Video: ಗೆದ್ದ ಖುಷಿಯಲ್ಲಿ ಬಿ#ಯರ್ ಹೀಗೂ ಸಹ ಕುಡಿಯಬಹುದು ಎಂದು ತೋರಿಸಿಕೊಟ್ಟ ಆಸ್ಟ್ರೇಲಿಯಾ ಆಟಗಾರರು! ಇನ್ಮುಂದೆ ಗ್ಲಾಸ್ ನ ಅವಶ್ಯಕತೆ ಇಲ್ಲ ಎಂದ ನೆಟ್ಟಿಗರು!
ಮೊನ್ನೆಯಷ್ಟೇ ಟಿ-20 ವಿಶ್ವಕಪ್ ಫೈನಲ್ ಪಂದ್ಯ ನಡೆಯಿತು. ಕಿವೀಸ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ ಮಣಿಸಿ ಟಿ-20 ವಿಶ್ವಕಪ್ 2021 ನ್ನು ಆಸ್ಟ್ರೇಲಿಯಾ ತನ್ನ ಮುಡಿಗೇರಿಸಿಕೊಂಡಿದೆ. ಈ ಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಕಿವೀಸ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರ 77 ರನ್ನಗಳ ಉತ್ತಮ ಆಟದ ಜೊತೆಗೆ ಆಸ್ಟ್ರೇಲಿಯಾ ತಂಡಕ್ಕೆ 173 ರನ್ನಗಳ ಟಾರ್ಗೆಟ್ ನೀಡಿತ್ತು.
ಆಸ್ಟ್ರೇಲಿಯಾ ತಂಡ ಕೇವಲ 18.5 ಓವರ್ ಗಳಲ್ಲಿ ಕಿವೀಸ್ ಕೊಟ್ಟಂತಹ ಟಾರ್ಗೆಟ್ ಪೂರ್ಣ ಮಾಡಿತು ಅಂದರೆ 173 ರನ್ನಗಳ ತಗೆಯುವ ಮೂಲಕ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಜಯ ಸಾಧಿಸಿತು. ಡೇವಿಡ್ ವಾರ್ನರ್ ಮತ್ತು ಎಮ್ ಮಾರ್ಶ್ ಅವರ ಭರ್ಜರಿ ಆಟದಿಂದ ಕಿವೀಸ್ ತಂಡ ತತ್ತರಿಸಿ ಹೋಯಿತು. ವಾರ್ನರ್ ಅವರು ಕೊನೆಯ ಪಂದ್ಯದಲ್ಲಿ 53 ರನ್ ಗಳು ತಗೆದು ತಮ್ಮ ತಂಡವನ್ನು ಗೆಲುವಿನ ಸಮೀಪ ತಗೆದುಕೊಂಡು ಹೋದರು. ಒಟ್ಟಾರೆಯಾಗಿ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಾರ್ನರ್ ಅವರಿಗೆ “ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಆವರ್ಡ್ ನೀಡಲಾಗಿದೆ.
ಆಸ್ಟ್ರೇಲಿಯಾ ತಂಡ ಫೈನಲ್ ಪಂದ್ಯ ಗೆಲ್ಲುತ್ತಿದಂತೆಯೇ ಆಟಗಾರರಲ್ಲಿ ಖುಷಿಯ ನಿರ್ಮಾಣವಾದ ಪರಿ ಹೇಳಲು ಸಾಲದು ಏಕೆಂದರೆ ಇದೆ ಮೊದಲ ಬಾರಿ ಆಸ್ಟ್ರೇಲಿಯಾ ತಂಡ ಟಿ-20 ವಿಶ್ವಕಪ್ ತನ್ನದಾಗಿಸಿ ಕೊಂಡಿದೆ ಹೀಗಾಗಿ ಅವರು ಸಂತಸ ಪಟ್ಟ ಬಗೆ ಹೇಳಲು ಸಾಲದು. ಆದರೆ ಅವರು ವಿಶ್ವಕಪ್ ಗೆದ್ದ ಖುಷಿಯಲ್ಲಿ ಡ್ರೆಸ್ಸಿಂಗ್ ರೂಮ್ ನಲ್ಲಿ ಬಿ#ಯರ್ ಕುಡಿದ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋವನ್ನು T20 World cup ಎಂಬ ಹೆಸರಿನ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ತಾವು ವಿಶ್ವಕಪ್ ಕಪ್ ಗೆದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತ ಬಿ#ಯರ್ ಕುಡಿಯುತ್ತಿರುತ್ತಾರೆ. ಅಷ್ಟರಲ್ಲಿ ಸೆಮಿಫೈನಲ್ ನಲ್ಲಿ ಕೊನೆಯ ಓವರ್ ನಲ್ಲಿ 3 ಎಸೆತಕ್ಕೆ 3 ಸಿಕ್ಸ್ ಹೊಡೆದು ಮ್ಯಾಚ್ ವಿನ್ ಮಾಡಿಸಿರುವ ಮ್ಯಾಥಿವ್ ವೆಡ್ ಅವರು ತಮ್ಮ ಬಳಿಯಲ್ಲಿದ್ದ ಬಿ#ಯರನ್ನು ಓಪನ್ ಮಾಡಿ ಅದನ್ನು ತಮ್ಮ ಶೂ ನಲ್ಲಿ ಹಾಕಿ ಕುಡಿಯುತ್ತಾರೆ.
ವಿಡಿಯೋ ನೋಡಿ
How's your Monday going? 😅#T20WorldCup pic.twitter.com/7AyODVF4HM
— T20 World Cup (@T20WorldCup) November 15, 2021
ಮ್ಯಾಥಿವ್ ವೆಡ್ ಅವರು ಬಿ#ಯರನ್ನು ಶೂನಲ್ಲಿ ಹಾಕಿ ಕುಡಿಯುವದನ್ನು ಕಂಡು ಎಲ್ಲರೂ ಸಂತಸ ಪಡುತ್ತಾರೆ ಆದರೆ ಅದನ್ನು ಕಂಡು ಮಾರ್ಕಸ್ ಸ್ಟೋಯಿನಿಸ್ ಸಹ ಅದೇ ಶೂವನ್ನು ಅವರ ಕೈಯಿಂದ ಕಸಿದುಕೊಂಡು ಅದರಲ್ಲಿ ಇವರ ಬಿ#ಯರ್ ಹಾಕಿ ತಾವು ಸಹ ಕುಡಿಯುತ್ತಾರೆ. ತದನಂತರ ಈ ಶೂ ಮ್ಯಾಥಿವ್ ವೆಡ್ ತಮ್ಮ ಕಾಲಿಗೆ ಹಾಕಿಕೊಳ್ಳುತ್ತಾರೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಗೆದ್ದ ಖುಷಿಯಲ್ಲಿ ಏನು ಮಾಡುವರು ಎಂಬುದು ಯಾರಿಗೂ ಹೇಳಲು ಸಾಧ್ಯವಿಲ್ಲ.