IND vs NZ 1st T20: ತಂಡದ ನಾಯಕ ಬದಲಾಗುತ್ತಿದ್ದಂತೆಯೇ ಭುವಿಯ ಅದೃಷ್ಟ ಬದಲಾಯಿತು, ಪಂದ್ಯದ ಮೂರನೇ ಎಸೆತದಲ್ಲಿ ಮ್ಯಾಜಿಕ್ ತೋರಿದ ಭುವಿ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20 ಪಂದ್ಯದೊಂದಿಗೆ ಟೀಮ್ ಇಂಡಿಯಾದ ಹೊಸ ಋತುವು ಪ್ರಾರಂಭವಾಗಿದೆ. ರೋಹಿತ್ ಶರ್ಮಾ ಟಿ20 ತಂಡದ ಪೂರ್ಣಾವಧಿ ನಾಯಕರಾಗಿ ಆಯ್ಕೆಯಾಗಿದ್ದು, ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾರೆ. ಟಿ20 ವಿಶ್ವಕಪ್ಗೂ ಮುನ್ನ ವಿರಾಟ್ ಕೊಹ್ಲಿ ಈ ಮಾದರಿಯ ನಾಯಕತ್ವವನ್ನು ತ್ಯಜಿಸುವುದಾಗಿ ಹೇಳಿದ್ದರು. ಇದರ ನಂತರ, ನ್ಯೂಜಿಲೆಂಡ್ ವಿರುದ್ಧದ ಮೂರು ಟಿ- 20 ಸರಣಿಗಳಲ್ಲಿ ವಿರಾಟ್ಗೆ ವಿಶ್ರಾಂತಿ ನೀಡಲಾಗಿದೆ.
ವಿರಾಟ್ ಕೊಹ್ಲಿ ಅವರಿಂದ ಟೀಮ್ ಇಂಡಿಯಾದ ಸಾರಥ್ಯವನ್ನು ರೋಹಿತ್ ಶರ್ಮಾ ವಹಿಸಿಕೊಂಡ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಅದೃಷ್ಟ ಬದಲಾಗಿದೆ. ಪಂದ್ಯದ ಮೂರನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಅಪಾ#ಯಕಾರಿ ಡ್ಯಾರೆಲ್ ಮಿಚೆಲ್ ಅವರನ್ನು ಬೌಲ್ಡ್ ಮಾಡಿದರು. ಇದಕ್ಕೂ ಮುನ್ನ ಭುವನೇಶ್ವರ್ ಕುಮಾರ್ ಅವರಿಗೆ ಐಪಿಎಲ್ ಮತ್ತು ಟಿ20 ವಿಶ್ವಕಪ್ನಲ್ಲಿ ತುಂಬಾ ಸಂಘರ್ಷ ಮಾಡಬೇಕಾಯಿತು. ಕಳಪೆ ಪ್ರದರ್ಶನದ ಕಾರಣ, ಟಿ- 20 ವಿಶ್ವಕಪ್ನ ಆರಂಭಿಕ ಪಂದ್ಯದ ನಂತರ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈಬಿಡಲಾಯಿತು. ಅಷ್ಟೇ ಅಲ್ಲ, ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಗೆ ಅವರ ಆಯ್ಕೆಯ ಕುರಿತು ಪ್ರಶ್ನೆ ನಿರ್ಮಾಣವಾಗಿತ್ತು, ಆದರೆ ಮೊದಲ ಓವರ್ನಲ್ಲಿ ಭುವಿ ತಮ್ಮ ಆಯ್ಕೆಯನ್ನು ಯೋಗ್ಯವಾಗಿದೆ ಎಂದು ತೋರಿಸಿಕೊಟ್ಟರು.
Bhuvneshwar Kumar giving 2016-2017 vibes🥰#INDvNZ
— Lucky❤️✨ (@LBerojya) November 17, 2021
pic.twitter.com/885kfsQnEg
ಇಂಗ್ಲೆಂಡ್ ವಿರುದ್ಧದ ಟಿ-20 ಸೆಮಿಫೈನಲ್ ಪಂದ್ಯದಲ್ಲಿ ಅಜೇಯ 72 ರನ್ ಗಳಿಸಿ ನ್ಯೂಜಿಲೆಂಡ್ ತಂಡವನ್ನು ಫೈನಲ್ ಗೆ ತಲುಪಿಸಿದ್ದ ಡ್ಯಾರೆಲ್ ಮಿಚೆಲ್ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದ ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ವಿಶ್ವಕಪ್ ಸೆಮಿಫೈನಲ್ನಲ್ಲಿ 47 ಎಸೆತಗಳಲ್ಲಿ ಅಜೇಯ 72 ರನ್ ಗಳಿಸುವ ಮೂಲಕ ಮಿಚೆಲ್ ನ್ಯೂಜಿಲೆಂಡ್ಗೆ ಐತಿಹಾಸಿಕ ವಿಜಯವನ್ನು ತಂದುಕೊಟ್ಟರು. ಮಿಚೆಲ್ ಅವರ ಪ್ರದರ್ಶನವು T20 ವಿಶ್ವಕಪ್ನ ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ಗೆ ಸಹಾಯ ಮಾಡಿತು, ಆದರೆ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು.