ಸುದೀಪ್ ಜೊತೆಗೆ ಡ್ಯಾನ್ಸ್ ಮಾಡುವಾಗಿನ ಅಪ್ಪು ಅವರ ನಗು ಮುಖ ನೋಡಲು ಕಣ್ಣುಗಳೇ ಸಾಲದು!! ವಿಡಿಯೋ ನೋಡಿ…..

ಕನ್ನಡ ಚಿತ್ರರಂಗದಲ್ಲಿ ಎಂದೆಂದಿಗೂ ಅಳಿಸಲಾಗದ ಬರೆ ಎಂದರೆ ಅಪ್ಪುವಿನ ಸಾ#ವು. ಪುನೀತ್ ಅವರ ಸಾ#ವಿನಿಂದ ಇಡೀ ಚಿತ್ರರಂಗವೇ ತಲ್ಲಣಗೊಂಡಿದೆ. ಅವರ ಆಕಸ್ಮಿಕವಾಗಿ ಬಂದ ಸಾ#ವು ಅಭಿಮಾನಿಗಳ ಮನದಲ್ಲಿ ದುಃಖದ ಸಾಗರವೇ ಹೊರಡಿಸಿದೆ. ಇಂದು ಅಪ್ಪು ನಮನೆಲ್ಲ ಅಗಲಿ ಎಷ್ಟೋ ದಿವಸಗಳು ಕಳೆದರೂ ಸಹ ಅಭಿಮಾನಿಗಳ ರೋಧನೆ ಕಡಿಮೆಯಾಗುವ ಮಾತೇ ಇಲ್ಲ. ಅಪ್ಪು ಇನ್ನೂ ಸಹ ನಮ್ಮಲ್ಲಿಯೇ ಇದ್ದಾರೆ ಎನ್ನೋ ಭಾಸವಾಗುತ್ತಿದೆ. ಕೋಟ್ಯಂತರ ಅಭಿಮಾನಿಗಳ ಪ್ರೀತಿ ಹೊಂದಿದ ಅಪ್ಪು ನಮ್ಮನ್ನೆಲ್ಲ ಅಗಲಿ ಹೋಗಿದ್ದಾರೆ.

ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹೇಳಲು ಸಾಲದು. ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಕಂಡು ದೇಶದಾದ್ಯಂತ ಜನರು ಹೋಗಳುವದರ ಜೊತೆಗೆ ಪರದೇಶದಲ್ಲಿಯ ಜನರು ಇವರನ್ನು ಪೂಜಿಸುತ್ತಿದ್ದಾರೆ. ಇವರ ಬಗ್ಗೆ ಎಷ್ಟು ಹೇಳಿದರು ಸಾಲದು. ಸದ್ಯಕ್ಕೆ ಅಪ್ಪು ಅವರ ಒಂದು ಡ್ಯಾನ್ಸ್ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಕರುನಾಡು ಚಕ್ರವರ್ತಿ ಸುದೀಪ್ ಅವರೊಂದಿಗೆ ಅಪ್ಪು ಅವರು ಸ್ಟೆಪ್ ಹಾಕಿದ್ದಾರೆ.

ಪ್ರಸ್ತುತ ವಿಡಿಯೋ ರಾಜಕುಮಾರ್ ಚಿತ್ರ 100 ದಿವಸ ಪೂರ್ಣ ಮಾಡಿದ ಸಂಭ್ರಮದಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದೆ. ಇದರಲ್ಲಿ ಸುದೀಪ ಅವರೊಂದಿಗೆ ಪುನೀತ್ ಸಹ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರೊಂದಿಗೆ ಮಾಡಿರುವ ಡ್ಯಾನ್ಸ್ ತುಂಬಾ ಅದ್ಭುತವಾಗಿದೆ. ನೀವು ಸಹ ಒಂದು ಸಲ ನೋಡಲೇ ಬೇಕು. ಪುನೀತ್ ನಟನೆಯ ರಾಜಕುಮಾರ್ ಚಿತ್ರ 100 ದಿವಸ ಯಶಸ್ವಿಯಾಗಿ ನಡೆದಕ್ಕಾಗಿ ಚಿತ್ರದ ಪ್ರಮೋಟ್ ಮಾಡುವ ಸಲುವಾಗಿ ಸುದೀಪ್ ಅವರು ಸಹ ಆಗಮಿಸಿದ್ದರು. ಆಗ ಅಭಿಮಾನಿಗಳ ಕೋರೀಕೆಯ ಮೇರೆಗೆ ಸುದೀಪ ಮತ್ತು ಪುನೀತ್ ಇಬ್ಬರು ಕೂಡಿ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

ವಿಡಿಯೋ ನೋಡಿ

ಸುದೀಪ್ ಅವರೊಂದಿಗೆ ಸ್ಟೆಪ್ ಹಾಕುವಾಗ ಅಪ್ಪು ಅವರ ಮುಖದ ಮೇಲಿನ ನಗುವನ್ನು ಕಂಡರೆ ತುಂಬಾ ದುಃಖ ವಾಗುತ್ತೆ. ಇಷ್ಟೊಂದು ನಗುಮುಖದ ವ್ಯಕ್ತಿ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಸುದೀಪ ಅವರು ಅಪ್ಪು ಅವರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಡುವದು ಸಹ ಈ ವಿಡಿಯೋದಲ್ಲಿ ಕಾಣಬಹುದು.