750 ml ನೀರಿನ ಬೆಲೆ 44 ಲಕ್ಷ ₹ ಗಳು! ಇಷ್ಟೊಂದು ಬೆಲೆಬಾಳುವ ನೀರನ್ನು ಕುಡಿಯುವ ವ್ಯಕ್ತಿ ಯಾರು ಗೊತ್ತಾ? ನೀವೇ ನೋಡಿ.
ನೀರು ನಿಜಕ್ಕೂ ಜೀವನವಾಗಿದೆ. ನೀರು ಇಡೀ ಪ್ರಾಣಿ ಸಂಕುಲಕ್ಕೆ ವರದಾನವಾಗಿದೆ. ನೀರಿನಿಂದಲೇ ಬದುಕು. ಆದ್ದರಿಂದಲೇ ನೀರಿಗೆ ಜೀವನವೆನ್ನುತ್ತಾರೆ.
ಭಾರತದ ದೊಡ್ಡ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಯವರು ದಿನಂಪ್ರತಿ ಕುಡಿಯುವ ನೀರಿನ ಬೆಲೆ ಕೇಳಿದರೆ ನಮ್ಮಂಥ ಜನಸಾಮಾನ್ಯರಿಗೆ ತಲೆ ಸುತ್ತಿ ಬರುತ್ತದೆ.
ನೀತಾ ಅಂಬಾನಿಯವರು ಕುಡಿಯುವ ನೀರು ಭಾರತದಲ್ಲಿ ಎಲ್ಲಿಯೂ ತಯಾರಾಗುವದಿಲ್ಲ. ಆವರು ಕುಡಿಯುವ ನೀರು ವಿದೇಶದಿಂದ ಬರುತ್ತದೆ. ನಿನ್ನೆ ಮೊನ್ನೆಯವರೆಗೆ ನಾವು ಕುಡಿಯುವ ಬಿಸ್ಲೇರಿ ಮತ್ತು ಎಕ್ವಾಗಾರ್ಡ್ ನೀರು ಒಳ್ಳೆಯ ಗುಣಮಟ್ಟದ ನೀರು ಎಂದು ತಿಳಿದುಕೊಂಡಿದ್ದೇವು. ಆದರೆ ದೊಡ್ಡ ಜನ ದೊಡ್ಡ ಮಾತು ಅಂದ ಹಾಗೆ ಇವರು ಕುಡಿಯುವ ನೀರಿನ ಬೆಲೆಯ ಲೆಕ್ಕ ಹಾಕುವದೇ ತಪ್ಪು. ಯಾಕೆಂದರೆ ಜನಸಾಮಾನ್ಯರಿಗೆ ಆ ಲೆಕ್ಕ ತಲೆಗೆ ಹತ್ತುವುದಿಲ್ಲ. ನಂತರ ಸೆಲೆಬ್ರಿಟಿಗಳು ಬ್ಲ್ಯಾಕ್ ವಾಟರ್ ಕುಡಿಯಲು ಶುರು ಮಾಡಿದಾಗ ಇದೇ ನೀರು ಎಲ್ಲಕ್ಕೂ ದುಬಾರಿ ಹಾಗೂ ಒಳ್ಳೆಯದಿರಬೇಕು ಎಂದು ತಿಳಿದೆವು. ಆದರೆ ಅದು ಸಹ ಸುಳ್ಳಾಯಿತು. ಯಾಕೆಂದರೆ ನೀತಾ ಅಂಬಾನಿಯವರು ಕುಡಿಯುವ ನೀರಿನ ಬೆಲೆ ಸಾವಿರ ರೂಪಾಯಿಗಳಲ್ಲಿ ಅಲ್ಲ ಲಕ್ಷಾವಧಿ ರೂಪಾಯಿಗಳಲ್ಲಿ ಇದೆ.

ನೀತಾ ಅಂಬಾನಿಯವರ ದೊಡ್ಡ ದೊಡ್ಡ ಹವ್ಯಾಸಗಳು ಮೀಡಿಯಾದಲ್ಲಿ ಯಾವತ್ತೂ ಸುದ್ದಿ ಮಾಡುತ್ತಾ ಇರುತ್ತವೆ. ಅವರಿಗೆ ಬೆಲೆ ಬಾಳುವ ದುಬಾರಿ ಒಡವೆ ವಸ್ತ್ರಗಳನ್ನು ಖರೀದಿಸುವ ಹವ್ಯಾಸ ತುಂಬಾ ಇದೆ. ಹೀಗಾಗಿ ಅವರು ಎಲ್ಲೆ ಹೋಗಿ ಏನೇ ಖರೀದಿ ಮಾಡಿದರೆ ಸಾಕು ಅವು ದೊಡ್ಡ ಸುದ್ದಿಗಳಾಗಿ ಬಿಡುತ್ತವೆ. ಸದ್ಯ ಈಗ ಅವರು ದಿನಂಪ್ರತಿ ಕುಡಿಯುವ ನೀರಿನ ಬಗ್ಗೆ ಚರ್ಚೆ ಶುರುವಾಗಿದೆ. ನೀತಾ ಅವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಹೀಗಾಗಿ ತಮ್ಮ ಆರೋಗ್ಯಕ್ಕಾಗಿ ಪ್ರತಿಯೊಂದು ರೀತಿಯ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಆರೋಗ್ಯ ಚೆನ್ನಾಗಿರುವ ಸಲುವಾಗಿ ಅವರು ಕುಡಿಯುವ ನೀರಿನ ಬೆಲೆ 44 ಲಕ್ಷ ರೂಪಾಯಿ. ಅದು ಬರೀ 750ml ಮಾತ್ರ.

ನೀತಾ ಅಂಬಾನಿಯವರು ತಮಗಾಗಿ ‘ಎಕ್ವಾ ಕ್ರಿಸ್ಟಾಲೋ ಟ್ರಿಬೇಟೋ’ ಕಂಪನಿಯ ನೀರನ್ನು ತರಿಸಿಕೊಳ್ಳುತ್ತಾರೆ. ಈ ನೀರು ಭಾರತದಲ್ಲಿ ಎಲ್ಲಿಯೂ ತಯಾರಾಗುವುದಿಲ್ಲ. ಹೀಗಾಗಿ ಈ ನೀರು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಬ್ಲಾಕ್ ವಾಟರ್ ಗಿಂತಲೂ ತುಂಬಾ ದುಬಾರಿಯಾಗಿದೆ. ಈ ನೀರಿನಲ್ಲಿ ಚಿನ್ನದ ಅಂಶವಿರುತ್ತದೆ ಎಂದು ಹೇಳಲಾಗುತ್ತದೆ. ಚಿನ್ನದ ಅಂಶದಿಂದ ಕೂಡಿದ ನೀರು ಹೊಟ್ಟೆಯಲ್ಲಿ ಹೋಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇವರಿಗಾಗಿ ಬರುವ ನೀರಿನ ಬಾಟಲ್ ಸಂಪೂರ್ಣ ಚಿನ್ನದಿಂದ ಕೂಡಿದ ಆವರಣವಾಗಿರುತ್ತದೆ. ಅಷ್ಟೇ ಅಲ್ಲ ಆರೋಗ್ಯಕ್ಕೆ ಲಾಭ ನೀಡುವ ವಿವಿಧ ರತ್ನಗಳನ್ನು ಸಹಿತ ಆ ಬಾಟಲ್ ಗೆ ಹಚ್ಚಲಾಗಿದೆ ಎಂದು ಒಂದು ಮೀಡಿಯಾ ರಿಪೋರ್ಟ್ ನಲ್ಲಿ ವರದಿಯಾಗಿದೆ.