Viral Video: ಇಲ್ಲಿ ಕಾಣುತ್ತಿರುವುದು ಟ್ರಕ್ಕಾ? ಇಲ್ಲ ಬೈಕಾ? ಈ ವಿಚಿತ್ರ ವಾಹನ ನೋಡಿ ತಲೆ ಕೆಟ್ಟು ಹೋಗುತ್ತಿದೆ; ನೀವಾದರೂ ಉತ್ತರ ಹೇಳಿ….

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಶೇಷ ವಿಡಿಯೋಗಳು ಕಂಡು ಬರುತ್ತವೆ. ಅವುಗಳಲ್ಲಿ ಕೆಲವಂತೂ ವಿವಿಧ, ವಿಚಿತ್ರ, ಹಾಸ್ಯ, ಮನಮಿಡಿಯುವ ಕಾರಣಕ್ಕೆ ತುಂಬಾ ವೈರಲ್ ಆಗುತ್ತಿರುತ್ತವೆ. ಇನ್ನು ಕೆಲವು ವೀಡಿಯೋಗಳಂತೂ ಜನರಿಗೆ ತುಂಬಾ ಕನ್ಫ್ಯೂಸ್ ಮಾಡಿ ಬಿಡುತ್ತವೆ. ಇಂಥದ್ದೇ ಒಂದು ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕಂಡು ಬರುವ ವಾಹನ ನಿಜಕ್ಕೂ ಬೈಕಾ? ಅಥವಾ ಟ್ರಕ್ಕಾ? ಎಂಬ ಪ್ರಶ್ನೆ ನೆಟ್ಟಿಗರಿಗೆ ಕಾಡುತ್ತಿದೆ. ಈ ಉತ್ತರವನ್ನು ಶೋಧಿಸಲು ಜನರು ಒಂದೇ ಸಮನೆ ವಿಡಿಯೋ ಮೇಲಿಂದ ಮೇಲೆ ನೋಡುತ್ತಿದ್ದಾರೆ ಆದರೆ ಉತ್ತರ ಮಾತ್ರ ಯಾರಿಗೂ ಸಿಗುತ್ತಿಲ್ಲ.

ಇಲ್ಲಿಯವರೆಗೆ ನಾವು ನಮ್ಮ ಪರಿಸರದಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಹೀಗೆ ಅನೇಕ ಪ್ರಕಾರದ ವಾಹನಗಳನ್ನು ನೋಡಿದ್ದೇವೆ. ಆದರೆ ಈ ವಾಹನವನ್ನು ನೋಡಲಾಗಿ ಇದು ಯಾವ ಪ್ರಕಾರದ ವಾಹನವಿದೆ ಎಂಬ ಪ್ರಶ್ನೆ ಮಾತ್ರ ನೋಡುಗರಿಗೆ ಕಾಡುವದು ಸಹಜ.

ಈ ವೈರಲ್ ವಿಡಿಯೋ ನೋಡಿದಾಗ ಒಂದು ಟ್ರಕ್ ರಸ್ತೆಯ ಮೇಲಿಂದ ಸಾಗುತ್ತಿದೆ. ಟ್ರಕ್ಕಿನ ಮುಂಭಾಗದಲ್ಲಿ ಒಬ್ಬ ವ್ಯಕ್ತಿಯು ಬೈಕ್ ನಡೆಸುತ್ತಿರುವುದು ಕಂಡು ಬರುತ್ತಿದೆ. ಟ್ರಕ್ ಮತ್ತು ಬೈಕ್ ಜೋಡಿಸಿ ಒಂದು ಹೊಸದಾದ ಬೇರೆಯೇ ವಾಹನವನ್ನು ತಯಾರಿಸಿದ್ದಾರಾ ಎಂಬಂತೆ ಭಾಸವಾಗುತ್ತದೆ. ಈ ವಿಡಿಯೋವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ದೊಡ್ಡ ಟ್ರಕ್ಕಿನ ಮುಂಭಾಗ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ಜನ ಈ ರೀತಿ ರಚನೆಯ ವಾಹನದ ಕಲ್ಪನೆಯನ್ನೇ ಮಾಡಲಿಕ್ಕಿಲ್ಲ. ಆದರೆ ತುಂಬಾ ಸೂಕ್ಷ್ಮವಾಗಿ ನೋಡಿದಾಗ ಟ್ರಕ್ಕಿನ ಹಿಂಭಾಗ ಬೈಕಿಗೆ ಜೋಡಿಸಲಾಗಿದೆ. ಬೈಕ್ ನ ಸಹಾಯದಿಂದ ಟ್ರಕ್ ನ ಹಿಂಭಾಗ ಎಳೆಯಲಾಗುತ್ತಿದೆ ಎಂಬಂತೆ ಎನಿಸುತ್ತದೆ. ಆದರೆ ಟ್ರಕ್ ಮೇಲಿರುವ ಇಂಥ ಭಾರವನ್ನು ಬೈಕ್ ಹೇಗೆ ಎಳೆಯಲು ಸಾಧ್ಯ? ಎಂಬ ಪ್ರಶ್ನೆಯೂ ನಿರ್ಮಾಣವಾಗುತ್ತದೆ. ನೀವು ಒಮ್ಮೆ ಈ ವಿಡಿಯೋವನ್ನು ನೋಡಿ ಆಗಲೇ ನಿಮಗೂ ತಿಳಿಯುವದು.

https://t.co/U5DtnXQdbX

ಈಗ ನಿಮಗೂ ಈ ಪ್ರಶ್ನೆ ತಲೆ ತಿನ್ನ ತೊಡಗಿತು ಅಲ್ವಾ?

fred035schultz ಹೆಸರಿನ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ತದ ನಂತರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯಂತೆ ಸಂಚಲನ ಮೂಡಿಸಿದೆ. ಉತ್ತರ ತಿಳಿದುಕೊಳ್ಳಲು ಈ ವಿಡಿಯೋವನ್ನು ನೆಟ್ಟಿಗರು ಒಬ್ಬರಿಂದ ಒಬ್ಬರಿಗೆ ಶೇರ್ ಸಹ ಮಾಡುತ್ತಿದ್ದಾರೆ. ಹೀಗಾಗಿ ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ. ಜೊತೆಗೆ ಅನೇಕ ಕಾಮೆಂಟ್ಸ್ ಗಳನ್ನು ಸಹ ಮಾಡುತ್ತಿದ್ದಾರೆ. ಪ್ರಸ್ತುತ ವಿಡಿಯೋ ಮಾತ್ರ ಎಲ್ಲಿಯದಿದೆ ಎಂಬುದು ಗೊತ್ತಾಗಿಲ್ಲ.