ಹೊಟ್ಟೆಯಲ್ಲಿ ನೋವು ಎಂದು ಅಡ್ಮಿಟ್ ಆದ ತರುಣನ ರಿಪೋರ್ಟ್ ನೋಡಿ ಬೆಚ್ಚಿ ಬಿದ್ದ ಡಾಕ್ಟರ್!

ಚೆನ್ನೈ:- ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿ ಒಂದು ವಿಚಿತ್ರವಾದ ಘಟನೆ ಸಂಭವಸಿದೆ. ಜಿಲ್ಹಾ ಆಸ್ಪತ್ರೆಯಲ್ಲಿ ಡಾಕ್ಟರ್ ರು ಒಬ್ಬ ಯುವಕನ ಶಸ್ತ್ರಕ್ರಿಯೆ ಮಾಡಿದ ನಂತರ ಡಾಕ್ಟರ್ ಸಹ ದಂಗಾಗಿದ್ದಾರೆ.

ನಡೆದ ಘಟನೆ ಏನೆಂದರೆ ಒಬ್ಬ ಯುವಕನು ಹೊಟ್ಟೆಯಲ್ಲಿ ತುಂಬಾ ನೋವಾಗುತ್ತಿರುವದರಿಂದ ಆತನು ನಾಗಪಟ್ಟಿನಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದನು. ಆತನ ಪ್ರಾಥಮಿಕ ತಪಾಸಣೆ ಮಾಡಿದಾಗ ಅಲ್ಲಿದ್ದ ವೈದ್ಯರು ಹೊಟ್ಟೆಯಲ್ಲಿ ಏನೋ ಇದ್ದಿರಬಹುದು ಎಂದು ಯುವಕನಿಗೆ ತಿಳಿಸಿದರು. ತದನಂತರ ಡಾಕ್ಟರ್ ಆತನನ್ನು ಸಿಟಿ ಸ್ಕ್ಯಾನಿಂಗ್ ಮಾಡಿಕೊಳ್ಳಲು ತಿಳಿಸಿದರು. ಸ್ಕ್ಯಾನಿಂಗ್ ಮಾಡಿದ ಮೇಲೆ ಬಂದ ರಿಪೋರ್ಟ್ ನೋಡಿ ಡಾಕ್ಟರ್ ಸಹ ಆಶ್ಚರ್ಯಗೊಂಡರು. ಏಕೆಂದರೆ ರಿಪೋರ್ಟ್ ನಲ್ಲಿ ಯುವಕನ ಹೊಟ್ಟೆಯಲ್ಲಿ ಗಾಜಿನ ಬಾಟಲಿ ಇದೆಯಂದು ತಿಳಿದು ಬಂದಿತು.

ಮರುದಿನ ಆ ಯುವಕನ ಮೇಲೆ ಸುಮಾರು 2 ಗಂಟೆಯ ವರೆಗೆ ಚಿಕಿತ್ಸೆ ನಡೆಸಿ ಅವನ ಹೊಟ್ಟೆಯಲ್ಲಿದ್ದ ಗಾಜಿನ ಬಾಟಲಿಯನ್ನು ಹೊರಗಡೆ ತಗೆದರು. ಈ ವಿಚಿತ್ರ ಘಟನೆಯ ಬಗ್ಗೆ ಅಂದರೆ ಹೊಟ್ಟೆಯಲ್ಲಿ ಗಾಜಿನ ಬಾಟಲ್ ಹೇಗೆ ಬಂತು ಅಂತ ಯುವಕನನ್ನು ಕೇಳಿದಾಗ, ” ಮದ್ಯದ ಅಮಲಿನಲ್ಲಿದ್ದಾಗ ನನ್ನ ಗುದದ್ವಾರದ ಮುಖಾಂತರ ನಾನು ಈ ಬಾಟಲಿಯನ್ನು ಒಳಗೆ ಹಾಕಿಕೊಂಡಿದ್ದೇನೆ ” ಎಂದು ಹೇಳಿದನು. ಇದನ್ನು ಕೇಳಿ ಡಾಕ್ಟರ್ ಸಹ ನಿಬ್ಬೆರಗಾದರು.

ತಮಿಳುನಾಡಿನಲ್ಲಿಯ ಈ ಘಟನೆ ಲಾಕ್ಡೌನ್ ಪ್ರಾರಂಭವಾಗಿ ಅದನ್ನು ಕೆಲವು ಮಟ್ಟಿಗೆ ತಗೆದು ಹಾಕುವ ಸಂದರ್ಭದಲ್ಲಿ ಕಂಡು ಬಂದಿದೆ. ಲಾಕ್ಡೌನ್ ನಲ್ಲಿ ಮದ್ಯದ ಅಂಗಡಿ ಬಂದ್ ಮಾಡಿದ್ದರು. ಆದ್ರೆ ನಂತರದ ಹಂತದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಮತ್ತು ಕೋರೊನಾ ಪ್ರೊಟೊಕಾಲ್ ಮಾರ್ಗದರ್ಶನದ ಸೂಚಿಯ ಅನುಸಾರ ಮದ್ಯದ ಅಂಗಡಿಗಳು ಪ್ರಾರಂಭ ಮಾಡಿದರು.

ಲಾಕ್ಡೌನ್ ನಲ್ಲಿ ಮದ್ಯದ ಅಂಗಡಿಗಳಿಗೆ ಮಾರಾಟ ಮಾಡಲು ಮಾನ್ಯತೆ ನೀಡಿದಾಗ ಆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲದೆ ಇದರಿಂದ ಸಾಮಾಜಿಕ ಅಂತರ ಕೂಡಾ ಪಾಲಿಸಲು ಸಾಧ್ಯವಿಲ್ಲ ಆದರೂ ಸಹ ಸರ್ಕಾರದ ಕಡೆಯಿಂದ ಮಧ್ಯ ಮಾರಾಟ ಮಾಡಲು ಅನುಮತಿ ದೊರಕಿದೆ.