‘ಪುನೀತ್’ ನಮನ: ಅಪ್ಪುವಿನ ಕಿರುಚಿತ್ರ ನೋಡಿದರೆ ಕಣ್ಣೀರು ಬಾರದೆ ಇರದು! ವಿಡಿಯೋ ನೋಡಿ….

ಇಂದು ಅಪ್ಪು ನಮ್ಮನ್ನೆಲ್ಲ ಅಗಲಿ ಸುಮಾರು ದಿವಸಗಳು ಕಳೆದವು ಆದರೂ ಸಹ ಪುನೀತ್ ಅವರ ಅಗಲುವಿಕೆಯ ರೋಧನೆ ಕಡಿಮೆಯಾಗಿಲ್ಲ. ಇಂದಿಗೂ ಸಹ ಅಪ್ಪುವಿನ ಪ್ರತಿಯೊಬ್ಬ ಅಭಿಮಾನಿ ಅಪ್ಪುವಿನ ಹೆಸರು ತಗೆದರೆ ಸಾಕು ದುಃ#ಖ ಪಡುತ್ತಾನೆ. ಅಪ್ಪುವಿನ ಅಗಲುವಿಕೆಯ ದುಃ#ಖ ಇಡೀ ದೇಶಕ್ಕೆ ತಗಲಿದೆ. ಅಪ್ಪು ಅವರು ಮಾಡಿರುವ ಸಾಧನೆ ಅವರ ಸಾಮಾಜಿಕ ಕಾರ್ಯ ಇವೆಲ್ಲವುಗಳು ಅಪ್ಪುವಿನ ಶ್ರೇಷ್ಠತೆಯನ್ನು ತೋರುತ್ತಿವೆ. ಒಬ್ಬ ಸಾಮಾನ್ಯ ನಟನಾಗಿ ಇಷ್ಟೆಲ್ಲ ಕಾರ್ಯಗಳು ಮಾಡಿದ್ದಾರೆ ಎಂದರೆ ಯಾರಿಗೂ ನಂಬಿಕೆನೆ ಬರುತ್ತಿಲ್ಲ.

ಅಪ್ಪುವಿನ ಸಾಮಾಜಿಕ ಕಾರ್ಯ ಮಾಡುವ ಪರಿ ಹೇಗಿತ್ತೆಂದರೆ ಎಡಗೈಯಲ್ಲಿ ಮಾಡಿದ ಕಾರ್ಯ ಬಲಗೈಗೆ ಗೊತ್ತಾಗಬಾರರು ಅಂತಹ ಸಿದ್ಧಾಂತವನ್ನು ಹೊಂದಿದ ಅಪ್ಪು ಇಂದು ನಮ್ಮ ನಿಮ್ಮೆಲ್ಲರ ಮನದಲ್ಲಿ ಅಜರಾಮರ.
ಸಮಾಜಕ್ಕಾಗಿ ಶ್ರಮಿಸಿದ ಅಪ್ಪು ಇಂದು ನಮ್ಮಲ್ಲಿ ಇಲ್ಲ ಎಂಬ ಸಂಗತಿ ತುಂಬಾನೇ ದುಃ#ಖ ತರುತ್ತದೆ.

ರಾಜಕುಮಾರ್ ನ ಹಾಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಹಾಯ ಮಾಡಿರುವ ಅಪ್ಪು ನಾನು ಮಾಡಿದ್ದೇನೆ ಎಂದು ಎಂದೆಂದೂ ಹೇಳಿಕೊಂಡಿಲ್ಲ. ಆದರೆ ನಮ್ಮೆಲ್ಲರನ್ನು ಅಗಲಿದ ತಕ್ಷಣ ಅಪ್ಪು ಮಾಡಿರುವ ಕಾರ್ಯಗಳು ಎಲ್ಲರೆದುರಿಗೆ ಒಂದೊಂದಾಗಿ ಬರುತ್ತಿವೆ. ಅಂತಹ ನಿಷ್ಠೆಯುಳ್ಳ ನಾಯಕನ ಸಲುವಾಗಿ ಇಂದು ಕರ್ನಾಟಕ ಸರಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಕ್ಕೂಟತೆಯಿಂದ ‘ಪುನೀತ್’ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.

ಪುನೀತ್ ನಮನ್ ಕಾರ್ಯಕ್ರಮದ ಮೂಲ ಉದ್ದೇಶವೇನೆಂದರೆ ಕನ್ನಡದ ಶ್ರೇಷ್ಠ ನಟ ಪವರ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸುವದು. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ರಾಜಕೀಯ ನಾಯಕರು, ಖ್ಯಾತ ಸಿನಿಮಾ ನಟರು ಮತ್ತು ಸಾಮಾನ್ಯ ನಾಗರಿಕರು ಸಹ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಅಪ್ಪು ಅವರ ಕುರಿತು ಒಂದು ಕಿರುಚಿತ್ರಪಟವನ್ನು ನಿರ್ಮಾಣ ಮಾಡಲಾಗಿದೆ.

ಪ್ರಸ್ತುತ ಕಿರುಚಿತ್ರಪಟದಲ್ಲಿ ಅಪ್ಪು ಅವರ ಜೀವನದ ಚಿತ್ರಣವನ್ನು ಬಣ್ಣಿಸಲಾಗಿದೆ. ಅವರು ಹುಟ್ಟು, ಬಾಲ ನಟನಾಗಿ ಚಲನಚಿತ್ರಕ್ಕೆ ಪಾದಾರ್ಪಣೆ, ಬಾಲನಟ ಪ್ರಶಸ್ತಿ, ಅವರ ಶಿಕ್ಷಣ, ನಾಯಕ ನಟ ನಾಗಿ ಚಿತ್ರರಂಗಕ್ಕೆ ಎಂಟ್ರಿ, ಅವರ ಸಾಮಾಜಿಕ ಕಾರ್ಯ, ಅವರು ಮಾಡಿರುವ ಸಾಧನೆ ಇನ್ನಿತರ ಸಂಗತಿಗಳನ್ನು ಉತ್ತಮವಾಗಿ ಬಿಂಬಿಸುವ ಪ್ರಯತ್ನ ಈ ಕಿರುಚಿತ್ರಪಟದಲ್ಲಿ ಮಾಡಲಾಗಿದೆ.

ವಿಡಿಯೋ ನೋಡಿ

ಈ ಕಾರ್ಯಕ್ರಮದಲ್ಲಿ ಕಿರುಚಿತ್ರಪಟ ನೋಡುತ್ತಿದ್ದಂತೆಯೇ ಅಪ್ಪುವಿನ ಫ್ಯಾಮಿಲಿ ಮತ್ತು ಶಿವಣ್ಣ ನವರು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಈ ಕಿರುಚಿತ್ರದಲ್ಲಿ ಸುದೀಪ್ ಅವರು ಧ್ವನಿಯನ್ನು ಕೇಳಬಹುದು. ಸುದೀಪ ಅವರು ವಿವರಿಸಿದ ರೀತಿ ನೋಡಿದರೆ ನಿಮಗೂ ಸಹ ಕಣ್ಣೀರು ಬಾರದೆ ಇರದು. ಅಪ್ಪು ಅವರ ಜೀವನದ ಕುರಿತು ಎಷ್ಟೋ ಹೇಳಿದರು ಸಾಲದು. ಅಪ್ಪು ಎಂದೆಂದೂ ಅಜರಾಮರ.