಅಯಶಸ್ಸು ಕಂಡಿತು. ಆದ್ದರಿಂದ ಈ ಬಾರಿ ಭಾರತ ವಿಶ್ವಕಪ್ ನಿಂದ ಅರ್ಧದಲ್ಲೇ ಹೊರಗೆ ಹೋಗುವ ಪರಸ್ಥಿತಿ ಬಂದಿತು. ಆದರೆ ಮೊನ್ನೆಯಷ್ಟೇ ನಡೆದಿರುವ ಸೆಮಿಫೈನಲ್ ಮ್ಯಾಚ್-2 ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಿತು. ಪಾಕಿಸ್ತಾನ ತಂಡ ಮೊದಲನೆಯದಾಗಿ ಬ್ಯಾಟಿಂಗ್ ಮಾಡಿ 177 ರನ್ ಗಳ ಲಕ್ಷ್ಯ ಸಾಧಿಸುವ ಅವಕಾಶ ಆಸ್ಟ್ರೇಲಿಯಾ ತಂಡಕ್ಕೆ ನೀಡಿತು.

ಮೊದಲನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನ ವಿಕೆಟ್ ಕಳೆದುಕೊಂಡರು ಸಹ ರನ್ ರೇಟ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ಆಸ್ಟ್ರೇಲಿಯಾ ತಂಡ ಮುಂದೆ ನಡೆಯುತ್ತಿತ್ತು. 10 ನೆ ಓವರ್ ನ ವರೆಗೆ ಪಾಕಿಸ್ತಾನ ತಗೆದ ರನ್ ಗಳಿಗಿಂತ 18 ರನ್ ಹೆಚ್ಚು ಆಸ್ಟ್ರೇಲಿಯಾ ತಂಡ ತಗೆದಿತ್ತು. ಆದರೆ ಆಸ್ಟ್ರೇಲಿಯಾ ತಂಡ ಅವರಿಗಿಂತ ಎರಡು ವಿಕೆಟ್ ಹೆಚ್ಚಿಗೆ ಕಳೆದುಕೊಂಡಿತು. ಅದರಲ್ಲಿಯ ಒಂದು ವಿಕೆಟ್ ಪಾಕಿಸ್ತಾನ ಟೀಮ್ ಚಿ#ಟಿಂಗ್ ಮಾಡಿ ಪಡೆದುಕೊಂಡರೋ ಅಥವಾ ವಾರ್ನರ್ ಅವರ ತಪ್ಪಿನಿಂದಾಗಿ ವಿಕೆಟ್ ಪಡೆದುಕೊಂಡರೋ ಎಂಬುದು ಚರ್ಚೆಯ ವಿಷಯವಾಗಿದೆ. 11 ನೆಯ ಓವರ್ ನಲ್ಲಿ ಶಾಬಾದ ಖಾನ್ ಅವರು ಮೊದಲನೆಯ ಎಸೆತಕ್ಕೆ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದುಕೊಂಡರು. ಆ ವಿಕೆಟ್ ಪಡೆದುಕೊಂಡ ರೀತಿಯನ್ನು ಕಂಡು ಎಲ್ಲರೂ ಆಶ್ಚ#ರ್ಯ ಗೊಂಡಿದ್ದಾರೆ.

ಆಕ್ಷನ್ ರಿಪ್ಲೇ ನಲ್ಲಿ ವಾರ್ನರ್ ಅವರ ಬ್ಯಾಟಿಗೆ ಚೆಂಡು ತಾಗಲೇ ಇಲ್ಲ ಇದು ಸ್ಪಷ್ಟವಾಗಿ ಕಾಣಿಸುತಿತ್ತು ಆದರೆ ವಾರ್ನರ್ ಅವರು ತಮ್ಮ ಬ್ಯಾಟಿಗೆ ತಾಗಿದೆಯೋ ಅಥವಾ ಇಲ್ಲವೋ ಎಂಬ ವಿಚಾರ ಮಾಡುವಲ್ಲಿ ವಿಫಲರಾದರು ಮತ್ತು DRS ಸಹ ತಗೆದುಕೊಳ್ಳದೆ ನೇರವಾಗಿ ಪವೇಲಿಯನ್ ಗೆ ಹೋದರು. ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಅವರು ಒಂದು ವಿಡಿಯೋ ಶೇರ್ ಮಾಡುತ್ತಾ ವಾರ್ನರ್ ಔಟ್ ಆದ ಕುರಿತು ಚರ್ಚೆ ಮಾಡಿದ್ದಾರೆ. ರಿಪ್ಲೇ ನೋಡಿದಾಗ ಪ್ರತಿಯೊಬ್ಬರು ಸಹ ಆ#ಶ್ಚರ್ಯ ಪಟ್ಟಿದ್ದಾರೆ ಹಾಗೆಯೇ ಸಚಿನ ಸಹ ಈ ಕುರಿತು ಹೇಳಿದ್ದೇನೆಂದರೆ, ” ಇವರು ಔಟ್ ಆಗಿದ ರೀತಿ ಎಲ್ಲರಿಗೂ ಆಶ್ಚ#ರ್ಯ ಪಡಿಸುವ ಸಂಗತಿಯಾಗಿದ್ದು, ಪಾಕಿಸ್ತಾನ ತಂಡದ ಆಟಗಾರರು ಅಪೀಲ್ ಮಾಡಿದರು ಮತ್ತು ಅಂಪಾಯರ್ ಕೂಡಾ ಏನು ಯೋಚಿಸದೆ ಔಟ್ ಕೊಟ್ಟರು”.

” ಎಷ್ಟೋ ಸಲ ಬ್ಯಾಟ್ಸ್ಮನ್ ನ ಬ್ಯಾಟಿಗೆ ಚೆಂಡು ತಾಗಿರುತ್ತದೆ ಆದರೆ ಅದರ ಅರಿವು ಬ್ಯಾಟ್ಸ್ಮನ್ ಗೆ ಬರುವದಿಲ್ಲ. ಎಷ್ಟೋ ಸಲ ಪ್ರತಿಸ್ಪರ್ಧಿಗಳ ಅಪೀಲ್ ಅಂಪಾಯರ್ ಗಳ ಮೇಲೆ ಒತ್ತಡ ಹೆಚ್ಚಾಗಿ ಕೆಲವೊಮ್ಮೆ ಅಂಪಾಯರ್ ಸಹ ಔಟ್ ಕೊಡುತ್ತಾರೆ. ಹೀಗಾಗಿ ಬ್ಯಾಟ್ಸ್ಮನ್ ಔಟ್ ಇರದಿದ್ದರೂ ಸಹ ಮೈದಾನ ಬಿಟ್ಟು ಹೊರಗೆ ಹೋಗಬೇಕಾಗುವ ಪರಸ್ಥಿತಿ ಬಂದೊದಗುತ್ತದೆ. ನನ್ನ ಊಹೆಯ ಪ್ರಕಾರ ವಾರ್ನರ್ ಜೊತೆಗೂ ಸಹ ಇದೆ ತರಹದ ಪರಸ್ಥಿತಿ ನಿರ್ಮಾಣವಾಗಿರಬೇಕು ಆದ್ದರಿಂದಲೇ ಅವರು DRS ತಗೆದುಕೊಳ್ಳದೆ ನೇರವಾಗಿ ಪವೇಲಿಯನ್ ಗೆ ಹೋದರು. ರಿಪ್ಲೇ ನೋಡಿದಾಗ ನಾನು ಸಹ ಆ#ಶ್ಚರ್ಯ ಪಟ್ಟಿದ್ದೇನೆ” ಎಂದು ಸಚಿನ್ ತೆಂಡೂಲ್ಕರ್ ವಾರ್ನರ್ ಅವರು DRS ತಗೆದುಕೊಳ್ಳದ ಕಾರಣ ತಿಳಿಸಿದ್ದಾರೆ.

ವಾರ್ನರ್ ಅವರು ಔಟ್ ಆದ ನಂತರ ಮ್ಯಾಥಿವ್ ವೆಡನ್ ನಾಟ್ ಔಟ್ 41 ರನ್ ಮತ್ತು ಮಾರ್ಕ್ಸ್ ಸ್ಟೆಯನಿಸನ್ ನಾಟ್ ಔಟ್ 40 ರನ್ನಗಳ ಮೇರೆಗೆ ಆಸ್ಟ್ರೇಲಿಯಾ 5 ವಿಕೆಟ್ಗಳ ಕಳೆದುಕೊಂಡು 177 ರನ್ನಗಳ ಟಾರ್ಗೆಟ್ ಪೂರ್ಣ ಮಾಡಿ ಪಾಕಿಸ್ತಾನಕ್ಕೆ ಸೋಲಿಸಿ ಫೈನಲ್ ಗೆ ತಲುಪಿತು.